top of page
IMG_7077.PNG

Hadda Harada Vagadangatalla

ಗಂಡು:-ಹದ್ದ ಹರದ ಒಗದಂಗಾತಲ್ಲ.||

ಕಳ್ಳ ಹಿರದ ತೆಗೆದಂಗಾತಲ್ಲ. 

ಹೆಣ್ಣು:-ಹಗ್ಗಕ್ಕ ಕುತುಗಿ ಕೊಟ್ಟಂಗತಲ್ಲ.||

ಪ್ರೀತಿಗೆ ಕೊಳ್ಳಿ ಇಟ್ಟಂಗಾತಲ್ಲ. 

ಗಂಡು:-ಹದ್ದ ಹರದ ಒಗದಂಗಾತಲ್ಲ.

ಹೆಣ್ಣು:-ಹಗ್ಗಕ್ಕ ಕುತುಗಿ ಕೊಟ್ಟಂಗತಲ್ಲ.//ಪಲ್ಲವಿ//



ಗಂಡು:-ಬರದ ಕಳಿಸಿದರ ತೆರೆದ ನೀ ನೋಡಲಿಲ್ಲ ಯಾಕ.

ನನ್ನ ಚೀಟಿಗೆ ಉತ್ತರ ನೀ ಕೊಡಲಿಲ್ಲ ಯಾಕ. 

ಹೆಣ್ಣು:-ಬರೀಲಾಕ ಬರುದುಲ್ಲೋ ಕೊಡಲೆಂಗ ನಾ ಉತ್ತರ.

ಮನದಾಗ ಮೂಡಿತೋ ಉಳಿಸದ ನಿನ್ನ ಚಿತರ.

ಗಂಡು:-ಹಂಗ ಹಿಂಗ ಹೆಂಗರ ಮಾಡಿ ಬಾರಾ ಗೆಳತಿ ನನ್ನ ಹತ್ತಿರ. 

ಹೆಣ್ಣು:-ಹೊಸ್ತಿಲದಾಟಾಕೆಲ್ಲಿ ಬಿಡತ್ತಾರೋ.||

ನೋಡುವರಿಲ್ಲು ನಾ ಇಲ್ಲಿ ಸತ್ತರ.

ಗಂಡು:-ಹದ್ದ ಹರದ ಒಗದಂಗಾತಲ್ಲ.||//ಚರಣ ೧//



ಹೆಣ್ಣು:-ಹಡದ ಕಳ್ಳ ಗೆಳೆಯ ಕಲ್ಯಾಕ ಆಗತಾವ. 

ತಮ್ಮ ಸ್ವಾರ್ಥಕ ನಮ್ಮ ಬಲಿ ಯಾಕ ಕೊಡತಾವ.

ಗಂಡು:-ಒಡಲಿಗೆ ಉರಿ ಹಚ್ಚಿ ಯಾಕರ ಸುಡತಾವ.

ನಡುವಳಿಯಾಗ ಕೈ ಯಾಕ ಬಿಡತಾವ.

ಹೆಣ್ಣು:-ಮನಿತನ ಮಾನ ಉಳಿಸಾಕoತ. ನಿಂತಾರ ಗೋರಿಗೆ ಕಳಿಸಾಕ್ಅಂತ.

ಗಂಡು:-ಹಿರಿತನಕಂತ ಹೋಗೋಣ ಬಲಿಯಾಗಿ. 

ಸತ್ತರು ಉಳಿಯುವನು ಪ್ರೀತಿಗೆ ಹೆಸರಾಗಿ.//ಚರಣ ೨//




ಗಂಡು:-ತಾಜ್ಮಹಲ್ ಕಟ್ಟುವ ಕಸು ನನಗಿಲ್ಲ ಗೆಳತಿ. 

ಹೊಡೆದವ್ವನ ನೆನಸಿ  ಗೆಳತಿ ನೀ ಯಾಕ ಅಳತಿ.

ಹೆಣ್ಣು:-ಆಡಿದ ಅಂಗಳು ನನ್ನ ಅನುಕುಸತೈತಿ. 

ಹುಟ್ಟಿದ ಮಣಿಯು ನನ್ನ ಮರುಗಿಸತೈತಿ. 

ಗಂಡು:-ಹೊಸ್ತಿಲ ದಾಟುವುದು ಸರಳಅಲ್ಲ. ತವರೂರ ಮರಿಯಾಕ ಆಗುವುದಿಲ್ಲ.

ಹೆಣ್ಣು:-ಮಾನ ಹ್ಯಾದ ಮ್ಯಾಲ ಯಾರೂ ಬರುದಿಲ್ಲ.

ಮಾನ ಹ್ಯಾದ ಮ್ಯಾಲ ಯಾರೂ ಕರೆದಿಲ್ಲ.

ಹೂಗುದ ಮೂರ ದಿನಕ್ಕ ಮರಿತಾರಲ್ಲ.

ಗಂಡು:-ಹದ್ದ ಹರದ ಒಗದಂಗಾತಲ್ಲ.||

ಕಳ್ಳ ಹಿರದ ತೆಗೆದಂಗಾತಲ್ಲ. //ಚರಣ ೪//

bottom of page