Adadda Enanta Vadadhela

ಗಂಡು:-ಬಡದಿ ಮುಳ್ಳ ಬಡದಿ..||ಪಂಚಕದಾಗ ಸತ್ತರೂ ಮುಳ್ಳ ಬಡದಂಗ. ಮನಸಿನ ಮನೆ ಬಾಗಿಲಿಗೆ ಮುಳ್ಳ ಬಡದಂಗ. ಗೆಳತಿ ಮಾಡಿದಿ ಯಾಕಿಂಗ.
ಗೆಳತಿ... ಮಾಡಿದಿ ಯಾಕಿಂಗ.
ಹೆಣ್ಣು:-ಬಡದಿಲ್ಲೋ ಮುಳ್ಳ ಬಡದಿಲ್ಲೋ || ತುಂಬಿದ ಮನಸ್ಸಿನ ಮನಿಗೆ ಮುಳ್ಳ ಬಡದಿಲ್ಲೋ.
ನೀ ಆಡುವ ಚುಚ್ಚು ಮಾತಿನ ಹೊಡೆತಾ ತಡಿದುಲ್ಲೋ. ಗೆಳೆಯ ನಾ ಬದುಕುದುಲ್ಲೋ.
ಗೆಳೆಯ.... ನಾ ಬದುಕುದುಲ್ಲೋ.//ಪಲ್ಲವಿ//
ಗಂಡು:-ನನ ಮನಿಗ್ಯಾಕ ಬರವಲ್ಲಿ. ಮೊದಲಿನಂಗ ಯಾಕ ನಗವಲ್ಲಿ. ಕರದಲ್ಲಿ ಗೆಳತಿ ನೀ. ಯಾಕ ಸಿಗವಲ್ಲಿ||
ಹೆಣ್ಣು:-ನಿನ್ನ ಮನಿ ಹಾದಿಯ ಮರೆತಿಲ್ಲೋ. ಮರತ ಮರುಗಳಿಗೆ ಉಳಿದೊಲ್ಲೋ. ಕದ್ದ ಮುಚ್ಚಿ ಆಡಿದಾಟಾ ಕಾಡದೇ ಬಿಡುದುಲ್ಲೋ.
ಗಂಡು:-ಕಾಡು ದೇವರ ಕಾಟ ಮಾಡಬ್ಯಾಡ ಕಳೆದಾಂಗ.. ಹೊ... ಗೆಳತಿ ಮಾಡಿದೀ ಯಾಕಿಂಗ||
ಹೆಣ್ಣು:-ಬಡದಿಲ್ಲೋ ಮುಳ್ಳ ಬಡದಿಲ್ಲೋ || //ಚರಣ ೨//
ಗಂಡು:-ನೋಡು ನೋಡದಂಗ ಹೊಂಟಿದಿ ತಡೆದ ನಿಲ್ಲಿಸಿದಾಗ ನಿಂತದಿ. ಬ್ಯಾಡಾಗಿ ಹೋದಮ್ಯಾಲ. ಮತ್ಯಾಕ ಅಳತಿದಿ....||
ಹೆಣ್ಣು:-ಏನಂತಿದಿ ಅಂದು ಹೋಗೋ. ಒಂದೆರಡು ಪೇಟ ಬಡದ್ಹೋಗೋ. ನನ್ನ ಮ್ಯಾಲ ಸಿಟ್ಟ ಇದ್ರ ಇಲ್ಲೇ ಕೊಂದು ಹೋಗೋ .
ಗಂಡು:-ನಿನ್ನ ಕೊಂದ ನಾನೇನ ಸಾಧಿಸಲೇಳ..
ಗೆಳತಿ ಮಾತಾಡಬ್ಯಾಡಿಂಗ..
ಗೆಳತಿ..... ಮಾತಾಡಬ್ಯಾಡಿಂಗ..
ಹೆಣ್ಣು:-ಬಡದಿಲ್ಲೋ ಮುಳ್ಳ ಬಡದಿಲ್ಲೋ//ಚರಣ ೩//
ಗಂಡು:-ಆದದ್ದೆನಂತ ಒಡದೇಳ ಚಿಂತ್ಯಾಗ ತಿಂದಿಲ್ಲ ಒಂದಗಳ. ನಿನಗೇನ ಗೊತ್ತ ಗೆಳತಿ ನನ್ನ ತಳಮಳ....
ನನ್ನ ತಳಮಳ.
ಹೆಣ್ಣು:-ನನ್ನ ಹಾದಿ ತಡದ ನಿಂತ ಬರಬ್ಯಾಡ ನಮ್ಮ ಮನಿ ಕಡೆಗಂತ. ತಾಕಿತ ಮಾಡ್ಯಾನ ನಿಮ್ಮಪ್ಪ ಕುಂತ.
ಗಂಡು:-ಹಠ್ಯಾಗ ಇಂಥ ಬೆಂಕಿ ಇಟಕೊಂಡಿ ಅಂತ..
ಗೆಳತಿ ಗೊತ್ತಾತು ಈಗ..|| //ಚರಣ ೪//
ಹೆಣ್ಣು:-ಬಡದಿಲ್ಲೋ ಮುಳ್ಳ ಬಡದಿಲ್ಲೋ || ತುಂಬಿದ ಮನಸ್ಸಿನ ಮನಿಗೆ ಮುಳ್ಳ ಬಡದಿಲ್ಲೋ.
ನೀ ಆಡುವ ಚುಚ್ಚು ಮಾತಿನ ಹೊಡೆತಾ ತಡಿದುಲ್ಲೋ. ಗೆಳೆಯ ನಾ ಬದುಕುದುಲ್ಲೋ.
ಗೆಳೆಯ.... ನಾ ಬದುಕುದುಲ್ಲೋ.
ಗಂಡು:-ಬಡದಿ ಮುಳ್ಳ ಬಡದಿ..||ಪಂಚಕದಾಗ ಸತ್ತರೂ ಮುಳ್ಳ ಬಡದಂಗ. ಮನಸಿನ ಮನೆ ಬಾಗಿಲಿಗೆ ಮುಳ್ಳ ಬಡದಂಗ. ಗೆಳತಿ ಮಾಡಿದಿ ಯಾಕಿಂಗ.
ಗೆಳತಿ... ಮಾಡಿದಿ ಯಾಕಿಂಗ.