Amasigi Agappa Bhetti

ಗಾಯಕರು:-ಅಮಾಸಿಗೆ ಆಗಪ್ಪ ನೀ ಬೆಟ್ಟಿ ಗುರು ಅದಾನ ಗಟ್ಟಿ.
ಅಮಾಸಿಗೆ ಆಗಪ್ಪ ನೀ ಬೆಟ್ಟಿ.
ಸಂಘಡಿಗರು:-ಅಮಾಸಿಗೆ ಆಗಪ್ಪ ನೀ ಬೆಟ್ಟಿ ಗುರು ಅದಾನ ಗಟ್ಟಿ.
ಅಮಾಸಿಗೆ ಆಗಪ್ಪ ನೀ ಬೆಟ್ಟಿ.//ಪಲ್ಲವಿ//
ಗಾಯಕರು:-ಸಿದ್ದರಾಮರು ನೆಲಸಿಹರಿಲ್ಲಿ ನೀ ನೋಡು ಅನುಭವ ಮಂಟಪದಲ್ಲಿ.||2||
ಭಕ್ತಿಯ ಸಾಗರ ಹರಿಯುವುದಿಲ್ಲಿ.||2||
ಶರಣಾಗಿ ನೋಡು ನೀ ಗುರುವಲ್ಲಿ.
ಅಮಾಸಿಗೆ ಆಗಪ್ಪ ನೀ ಬೆಟ್ಟಿ ಗುರು ಅದಾನ ಗಟ್ಟಿ.
ಅಮಾಸಿಗೆ ಆಗಪ್ಪ ನೀ ಬೆಟ್ಟಿ.//ಚರಣ ೧//
ಸಂಘಡಿಗರು:-ಅಮಾಸಿಗೆ ಆಗಪ್ಪ ನೀ ಬೆಟ್ಟಿ ಗುರು ಅದಾನ ಗಟ್ಟಿ.
ಅಮಾಸಿಗೆ ಆಗಪ್ಪ ನೀ ಬೆಟ್ಟಿ.
ಗಾಯಕ:-ಎಂಟು ವರ್ಷದ ಮಗನ ಕಳಕೊಂಡ ಹೆತ್ತವ್ವ ಅಳುತಿದ್ಲು ಎದೆ ಬಡಕೊಂಡ.||2||
ಹೋದದ್ದ ಜೀವ ಹೊಳಿ ತಂದಾನ. ಯಮನಿಗೆ ಬರಿಗೈಲಿ ಹೊಳ್ಳಿ ಕಳಿಶ್ಯಾನ.
ನಿಮ ಕಷ್ಟ ಇವನಿಗೆ ಬಾಳಂತಿ ಏನ.
ಅಮಾಸಿಗೆ ಆಗಪ್ಪ ನೀ ಬೆಟ್ಟಿ ಗುರು ಅದಾನ ಗಟ್ಟಿ.
ಅಮಾಸಿಗೆ ಆಗಪ್ಪ ನೀ ಬೆಟ್ಟಿ.//ಚರಣ ೨//
ಸಂಘಡಿಗರು:-ಅಮಾಸಿಗೆ ಆಗಪ್ಪ ನೀ ಬೆಟ್ಟಿ ಗುರು ಅದಾನ ಗಟ್ಟಿ.
ಅಮಾಸಿಗೆ ಆಗಪ್ಪ ನೀ ಬೆಟ್ಟಿ.
ಗಾಯಕ:-ಕುಬೇರ ಗ್ರಾಮದ ಭಕ್ತರ ಭಕ್ತಿಗೆ ತಾವಲಿದು ವರವ ಇವ ನೀಡ್ಯಾನ||2||
ಕಣ್ಣಿಲ್ಲದ ಬಾಲೆಗೆ ಕಂಗಳ ಕೊಟ್ಟು||2||
ಕಣ್ಮುಂದ ನಿಂತು ಇವ ನಕ್ಕಾನ.
ಅಮಾಸಿಗೆ ಆಗಪ್ಪ ನೀ ಬೆಟ್ಟಿ ಗುರು ಅದಾನ ಗಟ್ಟಿ.
ಅಮಾಸಿಗೆ ಆಗಪ್ಪ ನೀ ಬೆಟ್ಟಿ.//ಚರಣ ೩//
ಗಾಯಕ:-ಭಕ್ತರು ತರತರ ಕಷ್ಟದ ಬುತ್ತಿ||2||
ಬಿಟ್ಟು ಹೋಗತಾರ ಪಾದವ ಮುಟ್ಟಿ.
ಸುಡತಾನ ಗುರು ಅದನ ಅಗ್ನಿಯ ದಾಟಿ||2||
ಗುರುವಿಗೆ ಬೇರಾರು ಇಲ್ಲವ್ವ ಸಾಟಿ.
ಅಮಾಸಿಗೆ ಆಗಪ್ಪ ನೀ ಬೆಟ್ಟಿ ಗುರು ಅದಾನ ಗಟ್ಟಿ.
ಅಮಾಸಿಗೆ ಆಗಪ್ಪ ನೀ ಬೆಟ್ಟಿ||2||
ಸಂಘಡಿಗರು:-ಅಮಾಸಿಗೆ ಆಗಪ್ಪ ನೀ ಬೆಟ್ಟಿ ಗುರು ಅದಾನ ಗಟ್ಟಿ.||2||
ಅಮಾಸಿಗೆ ಆಗಪ್ಪ ನೀ ಬೆಟ್ಟಿ.