
Bittu Honti Halli

ಗಂಡು:-ಬಿಟ್ಟ ಹೊಂಟಿ ನನ್ನ ಹಳ್ಳಿ.
ಓಮ್ಯಾರ ನೋಡ ಹೊಳ್ಳಿ.
ಹ್ಯಾದರ ನನ್ನ ತಳ್ಳಿ.
ಒಡೆದಂಗ ನೀರ ಗುಳ್ಳಿ.
ಇಟ್ಟಿ ಕೊಳ್ಳಿ.
ಯಾಕ ಸುಳ್ಳಿ.
ಹಾಲಂತ ಕಳ್ಳಿ ಹಾಲ ಕುಡಿಸಿದಿ ಮಳ್ಳಿ.
ಕಡಕೊಂಡಂಗ ಆತ ಕಳ್ಳ ಬಳ್ಳಿ.||
ಹೆಣ್ಣು:-ಮುಗದಂಗ ಊರ ಓಕಳಿ.
ಹರದಂಗ ಪ್ರೀತಿ ಸಾಕಳಿ.
ಕಿತ್ತಂಗ ಗ್ವಾಡಿ ಹಕಳಿ.
ಬಿದ್ದ ಹೋತು ನಿನ್ನ ಟಿಕಳಿ.
ಕಳ್ಳ ಬಳ್ಳಿ.
ಇಟ್ಟೈತಿ ಕೊಳ್ಳಿ.
ನೋಡದಂಗ ಮಾಡಿದೆ ನಾ ನಿನ್ನ ಹೊಳ್ಳಿ.
ಹೊನ್ನ ಶೂಲ ತೀರಿಸಿದಂಗ ಹೊಗಳಿ.||
ಗಂಡು:-ಬಿಟ್ಟ ಹೊಂಟಿ ನನ್ನ ಹಳ್ಳಿ.
ಓಮ್ಯಾರ ನೋಡ ಹೊಳ್ಳಿ.//ಪಲ್ಲವಿ//
ಹೆಣ್ಣು,:-ಆಡಿದ ಹಳ್ಳ ಬತ್ತಿ ಹೋತ.
ಗುಬ್ಬಿಗೂ ಕೂಡ ಮುರಿದಂಗಾತ.
ಕುಡಿದ ಕಳ್ಳ ಕೊರದಂಗಾತ.
ಗುಡುಗಂದು ಆದಂಗಾತ.
ಸಿಡಿಲೊಂದು ಹೊಡೆದಂಗಾತ.
ಈ ಪ್ರೀತಿ ಬೂದಿ ಆದಂಗಾತ.
ಬೂದಿ ಬಳದ ಮೂರ ದಿನಕ ಎಲ್ಲಾ ಮೂಗದಂಗ ಆಗಿ ಹೋತ.
ಇದ್ದವರಿಗ ಏನದಾಡಿ ಅಂದಂಗಾತ.||
ಗಂಡು:-ಬಿಟ್ಟ ಹೊಂಟಿ ನನ್ನ ಹಳ್ಳಿ.
ಓಮ್ಯಾರ ನೋಡ ಹೊಳ್ಳಿ.//ಚರಣ ೧//
ಗಂಡು:-ನಮ್ಮ ಜಾತಿ ಮೇಲಂತ.
ನಿಮ್ಮ ಜಾತಿ ಕೀಳಂತ.
ನಿಮ್ಮಪ್ಪ ಇರಲಿ ಅಲ್ಲಿ ಅನಕೊಂತ.
ಅಳಬ್ಯಾಡ ಗೆಳತಿ ಕುಂತ.
ಮಾಡನಿ ವಿಚಾರ ಸ್ವಂತ.
ಪ್ರೀತಿಗೆ ಜಾತಿ ಎಲ್ಲೈತಂತ.
ಕೈಕಾಲ ಕಟ್ಟಿ ಸಿಟ್ಟಿಲೇ ಬಡದರ ಬಡಿಲಿ ಸುಟ್ಟರ ಸುಡಲಿ ಈ ಪ್ರೀತಿ ಉಳಿಬೇಕಂತ.
ಈ ಪ್ರೀತಿ ಉಳಿಬೇಕಂತ.
ಹೆಣ್ಣು:-ಮುಗದಂಗ ಊರ ಓಕಳಿ.
ಹರದಂಗ ಪ್ರೀತಿ ಸಾಕಳಿ.//ಚರಣ ೨//
ಗಂಡು:-ಸತ್ತರೂ ಮರೆಯುವುದ ಬ್ಯಾಡ.
ಗೊರಿಯಾಗ ಆಗುನು ಜೋಡ.
ಅಂದದ್ದು ಮರತಿ ಎಷ್ಟ ದೌಡ.
ಹಿರಿಯರ ಆ ಹಿರಿತನ.
ಕೊಯ್ದರು ಕೊಯ್ಲಿಗೋಣ.
ಕಡಿತನ ಉಳಿಯಲಿ ಕುಣ.
ಮುಂದಿಟ್ಟ ಹೆಜ್ಜೆ ಹಿಂದೀಡುವುದಿಲ್ಲ ನಾನಾ.
ಹೋದರೂ ಹೋಗಲಿ ಪ್ರಾಣ.||
ಹೆಣ್ಣು:-ಮುಗದಂಗ ಊರ ಓಕಳಿ.
ಹರದಂಗ ಪ್ರೀತಿ ಸಾಕಳಿ.//ಚರಣ ೩//