top of page
IMG_7077.PNG

Angara Alabadaga

ಗಂಡು:-ಪ್ರೀತಿಲೇ ಚೋಂಗೆ ಮಾಡ್ತಿದ್ದಿ. ಮೊಹರಂಕ ನನ್ನ ಕರೀತಿದ್ದಿ. ಬರದೀದ್ರ ಸಿಟ್ಟಿಗೆಳತಿದ್ದಿ. ನನ ಜೋಡ ಮಾತ ಬಿಡತಿದ್ದಿ. ಅಲ್ಲಾ ದೇವರಿಗಿ ಹರಕೆ ಹೊರತಿದ್ದಿ. ಹಾಥ್ವರದ ಗೆಳತಿ ಬರತ್ತಿದ್ದಿ.


ಹೆಣ್ಣು:-ಅಂಗಾರ ಅಲಬದಾಗ ಬಡದ ನಿನಗಾಗಿ ಒಪ್ಪತ್ತ ಹಿಡದ ಸಾಕಾತು ನನಗ ತಡ ತಡದ ಏಡಿ ಹಿಡದ ಕಾಯಿ ನಾ ಒಡೆದ ವಗದರ ವಗಿಲಿ ನನ್ನ ಕಡದ ಸಾಯ್ತನೋ ನಿನ್ನ ನಾ ಪಡೆದ.//ಪಲ್ಲವಿ//


ಹೆಣ್ಣು:-ಎಷ್ಟು ಮನೆತನ ಬಂದರು ಬ್ಯಾಡಅಂದಿದ್ನಿ ನಿನ್ನ ಸಲುವಾಗಿ... ||2||

ಮರಿಹ್ಯಾಂಗೋ ರಕ್ತ ಸುಟ್ಟುಕೊಂಡದ್ದು ನೀ ನನ್ನ ಸಲುವಾಗಿ. ಬಲವಂತ ಮಾಡಿ ಕೇಳ್ತಾರ ಹೇಳಲೇಂಗ ನಾ ಹಿರಿಯರಿಗಿ.


ಗಂಡು:-ತಲೆ ಮ್ಯಾಲ ಗುಡ್ಡ ಹತಕೋರ. ನನಗಾಗಿ ತ್ರಾಸ ತಡಕೋರ. ಪದರಾಗ ಬೆಂಕಿ ಕಟಕೋರ. ಪ್ರೀತಿಯ ಮನಸಕೋರ. ನಾ ಕೊಟ್ಟ... ಸೀರಿ ಉಟಕೋರ.. ಕಣ್ಣೀರಾ... ಕಟ್ಟಿ ಇಟ್ಟಕೋರ.


ಹೆಣ್ಣು:-ಅಂಗಾರ ಅಲಬದಾಗ ಬಡದ ನಿನಗಾಗಿ ಒಪ್ಪತ್ತ ಹಿಡದ ಸಾಕಾತು ನನಗ ತಡ ತಡದ ಏಡಿ ಹಿಡದ ಕಾಯಿ ನಾ ಒಡೆದ ವಗದರ ವಗಿಲಿ ನನ್ನ ಕಡದ ಸಾಯ್ತನೋ ನಿನ್ನ ನಾ ಪಡೆದ.//ಚರಣ ೧//


ಗಂಡು:-ಗುದ್ದಲಿ ಬಿದ್ದ ಐದ ದಿನಕ ಕುಂದರತಾವ ದೇವರ....||2||

ಐಮೂಮ ದಿನ್ನಂತ ಅಲಾಬದಾಗ ಲಾಡಿ ಕಟಕೋತಾರ. ಅರಂಗ ಭಕ್ತಿಲೇ ಲಾಡಿ ಕಟ್ಟಕೊಂಡ್ರ ಹುಚ್ಚಂತ ನನ್ನ ಕರೀತಾರ. 


