
Halakki Nudadanga

ಹೆಣ್ಣು:-ಹಾಲಕ್ಕಿ ನುಡದಾಂಗ ನಡದಿತ. ಹಾದ್ಯಾನ ಹಗ್ಗ ಹಾವ ಆದಿತ........
ಹಾಲಕ್ಕಿ ನುಡದಾಂಗ ನಡದಿತ. ಹಾದ್ಯಾನ ಹಗ್ಗ ಹಾವ ಆದಿತ.
ಗಂಡು:-ಹಾಲಕ್ಕಿ ನುಡದೈತಿ ಗೆಳತಿ ಏನ್ ಅಂತ ಬಿಡಿಸೇಳ ನಿನ್ನ ಈ ಒಗಟಿನ ಮಾತ.
ಹೆಣ್ಣು:-ಬುಡಬುಡುಕ್ಯಾ ಬಂದ ಹೇಳ್ಯಾನ ಬಾಗಿಲಕ.. ನಮ್ಮ ಪ್ರೀತಿಗೆ ಐತಂತ ಬಲು ಕೆಡಕ.
ಗಂಡು:-ಅಂಜಿಕಿ ಅಳಕೆಂಬುದು ತಗದಾಕ.
ಮೂಡನಂಬಿಕಿ ಮಾತಿಗಿ ಚಿಂತ್ಯಾಕ..//ಪಲ್ಲವಿ//
ಹೆಣ್ಣು:-ಎಳೆತನದ ನಮ್ಮ ಪ್ರೀತಿ. ಗೆಳೆತನದ ನಮ ಪ್ರೀತಿ. ಹಾಲು ಜೇನು ಕೂಡಿದಂಗ ಕೂಡೈತಿ ನಮ ಪ್ರೀತಿ.
ಗಂಡು:-ನನಗಾಗಿ ನೀ ಹುಟ್ಟಿ ನಿನಗಾಗಿ ನಾ ಹುಟ್ಟಿ ಅಂದಾಗ ಆಗಿರಬೇಕು ನನಗೂ ನಿನಗೂ ಭೇಟಿ.
ಹೆಣ್ಣು:-ನೀ ಇಲ್ಲದ ಬರೀ ಅರಗಳಿಗಿ ಕಳೆದಾಂಗ ನೂರು ವರ್ಷ. ಎದುರಿಗೆ ನೀ ಇಲ್ಲದಾಗ ಮನಸ್ಸಿಗೆಲ್ಲಿ ಸೊಗಸ.
ಗಂಡು:-ಇದಕ್ಕ ಪ್ರೀತಿ ಅಂದಾರ ಪ್ರೀತಿಗಾಗಿ ಸತ್ತವರ. ಆಸ್ತಿ ಅಂತಸ್ತು ಪ್ರೀತಿಗಾಗಿ ತ್ಯಾಗ ಮಾಡ್ಯಾರ. ಯಾಕಳತಿ ಬುಡುಬುಡುಕ್ಯ ನುಡದರ. ಹಾಲಕ್ಕಿ ಬರಿದುಲ್ಲ ಜಗದ ಹಣೆಬರ.
ಹೆಣ್ಣು:-ಹಾಲಕ್ಕಿ ನುಡದಾಂಗ ನಡದಿತ. ಹಾದ್ಯಾನ ಹಗ್ಗ ಹಾವ ಆದಿತ......//ಚರಣ ೧//
ಗಂಡು:-ಕಾಗಿ ಒಂದು ಕುಂಡ್ರುವುದಕ. ತಪ್ಪಿ ಟ್ವಂಗಿ ಮುರಿಯುವುದಕ. ಬುಡಬುಡುಕ್ಯ ನುಡಿಯುವುದಕ. ನುಡಿದಂಗ ನಡದಿರಬೇಕ.
ಹೆಣ್ಣು:-ಗೆಳೆಯ ಅಲ್ಲ ಗಳಿಬ್ಯಾಡ. ಮೈಮರಥ ನಗಬ್ಯಾಡ. ಹಾಲಕ್ಕಿ ನುಡದಾಂಗ ಅಗಲಿ ಅಳುವುದು ಬ್ಯಾಡ.
