top of page
IMG_7077.PNG

Galilee Kaiyya Korkonda

ಗಂಡು:-ಗಾಜಿಲೆ ಕೈಯ ಕೊರಕೊಂಡ. 

ಮೈಯಾನ ರಕ್ತ ಸುರುಕೊಂಡ. 

ಬಂದೈನಿ ಪತ್ರ ಬರಕೊಂಡ. 

ನೋಡ್ಲಿಲ್ಲ ಕಣ್ಣ ತೆರೆಕೊಂಡ. 

ಎಷ್ಟ ಅತ್ತರೂ ಬಡಕೊಂಡ. 

ಮಾತಾಡಲಿಲ್ಲ ಕಳ್ಳ ಹಿಡಕೊಂಡ. 



ಹೆಣ್ಣು:-ಸಾಯ್ಲೆನೋ ಎಣ್ಣೆ ಸುರಕೊಂಡ.

ವಿಲಿ ವಿಲಿ ಒದ್ದಾಡಿ ಊರಕೊಂಡ.

ಬಂದಾರ ಬಂಡಿ ಹುಡಕೊಂಡ. 

ವೈಯಾಕ ನನ್ನ ಕರಕೊಂಡ.

ವಗದೂಗೊ ಮಣ್ಣ ಬಳಕೊಂಡ.

ಸತ್ತೆನಂತ ತಿಳಕೊಂಡ.



ಗಂಡು:-ಗಾಜಿಲೆ ಕೈಯ ಕೊರಕೊಂಡ. 

ಮೈಯಾನ ರಕ್ತ ಸುರುಕೊಂಡ. //ಪಲ್ಲವಿ//



ಗಂಡು:-ಬಂಡಿ ಹತ್ತಿ ಹೋಗುವಾಗ ಬೀಳುತನ ಅಡ್ಡಡ್ಡ ಗಾಲಿಗಿ. ಗಾಲಿಗಿ.

ಮಾತುಕೊಟ್ಟ ನಾಕದಿನದಾಗ ಬದಲಿಸಿದೀ ನಾಲಿಗಿ. ನಾಲಿಗಿ. 


ಹೆಣ್ಣು:-ವ್ಯಾಲೆ ಹೇಳಿ ಬರುದುಲ್ಲೋ ಹೇಳಿದಂಗೆ ಕೇಳುದುಲ್ಲೋ  ಕಡಿತನಾ. ಕಡಿತನಾ.

ಬ್ರಹ್ಮನ ಬರಹ ಬದಲಾಗುದುಲ್ಲೋ ಹುಗಿತನ ಮಣ್ಣ ಮಾಡುತನಾ.


ಗಂಡು:-ಆಗದ ಮಾತ ಹೇಳಬ್ಯಾಡ ಗೆಳತಿ ನೀ ನನ್ನ ಕೊಲಬ್ಯಾಡ.

 ತಾಳಿ ತೋರಿಸಿ ಅಳಬ್ಯಾಡ ನನ್ನ ತಗುದ ದೂರ ವಗಿಬ್ಯಾಡ.


ಹೆಣ್ಣು:-ತಿಳಿಶಾಂಗ ಹೇಳುದು ತಿಳಿವಾತು ಈ ಜೀವ ಸಟ್ಟಂತ ಹೋಗವಾತು. 


ಗಂಡು:-ಗಾಜಿಲೆ ಕೈಯ ಕೊರಕೊಂಡ. 

ಮೈಯಾನ ರಕ್ತ ಸುರುಕೊಂಡ. //ಚರಣ ೧//




ಗಂಡು:-ಆಕಳ ಮಾರಿಕಿ ಹೊಂಟೆಲ್ಲ ಕ್ಯಾರಹಾಕಿ ಬಾಳಿಗಿ ನನ್ನ ಬಾಳಿಗಿ.

ಕುಂಕುಮ ಹಚ್ಗೊಂಡ ಹೊಳ್ಳಿ ಹೊಳ್ಳಿ ಕೈಮುಗಿತಿ ತಾಳಿಗಿ ನಿನ್ನ ತಾಳಿಗಿ.



ಹೆಣ್ಣು:-ಅಕ್ಕನ ಮಕ್ಕಳ್ನ ಪರದೇಸಿ ಮಾಡಬ್ಯಾಡ ಅಂದರೋ ಅಂದಾರೋ..

ಅಕ್ಕ ಸತ್ತ ಮೇಲೆ ಅಕ್ಕನ ಗಂಡಗ ಕೊಟ್ಟಾರೋ ಮಾಡಿ ಕೊಟ್ಟಾರು..


ಗಂಡು:-ಆ ಮಕ್ಕಳಿಗೆ ಆಗ ತಾಯಿ.. ಮಲತಾಯಿ ಆಗಬ್ಯಾಡ ಅಂತ.

 ಮನಸಾರೆ ಹರಸತನ ಮುತ್ತೈದಿಯಾಗಿ ಬಾಳಂತ.



ಹೆಣ್ಣು:-ವಚನ ಕೊಟ್ಟ ಹೇಳ್ತೀನೋ.

 ನಿನ್ನ ಮಾತಿನಂಗ ನಾ ನಡಿತೇನೋ.


ಗಂಡು:-ಆಗಿದ್ದ ಆತಅಂತ ತಿಳಕೊಂಡ. 

ನಗತೇನ ಎಲ್ಲಾ ಕಳಕೊಂಡ.





bottom of page