
Hachchidi Ninna Hottibyani

ಗಂಡು:-ಹಚ್ಚಿದಿ ನಿನ್ನ ಹೊಟ್ಟಿಬ್ಯಾನಿ.
ನನಗ ಬರುವಂಗ ಶಟಿಬ್ಯಾನಿ.
ಮರೆಯೋದಿದ್ರ ನಮ್ಮ ಓಣಿ.
ಮೊದಲ ಮಾಡಿದ್ಯಾಕ ದೇವರಾಣಿ||
ಹೆಣ್ಣು:-ಆಗ್ಯಾರೋ ನಮ್ಮವರು ನಮಗ ಶನಿ.
ಮನಸಾತು ಒಡದ ಕಲ್ಲ ಕಣಿ.
ಬಡ ಬಡಕೊಂಡ ಕಲ್ಲಿಗೆ ಹನಿ.
ಸಾಯುವಂಗ ನೀ ಸಾಕಿದ ಗಿಣಿ.||
ಗಂಡು:-ಹಚ್ಚಿದಿ ನಿನ್ನ ಹೊಟ್ಟಿಬ್ಯಾನಿ.
ನನಗ ಬರುವಂಗ ಶಟಿಬ್ಯಾನಿ.
ಮರೆಯೋದಿದ್ರ ನಮ್ಮ ಓಣಿ.
ಮೊದಲ ಮಾಡಿದ್ಯಾಕ ದೇವರಾಣಿ||//ಪಲ್ಲವಿ//
ಹೆಣ್ಣು:-ಮದುವೆಯ ಆದರು ವಿಧವೆ ಎಂಗನಾ.
ಮೆಟ್ಟಿದ ಮನೆಯಾಗ ಬಾಳತೇನೋ ನಾನಾ.
ಗಂಡನ ಕುಂಕುಮಾ.
ಇಟಗೊಂಡ ಹನಿಗಂತ.
ಹಣಕಿಸಿ ಕಾಡತೈತಿ ಎಂಥ ಗರತಿ ನೀನಂತ.
ಗಂಡು:-ಹೊತ್ತ ನೋಡಿ ಹೊಂಚಾಕಿ.
ನೂರೆಂಟ ನಾಟಕ ಹೂಡಿ.
ಬ್ಯಾಟಿ ಆಡಿದಂಗ ಹತ್ತಿದೇಣ ಬಂಡಿ.
ಹೆಣ್ಣು:-ಹತ್ತಿದ ಬಂಡಿಗೆ ಕೀಲಿಲ್ಲ.
ಬುಡಮೇಲಾಗುವುದು ಗೊತ್ತಿಲ್ಲ.
ಆಸೆ ಎಂಬುದು ಉಳದಿಲ್ಲ.
ಮುಂದೆ ಹ್ಯಾಂಗ್ ಅಂತ ತಿಳಿದಿಲ್ಲ.||
ಗಂಡು:-ಹಚ್ಚಿದಿ ನಿನ್ನ ಹೊಟ್ಟಿಬ್ಯಾನಿ.
ನನಗ ಬರುವಂಗ ಶಟಿಬ್ಯಾನಿ.
ಮರೆಯೋದಿದ್ರ ನಮ್ಮ ಓಣಿ.
ಮೊದಲ ಮಾಡಿದ್ಯಾಕ ದೇವರಾಣಿ||//ಚರಣ ೧//
ಗಂಡು:-ಅತ್ತ ಇತ್ತ ನೋಡ್ಬಾರದಂತ ಮಾಡುತ್ತಿದ್ದಿ ತಾಕಿತ್ತ.
ಬಟಗಿ ಹಾಕುವಾಗ ಎಲ್ಲಿ ಹೋಗಿತ್ತ ನಿನ್ನ ಚಿತ್ತ.
ಕೈಜಾರಿ ನನ ತುತ್ತ.
ಬ್ಯಾರೆದವನ ಬಾಯಿಗೆ ಬಿತ್ತ.
ತರಬಾರದ ತಂದೀ ನನ್ನ ಬಾಳಿಗೆ ನೀ ಕುತ್ತಾ.
ಹೆಣ್ಣು:-ಮಾತಾಡಬ್ಯಾಡೋ ಗೆಳೆಯ ಏರಿದಂಗ ನೀ ಪಿತ್ತ.
ಹೊಡಿತಂತ ಪ್ರೀತಿ ಮುತ್ತ.
ಅಳತಿ ಯಾಕ ನೀ ಕುಂತ.
ಗಂಡು:-ಮೋಸದ ಮುಳ್ಳ ತುಳಿಸೆದಿ.
ಸುಮ್ಮ ವರ್ಮ ಬೆಳೆಸೇದಿ.
ಕೊಟ್ಟ ಮಾತು ಹೊಳಿಸೇದಿ.
ಗೆಳತಿ ಸಾಯೋಕಷ್ಟ ಉಳಿಸಿದಿ.||//ಚರಣ೨//
ಹೆಣ್ಣು:-ಆಗ್ಯಾರೋ ನಮ್ಮವರು ನಮಗ ಶನಿ.
ಮನಸಾತು ಒಡದ ಕಲ್ಲ ಕಣಿ.
ಬಡ ಬಡಕೊಂಡ ಕಲ್ಲಿಗೆ ಹನಿ.
ಸಾಯುವಂಗ ನೀ ಸಾಕಿದ ಗಿಣಿ.||
ಗಂಡು:-ಹಚ್ಚಿದಿ ನಿನ್ನ ಹೊಟ್ಟಿಬ್ಯಾನಿ.
ನನಗ ಬರುವಂಗ ಶಟಿಬ್ಯಾನಿ.
ಮರೆಯೋದಿದ್ರ ನಮ್ಮ ಓಣಿ.
ಮೊದಲ ಮಾಡಿದ್ಯಾಕ ದೇವರಾಣಿ||