ಹೆಣ್ಣು:-ಅವರಿಗೇನ ಗೊತ್ತು ಈ ಪ್ರೀತಿ. ಪ್ರೀತಿ ಅರ್ಥ ಬ್ಯಾರೆ ಅಲ್ಲಿ ಐತಿ. ಒಬ್ಬೊಬ್ಬರದೊಂದು ರೀತಿ. ಸತ್ರು ಉಳಿಸೊಣ ಈ ಪ್ರೀತಿ. ನಿನ್ನ ಜೀವ... ಓಗದೆಲ್ಲೂ ಒತ್ತಿ. ನನಗಾಗಿ.. ಗೆಳೆಯ ನೀ ಸತ್ತಿ. 



ಗಂಡು:-ಪ್ರೀತಿಲೇ ಚೋಂಗೆ ಮಾಡ್ತಿದ್ದಿ. ಮೊಹರಂಕ ನನ್ನ ಕರೀತಿದ್ದಿ. ಬರದೀದ್ರ ಸಿಟ್ಟಿಗೆಳತಿದ್ದಿ. ನನ ಜೋಡ ಮಾತ ಬಿಡತಿದ್ದಿ. ಅಲ್ಲಾ ದೇವರಿಗಿ ಹರಕೆ ಹೊರತಿದ್ದಿ. ಹಾಥ್ವರದ ಗೆಳತಿ ಬರತ್ತಿದ್ದಿ.//ಚರಣ ೨//



ಹೆಣ್ಣು:-ಮೊಹರಮದಾಗ ಬ್ಯಾಟಿ ಮಾಡಿ. ಹರಕಿ ಹೊತ್ತೇನ ನಾನ...||2||

ಹೆಂಗಾರ ಮಾಡಿ ಏನಾರ ಮಾಡಿ ಪಡಿಬೇಕಂತ ನಿನ್ನ.. ಇಲ್ಲಂದ್ರ ಹೊಳಿ ಹೋಗುವುದರಾಗ ದೇವರ ಹೊಂಟೊಗ್ಲಿ ಈ ಪ್ರಾಣ. 


ಗಂಡು:-ಸುಟ್ಟು ಹೋಗಲಿ ಜಾತಿಯ ಸುಣ್ಣ. ತಿಳಿಯಲಿ ಹಿರಿಯರ ಬಣ್ಣ. ಕಣ್ಣಿಟ್ಟು ಕಾಯೋ ದೇವರನ್ನ ಕಡಿತನಕ ಬಾರ ನೆನೆಯೋಣ ಬಿಡದಿಲ್ಲ... ನಮ್ಮ ಕೈಯಣ್ಣ ಜಗದಂಜಿಕಿ ಗೆಳತಿ ಬ್ಯಾಡಿನ್ನಾ.//ಚರಣ ೩//



ಹೆಣ್ಣು:-ಅಂಗಾರ ಅಲಬದಾಗ ಬಡದ ನಿನಗಾಗಿ ಒಪ್ಪತ್ತ ಹಿಡದ ಸಾಕಾತು ನನಗ ತಡ ತಡದ ಏಡಿ ಹಿಡದ ಕಾಯಿ ನಾ ಒಡೆದ ವಗದರ ವಗಿಲಿ ನನ್ನ ಕಡದ ಸಾಯ್ತನೋ ನಿನ್ನ ನಾ ಪಡೆದ.


ಗಂಡು:-ಅಲ್ಲಾ ದೇವರಿಗಿ ಹರಕೆ ಹೊರತಿದ್ದಿ. ಹಾಥ್ವರದ ಗೆಳತಿ ಬರತ್ತಿದ್ದಿ.



ಹೆಣ್ಣು:-ವಗದರ ವಗಿಲಿ ನನ್ನ ಕಡದ ಸಾಯ್ತನೋ... ನಿನ್ನ ನಾ ಪಡೆದ.//ಪಲ್ಲವಿ//

bottom of page