Balagalitta Ni Baralilla

ಗಂಡು:-ಬಲಗಾಲಿಟ್ಟ ನೀ ಬರಲಿಲ್ಲ ಮದವಿಗಿ ಬಾ ಅಂತ ಕರೆದೇಲ್ಲ.||
ಬರಬಾರದ ಮಾಡಿ ಬರೀ ಏಳದೇಲ್ಲ.ಹೋಟ್ಯಾಗ ಬೆಂಕಿ ಸುರುದೆಲ್ಲ.||
ಹೆಣ್ಣು:-ವಗದಾರ ನನ್ನ ಕೈಯ ಕಾಲ ಕಟ್ಟಿ. ಮಧವಿ ತಾರಿಕ ಮಾಡ್ಯಾರಗಟ್ಟಿ.||
ಆಗಲ್ಯಾಂಗ ನಾ ನೀನ ಬೆಟ್ಟಿ. ಮನಿಯಾಗ ಮಂದಿ ಬಾಳೈತಿ.||
ಗಂಡು:-ಬಲಗಾಲಿಟ್ಟ ನೀ ಬರಲಿಲ್ಲ ಮದವಿಗಿ ಬಾ ಅಂತ ಕರೆದೇಲ್ಲ.||//ಪಲ್ಲವಿ//
ಹೆಣ್ಣು:-ಕೋಲ್ಯಾಗ ನನ್ನ ಕೂಡಿ ಹಾಕ್ಯಾರ. ಗೊತ್ತಿಲ್ದ ಗಟ್ಟಿ ಮಾಡ್ಯಾರ.
ಮನದಾಗ ಮರುಗಿನಿ ಮರಮಾರ.
ಒಲ್ಅಂದ್ರೆ ಕೇಳಲಿಲ್ಲ ಹಿರಿಯರ.
ಒತ್ತಾಯಿಲೆ ನನ್ನ ಒಪ್ಪಿಸಾರ.
ಸೋದರ ಮಾವಗ ಗಟ್ಟಿ ಮಾಡ್ಯಾರ.
ಬಡ ಬಡದ ಮದವಿ ಮುಗಿಸಾರ.
ಭೇಟಿ ಆಗಾಕ್ಹೆಂಗ ಬಿಡುತ್ತಾರ.||
ಗಂಡು:-ಬಲಗಾಲಿಟ್ಟ ನೀ ಬರಲಿಲ್ಲ ಮದವಿಗಿ ಬಾ ಅಂತ ಕರೆದೇಲ್ಲ.||//ಚರಣ ೧//
ಗಂಡು:-ಮಳ್ಳಿ ಹಂಗ ಕುಂತಿ ಹಂದರದಾಗ.
ನಿನ್ನ ಅಕ್ಕಿಕಾಳ ಅಂಗಳದಾಗ.||
ಉಣ್ಣು ಯಡಿಯೋಳಗ ಹಲ್ಲಿ ಬಿದ್ದಂಗ.
ವಿಷ ತುಂಬಿದ ಯಡಿ ಉಂಡಾಂಗ.
ಮನದಾಗ ಕುಂತಿ ಮರಿದಾಂಗ.
ನಿನ್ನ ಬಿಟ್ಟು ನಾನು ಇರಲ್ಯಾಂಗ.||
ಹೆಣ್ಣು:-ವಗದಾರ ನನ್ನ ಕೈಯ ಕಾಲ ಕಟ್ಟಿ. ಮಧವಿ ತಾರಿಕ ಮಾಡ್ಯಾರಗಟ್ಟಿ.||//ಚರಣ ೨//
ಹೆಣ್ಣು:-ಗಂಡನ ಮನೆಯಾಗ ಇಲ್ಲ ಸುಖ.
ಕೆಡವಿ ಬಿಟ್ಟಾರ ನನ್ನ ಹಳ್ಳಕ್ಕ.
ಕುಡಿದ ಬರತಾಣ ಸಂಜಿಕ.
ನೋವ ಕೊಡತಾನ ನನ್ನ ಮನಕ.
ಎಳ್ಳಷ್ಟು ಸುಖ ಇಲ್ಲ ಜೀವಕ್ಕ.
ಹಿಂಗಾದ್ರ ಹ್ಯಾಂಗ ಬಾಳಬೇಕ.
ಕಣ್ಣೀರ ಕೂಳ ತಿನ್ನುವುದಕ.
ಬರದಾಣ ಬ್ರಹ್ಮ ಹಣೆಬರಕ.||
ಗಂಡು:-ಬಲಗಾಲಿಟ್ಟ ನೀ ಬರಲಿಲ್ಲ ಮದವಿಗಿ ಬಾ ಅಂತ ಕರೆದೇಲ್ಲ.||//ಚರಣ ೩//
ಗಂಡು:-ನೀವೊಂದು ದೊಡ್ಡ ಮನೆತನದ ಹುಡುಗಿ.
ಗುಡಿಸಲು ಬರಲಿಲ್ಲ ಮನಸಿಗಿ.||
ದುಡುಕೊಂಡು ತಿನ್ನುವ ಬಡ ಹುಡುಗ.
ಮಾಡಿದಿ ಅವನ ಮನ ತುಡುಗ.
ಕುಕ್ಕಿ ಹೊದಂಗ ಆ ಗಿಡಗ.
ಮುಳುಗಿಸಿದೆಲ್ಲ ಅವನ ಹಡಗ.||//ಚರಣ ೪//