
Aralida Hoovanu Nange Nidendare

ಗಂಡು:-ಅರಳಿದ ಹೂವನು ನನಗೆ ನೀಡೆಂದರೆ ಗೆಳತಿಯೇ ಚುಚ್ಚುವ ಮುಳ್ಳಾದೆ ಏತಕೆ.
ದೇವರಮುಡಿಯಲಿ ನಗುತಿರು ಎಂದರೆ ಗೆಳತಿಯೇ ಹೋದೆ ನೀ ಹೆಣದ ಶೃಂಗಾರಕೆ.
ಹೆಣ್ಣು:-ಹೂವಾಗಲಿಲ್ಲ. ಮುಳ್ಳಂತೂ ಅಲ್ಲ.||
ವಿಧಿ ನನ್ನ ಹಣೆಯಲಿ ಎಂದು ಸುಖ ಪಡೆಯಲಿಲ್ಲ.
ಅರಳುವ ಮುನ್ನವೇ ಗಿಡದಲಿ ಬಾಡಿದೆ. ಗೆಳೆಯನೇ ನಿನ್ನಯ ಪ್ರೀತಿ ನನ್ನ ಕಾಡಿದೆ.
ದೇವರ ಎದೆ ಅದು ಎಂದು ಕಲ್ಲಾಗಿದೆ. ನನ್ನಯ ಬಾಳಲಿ ವಿಧಿಯಾಟ ಸಾಗಿದೆ.
ಗಂಡು:-ನೀ ದೂರ ಹೋದೆ.
ನನ್ನ ನೋಡಧಾದೆ.||
ನನ್ನೆದೆಯ ಗೂಡಿಗೆ ಬೆಂಕಿ ಬಿದ್ದರೂ ಬರದಾದೆ.
ಅರಳಿದ ಹೂವನು ನನಗೆ ನೀಡೆಂದರೆ ಗೆಳತಿಯೇ ಚುಚ್ಚುವ ಮುಳ್ಳಾದೆ ಏತಕೆ. //ಪಲ್ಲವಿ//
ಗಂಡು:-ನನ್ನನು ಯಾಕ ಮರೆತೋದಿ.
ಸಿರಿ ತನಕ್ಕ ಯಾಕ ಬಲಿಯಾದಿ.
ಮುದುಕನ ಮದವಿ ಯಾಗಲು ನೀ ಮನಸ ಹ್ಯಾಂಗ ಮಾಡಿದಿ.
ಹೆಣ್ಣು:-ಹೊಡೆದ ತಾಯಂತೂ ನನಗಿಲ್ಲ.
ತಂದೆ ಪ್ರೀತಿಯ ಗೊತ್ತಿಲ್ಲ.
ಮಲತಾಯಿಗಂತು ಮಗಳಲ್ಲ.
ಕೇಳುವರ್ಯಾರಿಲ್ಲ.
ಗಂಡು:-ನನ್ನೆದೆಯೂ ಬೆಚ್ಚಗಿತ್ತು. ನಿನ್ನ ದಾರಿ ಕಾಯತ್ತಿತ್ತು.
ಅರಳಿದ ಹೂವನು ನನಗೆ ನೀಡೆಂದರೆ ಗೆಳತಿಯೇ ಚುಚ್ಚುವ ಮುಳ್ಳಾದೆ ಏತಕೆ. //ಚರಣ ೧//
ಹೆಣ್ಣು:-ನನ್ನನ್ನು ಹೆತ್ತವರನ್ನು ಉಳಿಸಿ.
ಸಾಲದ ಶೂಲವ ಪರಿಹರಿಸಿ.
ಕನಸಿಗೆ ಬೆಂಕಿಯ ಮಳೆ ಸುರಿಸಿ.
ಮುದುಕನ ಜೊತೆಯಾದೆ.
ಗಂಡು:-ಹಣದಲ್ಲಿ ಬಡವನು ನಾನಿರುವೆ.
ನಿನ್ನನು ಪಡೆಯದೆ ಕೊರಗಿರುವೆ.
ಸಾವಿನ ಬಾಗಿಲು ತಟ್ಟಿರುವೆ.
ದೂರ ನಾ ಹೋಗುವೆ.
ಹೆಣ್ಣು:-ಸ್ವರ್ಗ ನಡಿಗೆ ಸಾಗಿ ಬರುವೆ. ಅಲ್ಲಿ ನಿನ್ನ ಜೊತೆ ಸೇರುವೆ. //ಚರಣ ೨//
ಗಂಡು:-ಅರಳಿದ ಹೂವನು ನನಗೆ ನೀಡೆಂದರೆ ಗೆಳತಿಯೇ ಚುಚ್ಚುವ ಮುಳ್ಳಾದೆ ಏತಕೆ.
ದೇವರಮುಡಿಯಲಿ ನಗುತಿರು ಎಂದರೆ ಗೆಳತಿಯೇ ಹೋದೆ ನೀ ಹೆಣದ ಶೃಂಗಾರಕೆ.
ಹೆಣ್ಣು:-ಹೂವಾಗಲಿಲ್ಲ. ಮುಳ್ಳಂತೂ ಅಲ್ಲ.||
ವಿಧಿ ನನ್ನ ಹಣೆಯಲಿ ಎಂದು ಸುಖ ಪಡೆಯಲಿಲ್ಲ.
ಅರಳುವ ಮುನ್ನವೇ ಗಿಡದಲಿ ಬಾಡಿದೆ. ಗೆಳೆಯನೇ ನಿನ್ನಯ ಪ್ರೀತಿ ನನ್ನ ಕಾಡಿದೆ.