top of page
IMG_7077.PNG

Bittu Hontella Nanna Halli

ಗಂಡು:-ಬಿಟ್ಟು ಹೊಂಟೆಲ್ಲ ನನ್ನ ಹಳ್ಳಿ ಹುಡುಗಿ ವನಗ್ಯಾವ ಹೂಬಳ್ಳಿ||2||

ಏನು ತಿಳಿದಂಗ ಹೊಂಟಿಮಳ್ಳಿ|| 2||

ಗೆಳತಿ ಅಂಗಳಕ ಬಾರ ಹೊಳ್ಳಿ 

ನನ್ನಾ ಅಂಗಳಕ ಬಾರ ಹೊಳ್ಳಿ |


ಹೆಣ್ಣು:-ನಾ ಮರೆತಿಲ್ಲ ನಿನ್ನ ಹಳ್ಳಿ ನೆನಪು ಬರತೈತಿ ಹೊಳ್ಳಿ ಹೊಳ್ಳಿ||2||

ಹುಡುಗಾಟದಾ ನಿನ್ನ ಚಾಳಿ||2||

ಹಾಡಿ ಆಡಿದ ಆ ಓಕಳಿ||2|| 

ಗಂಡು:-ಬಿಟ್ಟು ಹೊಂಟೆಲ್ಲ ನನ್ನ ಹಳ್ಳಿ..//ಪಲ್ಲವಿ//



ಗಂಡು:-ಹಳ್ಳದ ದಂಡ್ಯಾಗ ಗುಬ್ಬಿಯ ಗೂಡಕಟ್ಟಿ ಆಡಿದ್ದು ನೀ ಮರೆತಿಯೇನ ||2||

ಹಾತರಕಿ ಪಲ್ಯ ತಿಂದ ಹರಗ್ಯಾಡಿ  ಬಂದಾಗ ಬಡಸಿಕೊಂಡಿದ್ದು ಮರೆತಿಯೇನ. 

ಮನಸ ತುಡುಗ ಮಾಡಿದ ಕಳ್ಳಿ.||2||

ನನ್ನ ಅಂಗಳಕ ಬಾರೋ ಹೊಳ್ಳಿ 

ಬಿಟ್ಟು ಹೊಂಟೆಲ್ಲ ನನ್ನ ಹಳ್ಳಿ..//ಚರಣ ೧//


ಹೆಣ್ಣು:-ನಮ ಜಾತಿ ಮೇಲ್ ಅಂತ ನಿನ್ನ ಜಾತಿ ಕೀಳಂತ ಹೇಳ್ತಾನ ನಮ್ಮಪ್ಪ ಕುಂತ||2||

ಸಿಟ್ಟಿಲೆ ಕೈಕಾಲ ಕಟ್ಟಿ ಬಡಿತಾನ ನಿನ್ನ ಪ್ರೀತಿ ಮರಿಬೇಕ್ ಅಂತ ನಾ ಇರಬೇಕು ಹೆಂಗ ತಾಳಿ...

ನಾ ಇರಬೇಕು ಹೆಂಗ ತಾಳಿ ನೆನಪು ಬರತೈತಿ ಹೊಳ್ಳಿ ಹೊಳ್ಳಿ.

ನಾ ಮರೆತಿಲ್ಲ ನಿನ್ನ ಹಳ್ಳಿ...


ಹೆಣ್ಣು:-ಸತ್ತರ ಪಾಡ ಮರೆಯೋದು ಬ್ಯಾಡ ಗೋರ್ಯಾಗ ಆಗೀನು ಜೋಡ||2||

ಹಿರಿಯರ ಹಿರಿತನ ಕೊಯ್ತೈತಿ ಗೋಣ ಬಾಳೆಲ್ಲಾ ಮುಳ್ಳಿನ ಪಯಣ. ಇಲ್ಲಿ ಇರುವುದು ಹೆಂಗ ಬಾಳಿ..

ಇಲ್ಲಿ ಇರುವುದು ಹೆಂಗ ಬಾಳಿ ಬಾರಿ ಬಿಟ್ಟೈತಿ ಬಿರುಗಾಳಿ. 

ನಾ ಮರೆತಿಲ್ಲ ನಿನ್ನ ಹಳ್ಳಿ...//ಚರಣ ೨//


ಗಂಡು:- ಜಗ ಐತಿ ಏಡವಟ್ಟಿ ಬರಬೇಕ ನಾವು ದಾಟಿ ಬಾಳೋಣ ಪ್ರೀತಿ ಮನಿ ಕಟ್ಟಿ ||2||

ನಿಲ್ಲೋನು ಎದೆ ತಟ್ಟಿ ಮನಸಿರಲಿ ಗಟ್ಟಿಮುಟ್ಟಿ ಬಾ ಒಳಗ ಹೊಸ್ತಿಲ ದಾಟಿ. ನಾ ಕಟ್ಟಾಕ ತಂದೈನಿ..

 ನಾ ಕಟ್ಟಾಕ ತಂದೈನಿ ನಿನ್ನ ಕೊಳ್ಳಾಗ ಗುಳದಾಳಿ. //ಚರಣ ೩//



ಗಂಡು:-ಬಿಟ್ಟು ಹೊಂಟೆಲ್ಲ ನನ್ನ ಹಳ್ಳಿ ಹುಡುಗಿ ವನಗ್ಯಾವ ಹೂಬಳ್ಳಿ||2||

ಏನು ತಿಳಿದಂಗ ಹೊಂಟಿಮಳ್ಳಿ|| 2||

ಗೆಳತಿ ಅಂಗಳಕ ಬಾರ ಹೊಳ್ಳಿ 

ನನ್ನಾ ಅಂಗಳಕ ಬಾರ ಹೊಳ್ಳಿ |


ಹೆಣ್ಣು:-ನಾ ಮರೆತಿಲ್ಲ ನಿನ್ನ ಹಳ್ಳಿ ನೆನಪು ಬರತೈತಿ ಹೊಳ್ಳಿ ಹೊಳ್ಳಿ||2||

ಹುಡುಗಾಟದಾ ನಿನ್ನ ಚಾಳಿ||2||

ಹಾಡಿ ಆಡಿದ ಆ ಓಕಳಿ|

ನಾನು ನಿನ್ನ ಚರಣ ದೂಳಿ. 

ನಾ ಮರೆತಿಲ್ಲ ನಿನ್ನ ಹಳ್ಳಿ...//ಪಲ್ಲವಿ//

bottom of page