top of page
IMG_7077.PNG

Bagilige Bali Vadada

ಹೆಣ್ಣು:-ಬಾಗಿಲಿಗೆ ಬಳಿ ಒಡೆದ ಬಿಡಲೇನು ಜೀವ.||

ಸಾದಸಬ್ಯಾಡ ನೀ ನನ್ನ ಜೋಡಿ ಹ್ಯಾವ.

ನುಂಗಿ ನುಂಗಿ ಸಾಕಾತ ಈ ಪ್ರೀತಿ ನೋವಾ. 

ಹಾಗೇನೋ ಒಣಗಿದ ಕುಂಬಳ ಡಾವಾ.

ನಾನಾದ್ನಿ ಪೂಜೆಗೆ ಸಲ್ಲದ ಹೂವ. 


ಗಂಡು:-ಕಟ್ಟಿಗೆ ಹನಿ ಬಡೆದು ನಾ ಸಾಯತೇನ.||ಇಲ್ಲ ಅಂದ್ರೆ ಗಿಡಕ ಹೋಗಿ ಊರ್ಲ ಹಾಕೋತೇನ.

ಹಾದರ ಹೋಗಲಿ ನಿನಗಾಗಿ ಪ್ರಾಣ.

ಮಣ್ಣಾಗುದರಾಗೊಮ್ಮೆ ಮಾರಿ ತೋರ ನೀನಾ.

ಸತ್ತು ಮೇಲ ಬಡಕೊಂಡರು ಸಿಗುದಿಲ್ಲ ನಾನ.//ಪಲ್ಲವಿ//


ಗಂಡು:-ತಿಟ್ಟಿಮಟ್ಟಿ ಬಂದಾಗ ಊರಿಗೆ ಬರತಿ. 

ಅಕಾಡೆಂದ ಕಣ್ಣೀರ ಕಾಣಿಕೆ ತರತಿ. 


ಹೆಣ್ಣು:-ಮದುವ್ಯಾದ ಮ್ಯಾಲತ್ತ ಮುಗದೈತಿ ಆಸೆ. 

ಪ್ರೀತಿಗೆ ಸಿಕೈತಿ ಇದು ಎಂಥ ಶಿಕ್ಷೆ. 


ಗಂಡು:-ನೀನಿಲ್ಲದ ಕಳಿಲೆಂಗ ಗೆಳತಿ ನಾ ಹೊತ್ತ.

ಆಗಲಿಲ್ಲ ಬಾಳಿಗೆ ಗೆಳತಿ ನೀ ಜತ್ತ. 

ಅದು ಯಾರ ಕೆಟ್ಟ ದೃಷ್ಟಿ ನಮ್ಮ ಮ್ಯಾಲ ಬಿತ್ತ.


ಹೆಣ್ಣು:-ಬಾಗಿಲಿಗೆ ಬಳಿ ಒಡೆದ ಬಿಡಲೇನು ಜೀವ.

ಸಾದಸಬ್ಯಾಡ ನೀ ನನ್ನ ಜೋಡಿ ಹ್ಯಾವ.//ಚರಣ ೧//



ಹೆಣ್ಣು:-ನಿನ್ನ ತಂಗಿ ನೆವ ಮಾಡಿ ಬಂದಿದ್ನಿ ಮಣಿಗಿ. 

ನೀ ಕಾಣದ ಹೊಳ್ಳಿ ಹ್ವಾದ್ನಿ ಮನದಾಗ ಮರಗಿ.


ಗಂಡು:-ಬಂದ್ರ ಬಡದಾಂಗ ಆಗತೈತಿ ನಿಮ್ಮ ಓಣಿ ಕಡಿಗಿ. 

ಕಪ್ಪಾ ಹಿಂಡಿದ ಕಂಕಿಯಂಗ ಆಗೇನ ಒಣಗಿ.


ಹೆಣ್ಣು:-ಗಂಡನ ಮಣಿ ಅಂದ್ರೆ ಜೀವ ಅಂತಐತಿ ಜಕ್ಕ.

ನಂಗೆನ ಸಮಸವಾತ ಈ ಗೆಳೆಯಾ ದಿಕ್ಕ.

ನಿನ್ನ ನೆನೆಸಿ ಹತ್ತತವ ಹಗಲೆಲ್ಲ ಬಿಕ್ಕ.


ಗಂಡು:-ಕಟ್ಟಿಗೆ ಹನಿ ಬಡೆದು ನಾ ಸಾಯತೇನ. ಇಲ್ಲ ಅಂದ್ರೆ ಗಿಡಕ ಹೋಗಿ ಊರ್ಲ ಹಾಕೋತೇನ.//ಚರಣ ೨//



ಹೆಣ್ಣು:-ಬ್ಯಾರೆ ಹೆಣ್ಣ ಮದಿವ್ಯಾಗಿ ಬಾಳು ನೀ ಚಂದ. 

ನನ್ನ ನೆನಪ ತಗಿಬ್ಯಾಡ ಮರತ್ಹೋಗ ಇಂದ. 


ಗಂಡು:-ಈ ಮನದ ಮಣಿ ಒಳಗ ಯಾರಿಗಿಲ್ಲ ಜಾಗ. 

ನಿನಗಾಗಿ ಮಾಡತ್ತನ ಈ ಜೀವ ತ್ಯಾಗ. 


ಹೆಣ್ಣು:-ನನ್ನ ಮ್ಯಾಲ ಹಕ್ಕಿಲ್ಲ ತಿಳಿದ ನೀ ನೋಡ. 

ನನಮಾರಿ ನೀ ಮರೆತ ಚಂದಿದ್ರ ಪಾಡ.

ಮುಂದಿನ ಜನ್ಮ ಅನುದಿದ್ರ ಆಗೋಣ ಜೋಡ.


ಗಂಡು:-ನೀ ನನ್ನ ಹಣೆ ಬರದಾಗ ಇರಲಿಲ್ಲ. 

ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. 

ಆಡಿದ ಅಂಗಳದಾಗ ಕುಂತ ಅಳುವಂಗಾತಲ್ಲ. 

ಹೋಗಿ ಬಾ ಗೆಳತಿ ನಾತಡಿಯೋದಿಲ್ಲ. 

ನಿನ್ನ ಹೆಸರ ಮ್ಯಾಲ ಹಿಂಗ ನಾ ಉಳಿಯತನಲ್ಲ.//ಚರಣ ೩// 



bottom of page