top of page
IMG_7077.PNG

Aaseya Kannile Nodbyada Nanna

ಗಂಡು:-ನಾ ಮರೆತಿಲ್ಲ ನಿನ್ನ ಹಳ್ಳಿ. 

ಅಂತ್ಹೇಳಿ ಬರದಂಗ ಹ್ಯಾದಿಹೊಳ್ಳಿ.||

ನನ್ನ ಬಾಳಿನ ತಂಗಾಳಿ.||

ಈ ಬಾಳಿಗೆ ತಂದೇಲ್ಲ ಬಿರುಗಾಳಿ.

ಗೆಳತಿ ತಂದೇಲ್ಲ ಬಿರುಗಾಳಿ.

ಹೆಣ್ಣು:-ಹಾಳ ಮಾಡ್ಯಾರ ನಿನ್ನ ಹಳ್ಳಿ. 

ಇದು ಐತಿ ಹಿರಿಯರ ಹಳಿ ಚಾಳಿ.||

ತಾಳಿ ತಂದೈತಿ ಬಿರುಗಾಳಿ.||

ನಾನು ಹೊಂಟೆ ಬರದಂಗ ಹೋಳ್ಳಿ.

ಗೆಳೆಯಹೊಂಟೆ ಬರದಂಗ ಹೋಳ್ಳಿ.

ಗಂಡು:- ಹೊಳ್ಳಿ ಬರದಂಗ ಹ್ಯಾದೀ ಮಳ್ಳಿ.//ಪಲ್ಲವಿ//




ಗಂಡು:-ಆಸೆಯಗಣಿಲೆ ನೋಡೋಬ್ಯಾಡ ನನ್ನ. 

ಬರಿ ಮೋಡ ಇದ್ದಂಗ ನಿನ್ನ ಕಣ್ಣ.||

ಮಳಿಯಂತೂ ಸುರೀಲಿಲ್ಲ ಹೊಳಿಯಂತೂ ಹರಿಲಿಲ್ಲ. 

ಮರುಭೂಮಿ ಪಾಡಾತು ನನ್ನದೆಲ್ಲ. 

ಎರಡು ಮನಸಿನ ಮ್ಯಾಲ ದಾಳಿ. 

ಮಾಡಿದೆ ಜಾತಿ ಅನ್ನುವ ಗೂಳಿ.

ಹೊಳ್ಳಿ ಬರದಂಗ ಹ್ಯಾದೀ ಮಳ್ಳಿ.//ಚರಣ ೧//




ಹೆಣ್ಣು:-ಹಾಳೂರ ಹಾದ್ಯಾಗ ಹಾಡಿದ ಪದಗಳಿಗೆ ಬೆಲೆ ಹ್ಯಾಂಗ ಸಿಗಬೇಕು ಹೇಳ.||

ಹಾಳಾತು ನಮ್ಮ ಬಾಳ ಸಾಕಾತು ಈ ಗೋಳ. 

ತಳಮಳ ತಡೆಯುವುದು ಹೇಗೆ ಹೇಳು. 

ನಮಗಿಲ್ಲ ಅನ್ನೋದ ನಾಳಿ. 

ಬಿಸಿ ಬಡದೈತಿ ಬಿರುಗಾಳಿ. 

ಹೆಣ್ಣು:-ಹಾಳ ಮಾಡ್ಯಾರ ನಿನ್ನ ಹಳ್ಳಿ.//ಚರಣ ೨//




ಗಂಡು:-ಹನುಮನ ಜಾತ್ರೆ ಬಂದರ ಓಕಳಿ. 

ಬಾಳ ಆಗೋದು ಹಳಹಳ್ಳಿ.||

ನೋಡಿದರೆ ನಿನ್ನ ತಾಳಿ ಬಣ್ಣದ ಆ ಟಿಕಳಿ.

ನಿನ್ನ ಮಾರಿ ಒಂದು ಹೂವಿನ ಪಕಳಿ.

ಗೆಳತಿ ಸಾಕಾತು ತಿಳಿ ಹೇಳಿ.

ಮನಸಿನ್ನು ಐತಿ ಬಿಳಿಯ ಹಾಳಿ.//ಚರಣ ೩//

bottom of page