
Anubhavada Adigi Madi

ಗಾಯಕರು:-ಅನುಭವದ ಅಡಗಿ ಮಾಡಿ....
ಅನುಭವದ ಅಡಗಿ ಮಾಡಿ.
ಊಣಬೇಕು ತಿಡಿಗೇಡಿ.
ದೇವರ ಅನ್ನೋದು ಗಟ್ಟಿ ಹಿಡಿ.
ತಿಳಿದ ಲಗು ಮಾಡಿ ಮುಕ್ತಿ ಪಡಿ.
ನೀ ತಿಳ್ಕೋರೋ ಹುಚ್ಚ ಕೋಡಿ.
ಯಾರ್ಯಾರು ಬರುದಿಲ್ಲ ನಿನ್ನ ಜೋಡಿ.
ಸಂಘಡಿಗರು:-ಅನುಭವದ ಅಡಗಿ ಮಾಡಿ.
ಊಣಬೇಕು ತಿಡಿಗೇಡಿ.
ದೇವರ ಅನ್ನೋದು ಗಟ್ಟಿ ಹಿಡಿ.
ತಿಳಿದ ಲಗು ಮಾಡಿ ಮುಕ್ತಿ ಪಡಿ.
ನೀ ತಿಳ್ಕೋರೋ ಹುಚ್ಚ ಕೋಡಿ.
ಯಾರ್ಯಾರು ಬರುದಿಲ್ಲ ನಿನ್ನ ಜೋಡಿ//ಪಲ್ಲವಿ//
ಗಾಯಕರು:-ಬರಿ ಮಂದಿರದೊಳಗೆ ಶಿವನಿಲ್ಲ.
(ಏಕ ಅಲ್ಲ ಹಜಾರನಾಮ||ಶಿವಣೊಬ್ಬ ನಾಮ ಹಲವು ಕನೋ ಮೂಡ. ಸಾಯಾಕ ಯಾಕ ಸಾಡೆ ತೀನ. ನನಗ್ಯಾಕ ಮೂರುವರಿ.||ಅಂದಂಗಾತಲ್ಲೋ ನಿನ್ನ ಪಾಡ.)
ಬರಿ ಮಂದಿರ ದೊಳಗ ಶಿವನಿಲ್ಲ.
ಬರೀ ಮಸೀದಿಯೊಳಗ ಕುದಾಇಲ್ಲ.
ಚರಾಚರ ವಸ್ತುವಿನಲ್ಲಿಹನು.
ಆ ಭಗವಂತ ಅಲ್ಲ ಎನ್ನುವನು.
ಮನಸನ್ನ ಮಡಿ ಮಾಡಿ.
ದೇವನಾಮ ನಿಹಾಡಿ.
ನೀ ಕರದರ ಭಕ್ತಿಯಲಿ.
ಕಾಣುವೆ ವಿಧ ವಿಧ ರೂಪದಲಿ.
ದೇವರ ಅನ್ನೋದು ಗಟ್ಟಿ ಹಿಡಿ.
ತಿಳಿದ ಲಗು ಮಾಡಿ ಮುಕ್ತಿ ಪಡಿ.
ಸಂಗಡಿಗರು:-ಅನುಭವದ ಅಡಗಿ ಮಾಡಿ.
ಊಣಬೇಕು ತಿಡಿಗೇಡಿ.
ದೇವರ ಅನ್ನೋದು ಗಟ್ಟಿ ಹಿಡಿ.
ತಿಳಿದ ಲಗು ಮಾಡಿ ಮುಕ್ತಿ ಪಡಿ.
ನೀ ತಿಳ್ಕೋರೋ ಹುಚ್ಚ ಕೋಡಿ.
ಯಾರ್ಯಾರು ಬರುದಿಲ್ಲ ನಿನ್ನ ಜೋಡಿ//ಚರಣ ೧//
ಗಾಯಕರು:-ಪುರಾಣ ಓದಿ ಏಣ ಕೆಳಕೊಂಡಿ.
