
Dinaka Moora Sarati

ಹೆಣ್ಣು:-ದಿನಕ ಮೂರು ಸರತಿ.
ತುಳಸಿಯ ಕಟ್ಟಿಸುತಿ.
ಬೇಕಂತ ನಿನ್ನ ಪ್ರೀತಿ.
ಬೆಡೇನಿ ಹನಿ ಹಚ್ಚಿ.||
ಗಂಡು:-ಹತ್ತು ದೇವರ ಸುತ್ತಿ.
ಹರಕೀಯ ಯಾಕ ಹೊರತಿ.
ಬಯಸಿ ಬಡವನ ಪ್ರೀತಿ.
ಕಣ್ಣೀರ ಯಾಕ ತರತಿ.||//ಪಲ್ಲವಿ//
ಹೆಣ್ಣು:-ಸಿರಿತಾಣ ಬಡತನದಾಗ ಬೇದ ಬಾವ ನನಗಿಲ್ಲ.
ಜಗದಾಗ ಪ್ರೀತಿಯ ಹೊರತು ನನಗ್ಯಾವುದು ಮಿಗಿಲಿಲ್ಲ.
ಗಂಡು:-ಕಣ್ಣಿದ್ದು ಕುರುಡರಂಗ ಕಾಲಜಾರಿ ಬೀಳ್ಬ್ಯಾಡ.
ನಿನಗೆ ತಕ್ಕ ವರಣಾನಂತ ಸುಳ್ಳ ಮೋಸ ಹೋಗಬೇಡ.
ಹೆಣ್ಣು :-ಆ ದೇವರ ಮುಂದ ಧೂಪವು ಅಷ್ಟ ಗೆಳೆಯ ದೀಪವು ಅಷ್ಟ ಕರ್ಪುರವು ಅಷ್ಟ. //ಚರಣ ೧//
ಗಂಡು:-ಹತ್ತು ದೇವರ ಸುತ್ತಿ.
ಹರಕೀಯ ಯಾಕ ಹೊರತಿ.
ಬಯಸಿ ಬಡವನ ಪ್ರೀತಿ.
ಕಣ್ಣೀರ ಯಾಕ ತರತಿ.
ಹೆಣ್ಣು:-ದಿನಕ ಮೂರು ಸರತಿ.
ತುಳಸಿಯ ಕಟ್ಟಿಸುತಿ.
ಬೇಕಂತ ನಿನ್ನ ಪ್ರೀತಿ.
ಬೆಡೇನಿ ಹನಿ ಹಚ್ಚಿ.
ಗಂಡು:-ಕೂಲಿ ನಾಲಿ ಮಾಡಿ ಪ್ಯಾಲಿ ಕಳಿತೇನ ಜೀವನ.
ಅರಮನೆ ಇಲ್ಲದ ಬಡವಗ ಗುಡಿಸಲೇ ಪಾವನ.
ಹೆಣ್ಣು:- ಚಿಂದಿ ಉಟ್ಟರು ಚಿಂತಿ ಇಲ್ಲ. ನಿನ್ನ ಜೋಡ ಬಾಳತನ.
ಅರಮನೆ ಅರಗಿಣಿ ಅಂತ ಬಿಡಬ್ಯಾಡ ಕೈ ನೀನ.
ಗಂಡು:-ನೀ ಹಟಕ ಬಿದ್ದ ಕಣ್ಣೀರ ಕೂಳ ತಿಂತಿ.
ಬಿಟ್ಟುಬಿಡನಿ ಬ್ರಾಂತಿ.
ಮಾಡಬ್ಯಾಡ ಒಳ ಚಿಂತಿ.//ಚರಣ ೨//
ಹೆಣ್ಣು:-ದಿನಕ ಮೂರು ಸರತಿ.
ತುಳಸಿಯ ಕಟ್ಟಿಸುತಿ.
ಬೇಕಂತ ನಿನ್ನ ಪ್ರೀತಿ.
ಬೆಡೇನಿ ಹನಿ ಹಚ್ಚಿ.||
ಗಂಡು:-ಹತ್ತು ದೇವರ ಸುತ್ತಿ.
ಹರಕೀಯ ಯಾಕ ಹೊರತಿ.
ಬಯಸಿ ಬಡವನ ಪ್ರೀತಿ.
ಕಣ್ಣೀರ ಯಾಕ ತರತಿ.||