top of page
IMG_7077.PNG

Gubbi Goodiddanga Gudisalu Nanda

 (ಗಂಡು:-ಪ್ರೀತಿ ಅನ್ನು ಬಾವಿಗೆ ಹಾರಿದ್ರು ಚೆಂದ ಪ್ರೀತಿ ಅನ್ನೋ ಹಗ್ಗಕ್ಕ ಉರ್ಲ ಹಾಕೊಂಡ್ರು ಚೆಂದ||2||

ಒಂದ ಮಾತಿನ್ಯಾಗ ಹೇಳಬೇಕಂದ್ರೆ ಪ್ರೀತಿಯೊಳಗ ಇದ್ದರೂ ಚೆಂದ ಸತ್ರು ಚೆಂದ 


ಹೆಣ್ಣು:-ಗೆಳೆಯಾ ಪ್ರೀತಿಗಿರೋ ಈ ಹೊಳಪು ಚುಕ್ಕಿಗಿಂತ ಚಂದ. ಪ್ರೀತಿ ಅನ್ನೋ ಗುಡಿಸಲು ಗುಡಿಗಿಂತ ಚಂದ||2||

ಒಟ್ಟಾರೆ ಹೇಳಬೇಕೆಂದರ ಪ್ರೀತಿ ಅನ್ನೋ ಈ ಶಬ್ದ ಚಂದಕ್ಕಿಂತ ಚಂದ.)


ಗಂಡು:-ಗುಬ್ಬಿ ಗೂಡಿದ್ದಂಗ ಗುಡಿಸಲು ನಂದ ಬಡವನ ಬಾಗಿಲಕೊಮ್ಮೆ ನೀ ನೋಡು ಬಂದ ನಿನ್ನ ಮಹಡಿಗಿಂತ ನನ್ನ ಗುಡಿಸಲು ಚಂದ ಓಲ್ಲೆ ಅಂತ್ಹೇಳಿ ವಗಿಬ್ಯಾಡ ಕೊಂದ.

ನಿನ್ನ ಮಹಡಿಗಿಂತ ನನ್ನ ಗುಡಿಸಲು ಚಂದ ಓಲ್ಲೆ ಅಂತ್ಹೇಳಿ ವಗಿಬ್ಯಾಡ ಕೊಂದ.


ಹೆಣ್ಣು:-ಮಹಡಿ ಮನಿ ಮರೆತ ಬರತೆನ ಜೋಡ ನನಗ ಸಾಕೋ ಗೆಳೆಯ ನಿನ್ನ ಗುಬ್ಬಿ ಗೂಡ..

 ನೀ ನನಗ ಜೋಡ ನಾ ನಿನಗ ಜೋಡ ಅಗಲಿ ಅಳುವುದಕ್ಕಿಂತ ಸಾಯೋದ ಪಾಡ||2||//ಪಲ್ಲವಿ//


ಗಂಡು:-ಸಿರಿತನದೆದರೂ ಬಡತನ ಎಂದು ಬಾಳೆ ಮಾಡೇ ಇಲ್ಲ. ತಾಜ್ ಮಹಲಿನ ಮುಂದ ಗುಡಿಸಲು ಚಂದ ಕಾಣೋದಿಲ್ಲ. 


ಹೆಣ್ಣು:-ಪ್ರೀತಿಯ ವೈರಿಯ ಒಡಲನು ಬಗೆದು ಮೆಟ್ಟಿ ನಿಲ್ಲಬೇಕ. ಬಾಳೆಂಬ ದೋಣಿ ಕಡಲಿನ ಅಲೆಯ ದಾಟಿ ನಡೆಯಬೇಕು. 


ಗಂಡು:-ಹೊಳೆಯ ದಾಟಿದ ಮ್ಯಾಲ ಅಂಬಿಗದೇನ. ಗೆಳತಿ ಅನುವಂಗ ಮಾಡಬ್ಯಾಡ ನೀನ. ಪ್ರೀತಿ ಹಾಲು ಜೇನು ಕೂಡಿ ನಾವು ಸವೆಯೋಣ. ಬೇವು ಬೆಲ್ಲ ಬೆರತಾಂಗ ಬಾಳೋಣ.

ನಿನ್ನ ಮಹಡಿಗಿಂತ ನನ್ನ ಗುಡಿಸಲು ಚಂದ ಓಲ್ಲೆ ಅಂತ್ಹೇಳಿ ವಗಿಬ್ಯಾಡ ಕೊಂದ.//ಚರಣ ೧//



ಗಂಡು:-ಸಿರಿತನ ಮನೆತನದಾಟಿ ಬಡವನ ಮನೆಗೆ ಭರತಿ ಹ್ಯಾಂಗ. ಬಡತನದಾಗ ಬಾಳತಿ ಹೆಂಗ ತಾಳತಿ ಹೆಂಗ.|


ಹೆಣ್ಣು:-ಇದ್ದರ ಗೆಳೆಯ ಈ ನಿನ್ನ ಸಂಘ ಬಾಳೆಲ್ಲ ರಂಗ ನನಗೈತಿ ನಿನ್ನ ಪ್ರೀತಿಯ ಗುಂಗ ಆಗಬ್ಯಾಡ ದಂಗ. 


ಗಂಡು:-ಆ ಸ್ವರ್ಗ ಮೂರು ಗೇಣ ಉಳದಂಗ ನಿನ್ನ ಮಾತಿಗೆ ಮನಸು ಆತ ಹುಚ್ಚರಂಗ.

 ಗಂಧ ತೀಡಿ ದಂಗ ರಂಗು ಏರಿದಂಗ ಹಾಡಿ ಹೊಗಳಿದಂಗ ಪ್ರೀತಿಯ ಗುಂಗ||2||//ಚರಣ ೨//


ಹೆಣ್ಣು:-ಮಹಡಿ ಮನಿ ಮರೆತ ಬರತೆನ ಜೋಡ ನನಗ ಸಾಕೋ ಗೆಳೆಯ ನಿನ್ನ ಗುಬ್ಬಿ ಗೂಡ..

 ನೀ ನನಗ ಜೋಡ ನಾ ನಿನಗ ಜೋಡ ಅಗಲಿ ಅಳುವುದಕ್ಕಿಂತ ಸಾಯೋದ ಪಾಡ||2||


ಗಂಡು:-ನಿನ್ನ ಮಹಡಿಗಿಂತ ನನ್ನ ಗುಡಿಸಲು ಚಂದ ಓಲ್ಲೆ ಅಂತ್ಹೇಳಿ ವಗಿಬ್ಯಾಡ ಕೊಂದ.//ಪಲ್ಲವಿ//

bottom of page