(ಕಚ್ಚೆ ಕೈ ಬಾಯಿಗಳು ಇಚೆಯಲ್ಲಿದ್ದರೆ.||
ಅಚ್ಚುತನಪ್ಪ ಅಜನಪ್ಪ ಲೋಕದಲ್ಲಿ ನಿಶ್ಚಿಂತ ನಪ್ಪ ಎಂದು ನುಡಿದಿಹನು ನಮ್ಮ ಗುರು ಸಿದ್ದಲಿಂಗ)
ಕುರಾನ ಓದೆನ ತಿಳ್ಕೊಂಡಿ.
ನೀ ಪುರಾಣ ಕೇಳಿನ ಬಳಕೊಂಡಿ.
ಮನಸೈತೋ ಬಾಳ ಹುಚ್ಚ ಮುಂಡಿ.
ಅದರ ಬೆನ್ನ ಹತ್ತಿ ಎಲ್ಲಾ ಕಳಕೊಂಡಿ.
ಹೋಗುದೈತಿ, ಈ ಬಂಡಿ.
ಜಾತ್ಯಂತ ಬಡ್ಕೊಂಡಿ.
ದೇವರ ಅನ್ನೋದು ಗಟ್ಟಿ ಹಿಡಿ.
ತಿಳಿದ ಲಗು ಮಾಡಿ ಮುಕ್ತಿ ಪಡಿ.
ನೀ ತಿಳ್ಕೋರೋ ಹುಚ್ಚ ಕೋಡಿ.
ಯಾರ್ಯಾರು ಬರುದಿಲ್ಲ ನಿನ್ನ ಜೋಡಿ...
ಸಂಗಡಿಗರು:-ಅನುಭವದ ಅಡಗಿ ಮಾಡಿ.
ಊಣಬೇಕು ತಿಡಿಗೇಡಿ.
ದೇವರ ಅನ್ನೋದು ಗಟ್ಟಿ ಹಿಡಿ.
ತಿಳಿದ ಲಗು ಮಾಡಿ ಮುಕ್ತಿ ಪಡಿ.
ನೀ ತಿಳ್ಕೋರೋ ಹುಚ್ಚ ಕೋಡಿ.
ಯಾರ್ಯಾರು ಬರುದಿಲ್ಲ ನಿನ್ನ ಜೋಡಿ//ಚರಣ ೨//
ಗಾಯಕರು:-ಬೀಸುವ ಗಾಳಿಗೆ ಜಾತಿಲ್ಲ.
(ಜಾತಿ ಜಾತಿ ಎಂದು ಜಾಲಿಯ ಮರವಾದೆ.||
ಯಾರಿಗೆ ನೀನು ನೆರಳಾದಿ. ಶೀಲಶೀಲವೆಂದು ಮಡಿಹುಡಿಯಾದಿ.||ಮನದ ಮಡಿಯನು ಮರೆತಿದಿ.)
ಬೀಸುವ ಗಾಳಿಗೆ ಜಾತಿಲ್ಲ.
ಕುಡಿಯುವ ನೀರಿಗೆ ಶೀಲಿಲ್ಲ.
ರಕ್ತದ ಬಣ್ಣ ಬದಲಿಲ್ಲ.
ನಿನಗೆ ಯಾಕ ಬುದ್ಧಿ ಬರಲಿಲ್ಲ.
ಸಾಯಿಬ್ಯಾಡೊ ಬಡದಾಡಿ.
ಸುಳ್ಳ ಸುಳ್ಳ ಕಳದಾಡಿ.
ದೇವರ ಅನ್ನೋದು ಗಟ್ಟಿ ಹಿಡಿ.
ತಿಳಿದ ಲಗು ಮಾಡಿ ಮುಕ್ತಿ ಪಡಿ.
ನೀ ತಿಳ್ಕೋರೋ ಹುಚ್ಚ ಕೋಡಿ.
