top of page
IMG_7077.PNG

Akkana Magala Sakata Ninna Gola

ಗಂಡು:-ಅಕ್ಕನ ಮಗಳ ಸಾಕಾತ  ನಿನ್ನ ಗೋಳ ಏನರ ಅನುದೊಮ್ಮೆ ಹೇಳ.

ಹೆಣ್ಣು:-ಖಾಲಿ ಐತಿ ಕುಳ್ಳ ಹಿಡಿಯತೇನ ಬಳ್ಳ

ಸುರಗಿಯ ಸುತ್ತೋ ಮಾವ ಸರಳ. 

ಗಂಡು:-ದೂರ ಸರಿಯ ಸ್ವಾಧರ ಸೊಸಿಯ.

ಹೆಣ್ಣು:-ಸ್ವಾಧರ ಮಾವ ಕೈ ಹಿಡಿಯ.

ಗಂಡು:-ಹೇ...ಅಕ್ಕನ ಮಗಳ ಸಾಕಾತ  ನಿನ್ನ ಗೋಳ ಏನರ ಅನುದೊಮ್ಮೆ ಹೇಳ.//ಪಲ್ಲವಿ//



ಗಂಡು:-ಸುಳ್ಳ ಸುಳ್ಳ ಕಾಡತಿ ಸನ್ನಿ ಎಷ್ಟ ಮಾಡತಿ ಎಷ್ಟರ ನೀ ಮೂಗ ಮುರಿತಿ.

ಹೆಣ್ಣು:-ಹದಿನಾರು ತುಂಬೈತಿ ಮನಸು ಹಳ್ಳ ಜಿಗದೈತಿ ಹರೆಯದ ಕೋಳಿ ಕೂಗೈತಿ.

ಗಂಡು:-ಓ.. ಹಂಗಾದ್ರ ಬೆಳಕಾ ಆಗಿ ಹೋಗತೈತಿ.

ಹೆಣ್ಣು:-ಖಾಲಿ ಐತಿ ಕುಳ್ಳ ಹಿಡಿಯತೇನ ಬಳ್ಳ

ಸುರಗಿಯ ಸುತ್ತೋ ಮಾವ ಸರಳ. //ಚರಣ ೧//



ಹೆಣ್ಣು:-ಸ್ವಾಧರ ಮಾವಾ ನೀ ಸ್ವಾಧರ ಸೊಸಿನಾ ನಿನ್ನ ಮನಿ ತುಂಬಿಕೋ ನನ್ನ.

ಗಂಡು:-ಹಾ...ಗಗರ್ಯಾಗ ಗುಗ್ಗುರಿ ಹಾಕಿ ತಿನ್ನುವ ವಯಸ್ಸಾ ವಯಸ್ಸ ಮೀರಿ ಮಾಡಬ್ಯಾಡ ಕೆಲಸಾ. ಹುಚ್ಚಿ. 

ಹೆಣ್ಣು:ಓ...ಬದಲಿಸಲ್ಯಾಂಗ ಮಾವಾ ಈ ನನ್ನ ಮನಸಾ.//ಚರಣ ೨//



ಗಂಡು:- ಏ...ಅಕ್ಕನ ಮಗಳ ಸಾಕಾತ  ನಿನ್ನ ಗೋಳ ಏನರ ಅನುದೊಮ್ಮೆ ಹೇಳ ಹೇಳ.

ಹೆಣ್ಣು:-ಖಾಲಿ ಐತಿ ಕುಳ್ಳ ಹಿಡಿಯತೇನ ಬಳ್ಳ

ಸುರಗಿಯ ಸುತ್ತೋ ಮಾವ ಸರಳ. 

ಗಂಡು:-ಏ..ದೂರ ಸರಿಯ ಸ್ವಾಧರ ಸೊಸಿಯ.

ಹೆಣ್ಣು:-ಸ್ವಾಧರ ಮಾವ ಕೈ ಹಿಡಿಯ.//ಪಲ್ಲವಿ//

bottom of page