top of page
IMG_7077.PNG

Hali Suddi Tagibyada

ಹೆಣ್ಣು:-ಹಳಿ ಸುದ್ದಿ ತಗಿಬ್ಯಾಡ.. ನನ್ನ ಗಂಡಗ ಹೇಳಬ್ಯಾಡ... ಕೈಮುಗದ ಕೇಳತೇನೋ. ನನ್ನ ತಾಳಿಯ ಹರಸಬ್ಯಾಡ. 


ಗಂಡು:-ಇಬ್ಬರ ನಮಗುಲ್ಲ. ನಾ ಹೇಳುತನ ಬಿಡುವುದಿಲ್ಲ. ನಿನ್ನಾಟ ನಡೆದುಲ್ಲ. ಕೈಯ ಮುಗಿಬ್ಯಾಡ ಬೆಲಕುಲ್ಲ.


ಹೆಣ್ಣು:-ಹಳಿ ಸುದ್ದಿ ತಗಿಬ್ಯಾಡ.. ನನ್ನ ಗಂಡಗ ಹೇಳಬ್ಯಾಡ...//ಪಲ್ಲವಿ//


ಗಂಡು:-ಹಚ್ಚಗೊಂಡಂಗ ಮದರಂಗಿ... ಸುರುಗಿಸುತ್ತಿದೆಂಗ ಬೋರಂಗಿ.. ಕೊಟ್ಯಾಕ ಆಗ ಚೊಂಗಿ.. ಹರದ್ಯಾಕ ಈಗ ಅಂಗಿ.. ಬಿಡುದಿಲ್ಲ ನಿನ್ನ ನಿಂಗಿ. ನೀ ಮಾಡಿದೆಲ್ಲ ನನ್ನ ಪೆಂಗಿ. 


ಹೆಣ್ಣು:-ಉಂಡ ಮನೀಏಡ್ಡ ಬಗದ.. ಕುಲಗೆಟ್ಟು ಕುಣಿಬ್ಯಾಡ. ಒಗತನ ಒಡಸಬ್ಯಾಡ. ಒಳ್ಳೆ ಬೀಗತನ ಬಿಡಿಸಬ್ಯಾಡ. ನಾವೊಂದು ಬಗದರ. ಆ ದೈವ ಒಂದು ಬಗದೋತ.


ಗಂಡು:-ಇಬ್ಬರ ನಮಗುಲ್ಲ. ನಾ ಹೇಳುತನ ಬಿಡುವುದಿಲ್ಲ.//ಚರಣ ೧//


ಹೆಣ್ಣು:-ಮಾನಗೆಟ್ಟ ಬದುಕುದ್ಯಾಕೋ. ಹಾದಿಹೆಣಾ ಆಗುವುದ್ಯಾಕೋ. ಹರಲಿ ಹೊತ್ತ ಬದುಕುದ್ಯಾಕೋ. ತವರಿನ ಹೆಸರ ಕೆಡಿಸುದ್ಯಾಕೋ. ತಪ್ಪಿ ಮಾಡಿದ ತಪ್ಪಿಗಿ. ನಾ ಸತ್ತ ವಾದ್ರ ಬಲು ಪಾಡೋ.


ಗಂಡು:-ನೀ ಸತ್ರನಂದೇನ. ಮಾತನ್ಯಾಗ ಕೊಂದೆನ. ನಿನ್ನ ಮನಸ ನೋಡಿನ. ಸುಳ್ಳ ತಕರಾರ ತಗದೆನ. ತವರೂರ ಹೆಸರನ್ನ ಗೆಳತಿ ಉಳಸೋಗ ಕಡಿತಾನ.



ಹೆಣ್ಣು:-ಒಪ್ಪಿದೆನೋ ಗೆಳೆತನ. ನೀ ಉಳಿಸಿದಿ ಓಗತಾನ. ಮರಿದುಲ್ಲ ಸಾಯುತನ. ನಿನ್ನ ಮನಸ್ಸಿನ ಹಿರೇತಾಣ.


ಗಂಡು:-ತಗದೊಗೆರಿ ಹಗೆತಾಣ. ಹಿಂಗ ಇರಬೇಕ್ರಿ ಗೆಳೆತನ. ಮಣ್ಣಾಗ ಮಣ್ಣಾದರು. ಕುನಉಳಿಬೇಕ್ರಿ ಕಡಿತಾನ.


ಗಂಡು&ಹೆಣ್ಣು:-ಮಣ್ಣಾಗ ಮಣ್ಣಾದರು. ಕುನಉಳಿಬೇಕ್ರಿ ಕಡಿತಾನ.//ಚರಣ ೨//



bottom of page