top of page
IMG_7077.PNG

Bandidi Bhala Dinaka

ಗಂಡು:-ಬಂದಿದಿ ಬಾಳ ದಿನಕ.ನಿಲ್ಲಾಕ  ಒಂದರ ಘಳಿಗಿ.||

ಮನಸಿನ ಮಾತ ನೀ ಬಿಚ್ಚಿ ಹೇಳ ಕೇಳತ್ತನ ತಲೆದೂಗಿ.||

ಹೊಟ್ಯಾಣ ಸಿಟ್ಟ ರಟ್ಯಾಗ ಆಗ ಇಲ್ಲ.

ಹೇಳುವುದು ಯಾರಿಗಿ.


ಹೆಣ್ಣು:-ಇಬ್ಬರ ಮಣಿ ಬಾಗಿಲಿಗಿ.

 ಅಂತರ ಬರಿ ಒಂದು ಗಳಿಗಿ.||

ಗಳಿಗಿ ಇದ್ದರೂ ಹರದಾರಿ ದೂರ ಹೋದೆವು ದೂರಾಗಿ.||

ಆ ಗಳಿಗಿ ಕಳೆದ ಕೂಡುವ ವ್ಯಾಳೆ ಬರಲಿಲ್ಲ ಬಾಳಿಗಿ.


ಗಂಡು:-ಬಂದಿದಿ ಬಾಳ ದಿನಕ.ನಿಲ್ಲಾಕ  ಒಂದರ ಘಳಿಗಿ.//ಪಲ್ಲವಿ//



ಗಂಡು:-ಗಂಡನ ಮನೆಯಾಗ ನೀ ಹೆಂಗೆ ಅದೀಯ ಹೇಳಾಕ ನನ ಗೆಳತಿ.||

ಗಂಡನ ಪ್ರೀತಿಯ ಹೊಳಿಯಾಗ ಹರದ ಮರೆತೇನ ನನ್ನ ಪ್ರೀತಿ.||

ಅಂಗಳ ಮುಂದ ಇರದಿದ್ದರೇನ. ಮನದಾಗ ನೀ ಇರತಿ.||

ಮರತರು ಮರಿದಿಲ್ಲ ಈ ಪ್ರೀತಿ ಎಂಬುದು ಬೆನ್ನ ಹತ್ತಿ ಬರತೈತಿ.


ಹೆಣ್ಣು:-ಇಬ್ಬರ ಮಣಿ ಬಾಗಿಲಿಗಿ.

 ಅಂತರ ಬರಿ ಒಂದು ಗಳಿಗಿ.||//ಚರಣ ೧//


ಹೆಣ್ಣು:-ಸುರುಗೀಯ ಸುತ್ತೊಳಗ. ಉಡಿಅಕ್ಕಿ ಕಾಳೊಳಗ ಕರಗಐತಿ ನಿನ್ನ ಪ್ರೀತಿ.||

ಮನದಾಗ ಇದ್ದರೂ ನಾಲಿಗೆ ಮ್ಯಾಲ ಅದು ಹ್ಯಾಂಗ ಬರತೈತಿ.||

ಐದು ಮುತ್ತಿನ ಅರ್ಥ ತಿಳಿದಾಗ ಮನಸಂಗ ಜರಿತೈತಿ.||

ಆಗೋದು ಆಗೇತಿ ಹೋಗೋದು ಹೋಗೈತಿ ಮರತರ ಪಾಡಾಯ್ತಿ. 


ಗಂಡು:-ಬಂದಿದಿ ಬಾಳ ದಿನಕ.ನಿಲ್ಲಾಕ  ಒಂದರ ಘಳಿಗಿ.||//ಚರಣ ೨//


ಗಂಡು:-ಸಂಶಯ ಸುಳಿಯಲ್ಲಿ ಬಿರುಗಾಳಿ ಬರದಲ್ಲಿ ಆರತೈತಿ ಪಣತಿ.||

ಕಟಗೊಂಡವಗ ನಮ್ಮ ಸುದ್ದಿ ತಿಳಿದರ ಮುಂದಹಂಗ ಎಲೆ ಗೆಳತಿ.||


ಹೆಣ್ಣು:-ತಿಳಿದರ ತಿಳಿಲಿ ಮುತ್ತೈದೆತನವನ್ನು ಬಾಳಿಗೆ ಸಿಗತೈತಿ.||

ಗಂಡನ ಮುಂದ ಚಿತೆಯಏರಿದರ ಸ್ವರ್ಗವು ನಂದೈತಿ.//ಚರಣ ೩//




ಗಂಡು:-ಬಂದಿದಿ ಬಾಳ ದಿನಕ.ನಿಲ್ಲಾಕ  ಒಂದರ ಘಳಿಗಿ.||

ಮನಸಿನ ಮಾತ ನೀ ಬಿಚ್ಚಿ ಹೇಳ ಕೇಳತ್ತನ ತಲೆದೂಗಿ.||

ಹೊಟ್ಯಾಣ ಸಿಟ್ಟ ರಟ್ಯಾಗ ಆಗ ಇಲ್ಲ.

ಹೇಳುವುದು ಯಾರಿಗಿ.


ಹೆಣ್ಣು:-ಇಬ್ಬರ ಮಣಿ ಬಾಗಿಲಿಗಿ.

 ಅಂತರ ಬರಿ ಒಂದು ಗಳಿಗಿ.

ಆ ಗಳಿಗಿ ಕಳೆದ ಕೂಡುವ ವ್ಯಾಳೆ ಬರಲಿಲ್ಲ ಬಾಳಿಗಿ.

bottom of page