ಯಾರ್ಯಾರು ಬರುದಿಲ್ಲ ನಿನ್ನ ಜೋಡಿ.
ಸಂಗಡಿಗರು:-ಅನುಭವದ ಅಡಗಿ ಮಾಡಿ.
ಊಣಬೇಕು ತಿಡಿಗೇಡಿ.
ದೇವರ ಅನ್ನೋದು ಗಟ್ಟಿ ಹಿಡಿ.
ತಿಳಿದ ಲಗು ಮಾಡಿ ಮುಕ್ತಿ ಪಡಿ.
ನೀ ತಿಳ್ಕೋರೋ ಹುಚ್ಚ ಕೋಡಿ.
ಯಾರ್ಯಾರು ಬರುದಿಲ್ಲ ನಿನ್ನ ಜೋಡಿ//ಚರಣ ೩//
ಗಾಯಕರು:-ಐಕ್ಯತೆಯ ಭಾವನೆಯಲ್ಲಿ.
(ಕಟ್ಟಿದ ಮನೆ ಸುಳ್ಳು. ತೊಟ್ಟಿದ ದೇಹವು ಜೊಳ್ಳು.||ಬಿಟ್ಟು ಹೋಗುವ ಮೊದಲು ಗಟ್ಟಿ ಗುರುವಿನ ಕೂಡಂದ ನಮ್ಮ ಯಲ್ಲಾಲಿಂಗ.)
ಭಾವೈಕ್ಯತೆಯ ಭಾವನೆಯಲ್ಲಿ.
ಬಾಳ ಭಕ್ತರು ಬರ್ತಾರ ನೋಡಿಲ್ಲಿ.
ಮುತ್ತಿನ ಮುಗಳಕೊಡದಲ್ಲಿ.
ಹಾಜಿ ಯಲ್ಲಾಲಿಂಗರ ನೆರಳಲ್ಲಿ.
ರಾಮ ರಹಿಮ ಒಂದೇ ಇಲ್ಲಿ.
ನೀ ಬಂದು ನೋಡಿಲ್ಲಿ.
ದೇವರ ಅನ್ನೋದು ಗಟ್ಟಿ ಹಿಡಿ.
ತಿಳಿದ ಲಗು ಮಾಡಿ ಮುಕ್ತಿ ಪಡಿ.
ನೀ ತಿಳ್ಕೋರೋ ಹುಚ್ಚ ಕೋಡಿ.
ಯಾರ್ಯಾರು ಬರುದಿಲ್ಲ ನಿನ್ನ ಜೋಡಿ.//ಚರಣ ೪//
ಅನುಭವದ ಅಡಗಿ ಮಾಡಿ.
ಊಣಬೇಕು ತಿಡಿಗೇಡಿ.
ದೇವರ ಅನ್ನೋದು ಗಟ್ಟಿ ಹಿಡಿ.
ತಿಳಿದ ಲಗು ಮಾಡಿ ಮುಕ್ತಿ ಪಡಿ.
ನೀ ತಿಳ್ಕೋರೋ ಹುಚ್ಚ ಕೋಡಿ.
ಯಾರ್ಯಾರು ಬರುದಿಲ್ಲ ನಿನ್ನ ಜೋಡಿ.
ಸಂಘಡಿಗರು:-ಅನುಭವದ ಅಡಗಿ ಮಾಡಿ.
ಊಣಬೇಕು ತಿಡಿಗೇಡಿ.
ದೇವರ ಅನ್ನೋದು ಗಟ್ಟಿ ಹಿಡಿ.
ತಿಳಿದ ಲಗು ಮಾಡಿ ಮುಕ್ತಿ ಪಡಿ.
ನೀ ತಿಳ್ಕೋರೋ ಹುಚ್ಚ ಕೋಡಿ.
ಯಾರ್ಯಾರು ಬರುದಿಲ್ಲ ನಿನ್ನ ಜೋಡಿ.