ಗಂಡು:-ಹಣೆಯಕ್ಕಿ ಕೂಡಿದರೆ ಹಡೆದವರ ಬ್ಯಾಡಂತ. ಪ್ರೀತಿಲ್ದ ಜಗದಾಗ ಯಾರಿಗೆ ಯಾರಂತ.
ಹೆಣ್ಣು:-ತಿಳದಿ ಅಲ್ಲಿ ಸರಳಂತ ಬುದ್ಧಿ ಹೇಳ್ತಿ ನಿ ಕುಂತ. ಕಳಕೊಂಡ ಮ್ಯಾಲ ಕೊರಗುವ ಮೊದಲ ಭಾಗಿರಬೇಕಂತ. ದೈವದ ಆಟ ಯಾರು ಬಲ್ಲವರಂತ. ಹಾಲಕ್ಕಿಯ ಶಕುನ ತಿಳದಿ ಹಗರಂತ.
ಗಂಡು:-ಅಂಜಿಕೆ ಅಳಕೆಲ್ಲ ಗೆಳತಿ ತಗಧಾಕ..
ಮೂಡನಂಬಿಕಿ ಮಾತಿಗಿ ಚಿಂತ್ಯಾಕ....//ಚರಣ ೨//
ಹೆಣ್ಣು:-ಕಟುಕ ಹಿರಿಯರ ಕಾಟ ಜಾತಿಯ ಜಂಜಾಟ ಜಾಲಿಯ ಮುಳ್ಳಾಗಿ ತರಬಾರದು ಗೋಳಾಟ.
ಗಂಡು:-ನಿಂತರ ತಲಿಕೆಟ್ಟ ಯಾತರ ಗೋಳಾಟ. ಬದುಕುವುದಿಲ್ಲ ನಿನ್ನ ಬಿಟ್ಟ. ವೊಗದರ ಒಗಲಿ ನನ್ನ ಸುಟ್ಟ.
ಹೆಣ್ಣು:-ಇದ್ದಾರ ಒಗ್ಗಟ್ಟ. ಬರುದಲ್ಲೋ ಬಿಕ್ಕಟ್ಟ. ಭರತೇನಲ್ಲೂ ಒಗ್ಗಟ್ಟ. ಅಡಿ ಒಳಗ ಅಡಿ ಇಟ್ಟ.
ಗಂಡು:-ಸಂಶಯ ಸುಳಿಬಿಟ್ಟ. ನಂಬಿಕೆಯ ಮನೀಯ ಕಟ್ಟ. ಹಾಲಕ್ಕಿ ಮಾತು ಗೆಳತಿ ಬಾವಿಗೆ ತಗದ ಹೆಟ್ಟ. ಬಾಳೋಣ ಹೆಗಲಿಗೆ ಹೆಗಲ ನಾವು ಕೊಟ್ಟ. ಉನ್ನೋನು ಪ್ರೀತಿ ಬುತ್ತಿ ಬಿಚ್ಚಿಟ್ಟ.//ಚರಣ೩//
ಹೆಣ್ಣು:-ಹಾಲಕ್ಕಿ ನುಡದಾಂಗ ನಡದಿತ. ಹಾದ್ಯಾನ ಹಗ್ಗ ಹಾವ ಆದಿತ..
ಗಂಡು:-ಅಂಜಿಕೆ ಅಳಕೆಲ್ಲ ಗೆಳತಿ ತಗಧಾಕ..
ಮೂಡನಂಬಿಕಿ ಮಾತಿಗಿ ಚಿಂತ್ಯಾಕ...
ಹೆಣ್ಣು:-ಬುಡಬುಡುಕ್ಯಾ ಬಂದ ಹೇಳ್ಯಾನ ಬಾಗಿಲಕ.. ನಮ್ಮ ಪ್ರೀತಿಗೆ ಐತಂತ ಬಲು ಕೆಡಕ.
ಗಂಡು:-ದೈವದ ಮ್ಯಾಲ ಭಾರ ನಿ ಹಾಕ. ನಂಬಿಕೆ ಕಾಯತೈತಿ ಕಡೆ ತನಕ....//ಚರಣ೩//