Banavige Uri Hatti

ಗಂಡು:-ಬಣವಿಗೆ ಉರಿ ಹತ್ತಿ. ಕೆರಿಗೆ ನೀರ ಬತ್ತಿ.||
ನೀರಿಗೆ ಪರದಾಡಿದಂಗ ಆತಲ್ಲ ನಮ ಪ್ರೀತಿ.
ಮಾತ ಕೊಟ್ಟಿ ಮರತೊಂಟಿ ಮರತೊಂಟಿ ಮರತೊಂಟಿ.
ಮಾತ ಕೊಟ್ಟಿ ಮರತೊಂಟಿ ಮರತೊಂಟಿ ಮರತ್ಯಾಕ ಹೊಂಟಿ.
ಹೆಣ್ಣು:-ಕವನ್ಯಾಗ ಕಲ್ಹಾಕಿ. ವಗದಂಗ ಆತ ತದಿಕಿ.
ಎಲ್ಲೊ ಏನೋ ಎಡವಟ್ಟಾಗಿ ಹರದೈತಿ ನಮದೋಕ್ಕಿ.
ಮಾತು ಕೊಟ್ಟ ಮರೆತಿಲ್ಲೋ ಮರೆತಿಲ್ಲೋ ಮರೆತಿಲ್ಲೋ.
ಮಾತು ಕೊಟ್ಟ ಮರೆತಿಲ್ಲೋ ಮರೆತಿಲ್ಲೋ ಗೆಳೆಯ ಮರೆತಿಲ್ಲೋ.
ಗಂಡು:-ಬಣವಿಗೆ ಉರಿ ಹತ್ತಿ. ಕೆರಿಗೆ ನೀರ ಬತ್ತಿ.
ನೀರಿಗೆ ಪರದಾಡಿದಂಗ ಆತಲ್ಲ ನಮ ಪ್ರೀತಿ. //ಪಲ್ಲವಿ//
ಗಂಡು:-ಬಾಸಿಂಗ ಕಟ್ಟುವಾಗ ಚೂರಣ ಇಲ್ಲೇನ ನಿನ್ನ ಕಳ್ಳಿಗಿ.
ಬಾಸಿಂಗ ಕಟ್ಟುವಾಗ ಕಂಬದಂಗ ನಿಂತಿದ್ದಿ ಗಂಡನ ನೆಳ್ಳಿಗಿ.
ಹೆಣ್ಣು:-ಕಿಟಿ ಕಿಟಿ ಹತ್ತಬ್ಯಾಡೋ ಮನಸು ಇಲ್ಲೋ ಸರಿಯಾಗಿ.
ನಿಂಗೇನ ಗೊತ್ತ ನಮ್ಮಣಿ ಸುದ್ದಿ ಹಾಸ್ಯಾರ ಮುಳ್ಳಿಗಿ.
ಹಚ್ಚಿ ದಂಗ ಕ್ಯಾರ ಹಸಿ ಕ್ಯಾರ ಹಸಿ ಕ್ಯಾರ||
ಗಂಡು:-ಬಣವಿಗೆ ಉರಿ ಹತ್ತಿ. ಕೆರಿಗೆ ನೀರ ಬತ್ತಿ.
ನೀರಿಗೆ ಪರದಾಡಿದಂಗ ಆತಲ್ಲ ನಮ ಪ್ರೀತಿ.//ಚರಣ ೧//
ಗಂಡು:-ದೇವರಿಗೆ ಬಂದಾಗ ಪುಟಾಣಿ ಸಕ್ಕರೆ ಪನಿವಾರ ಕೊಟ್ಟಿದ್ದಿ.
ಎಂದಿದ್ರೂ ನೀ ನನ್ನ ಗಂಡಂತ ಕೈಯಾಗ ಕರ್ಪೂರ ಸುಟ್ಟಿದ್ದಿ.
ಗಂಡು:-12 ದೇವರಿಗೆ ಹರಕೆಯ ಹೊತ್ತು ನಾ ಕಾಯಿ ಕಟ್ಟಿದ್ನಿ.
ಯುಗಾದಿ ಪಾಡೇದಾಗ ದೇವರ ಭಂಡಾರ ಮುಟ್ಟಿದ್ನಿ.
ಮಾಡ್ಯಾರಲ್ಲೋ ಮೋಸ ನನಗೆ ಮೋಸ ನನಗೆ ಮೋಸ||
ಗಂಡು:-ಬಣವಿಗೆ ಉರಿ ಹತ್ತಿ. ಕೆರಿಗೆ ನೀರ ಬತ್ತಿ.
ನೀರಿಗೆ ಪರದಾಡಿದಂಗ ಆತಲ್ಲ ನಮ ಪ್ರೀತಿ.//ಚರಣ ೨//
ಗಂಡು:-ಹತ್ತುವ ಗಾಡಿ ಮಹಡಿಯ ಮಣಿ ಬಂತೇನ ಮನಸಿಗಿ.
ಪಥರಾಸ ಮಣಿ ನಂದು ಎಬರೆಸಿ ಅಂತ್ಹೇಳಿ ಬಿಟ್ಟೇನ ಬೈಲಿಗಿ.
ಹೆಣ್ಣು:-ಎಷ್ಟಿದ್ದರೇನು ಆಸ್ತಿ ತಕ್ಕೊಂಡ ಬಡಕೊಲ್ಲೇನ ಹಣಿಗಿ.
ಮಾಟ ಮಂತ್ರ ಮಾಡಿಸಿಬಿಟ್ಟಾರ ನೋಡ ನನ್ನ ಕೈಗೆಗಿ.
ಕುಂತೇನ ಸೊರಗಿ ನಾ ಸೊರಗಿ ನಾ ಸೊರಗಿ||
ಗಂಡು:-ಬಣವಿಗೆ ಉರಿ ಹತ್ತಿ. ಕೆರಿಗೆ ನೀರ ಬತ್ತಿ.
ನೀರಿಗೆ ಪರದಾಡಿದಂಗ ಆತಲ್ಲ ನಮ ಪ್ರೀತಿ.//ಚರಣ ೩//
ಹೆಣ್ಣು:-ಒಮ್ಮಿಂದ ಒಮ್ಮಿ ಕೆಟ್ಟ ವಿಚಾರ ಬರ್ತೈತಿ ತಲೆಯಾಗ.
ಸೋಡ ಪತ್ರ ಕೊಟ್ಟ ಬರುವಂಗ ಆಕೈತಿ ನನ್ನ ಮನದಾಗ.
ಗಂಡು:-ಮುತ್ತೈದಿಯಾಗಿ ಮತ್ಯಾಕ ಗೆಳತಿ ನಿ ಕೆಟ್ಟ ಬಯಸತಿ.
ಗಂಡನ ಜೋಡಿ ಸುಖವಾಗಿ ಬಾಳ ಆಗೊದ ಆಗೈತಿ.
ಕಣ್ಣೀರ ತರ ಬ್ಯಾಡ ತರ ಬ್ಯಾಡ ತರ ಬ್ಯಾಡ.
ಕಣ್ಣೀರ ತರ ಬ್ಯಾಡಾ ತರ ಬ್ಯಾಡ ನೀ ದೈರ್ಯ ಗೆಡಬ್ಯಾಡ. //ಚರಣ ೪//