top of page
IMG_7077.PNG

Arishina Seeri Hasiru Bali

ಗಂಡು:-ಅರಸಿನ ಸೀರಿ ಹಸಿರು ಬಳಿ. 

ಮಾರಿಯ ಮ್ಯಾಲ ಚಂದಕಳಿ. 


ಹೆಣ್ಣು:-ಬೀಸಐತಿ ಹುಡುಗ ಪಡು ಗಾಳಿ. 

ಹೊಗಳತಿ ಯಾಕ ಹೋಳ್ಳಿ ಹೋಳ್ಳಿ.//ಪಲ್ಲವಿ//


ಗಂಡು:-ಬೆಳವಲ ನಾಡಿನ ಬೆಳೆ ಚಂದ. 

ಮಾಗಿದ ಹಣ್ಣ ತಿನ್ನು ಗಿಳಿ ಚಂದ. 

ಭೂಮಿಗೆ ಮುಂಗಾರಿ ಮಳಿಚಂದ. 

ನಿನ್ನಂತಹ ಹೊಳಿ ಸಾಲ ತಳಿಚೆಂದ. 


ಹೆಣ್ಣು:-ಬೀಸಐತಿ ಹುಡುಗ ಪಡು ಗಾಳಿ. 

ಹೊಗಳತಿ ಯಾಕ ಹೋಳ್ಳಿ ಹೋಳ್ಳಿ.


ಗಂಡು:-ಅರಸಿನ ಸೀರಿ ಹಸಿರು ಬಳಿ. 

ಮಾರಿಯ ಮ್ಯಾಲ ಚಂದಕಳಿ. //ಚರಣ ೧//


ಹೆಣ್ಣು:-ನೀ ತಂದಿ ಬೆಳ್ಳಿಯ ಕಾಲುಂಗುರ. 

ತಿಳಿಲಿಲ್ಲ ಹುಡುಗ ನಿನ್ನ ಮಜಪೂರ. 

ಮಾತಲಿ ಮಾಡತಿ ಬಡಿವಾರ. 

ನಾಮಳ ಆಗುವುದಿಲ್ಲ ಹೊಗಳಿದರ. 


ಗಂಡು:-ಅರಸಿನ ಸೀರಿ ಹಸಿರು ಬಳಿ. 

ಮಾರಿಯ ಮ್ಯಾಲ ಚಂದಕಳಿ. 



ಹೆಣ್ಣು:-ಬೀಸಐತಿ ಹುಡುಗ ಪಡು ಗಾಳಿ. 

ಹೊಗಳತಿ ಯಾಕ ಹೋಳ್ಳಿ ಹೋಳ್ಳಿ.//ಚರಣ ೨//



 ಗಂಡು:-ಬಿಳಿ ಜೋಳ ತಣಿ ಹಂಗ ತೂಗತಿ.

ಹಾವಿನ ಹೆಡಿಹಂಗ ಆಡತಿ. 

ಹತ್ತಿಯ ಹೂವಿನಂಗ ಅರಳತಿ. 

ಹೊಗಳಲು ಹುಡುಗಿ ಏನು ಉಳಿದೈತಿ.



ಹೆಣ್ಣು:-ಬೀಸಐತಿ ಹುಡುಗ ಪಡು ಗಾಳಿ. 

ಹೊಗಳತಿ ಯಾಕ ಹೋಳ್ಳಿ ಹೋಳ್ಳಿ.


ಗಂಡು:-ಅರಸಿನ ಸೀರಿ ಹಸಿರು ಬಳಿ. 

ಮಾರಿಯ ಮ್ಯಾಲ ಚಂದಕಳಿ. //ಚರಣ ೩//


bottom of page