top of page
IMG_7077.PNG

Hoditini Baditini Antara

ಹೆಣ್ಣು:-ಹೊಡಿತೀನಿ ಬಡಿತೀನಿ ಅಂತಾರಾ. ಬರಬ್ಯಾಡ ಮನೆಯ ಸುದ್ದಿ. ಸಿಕ್ಕರ ಸಾಕ ಕಡಿತೀನಂತ ಕಾದಾರ ಬೆನ್ನ ಹತ್ತಿ. 

ಹೇಳುತ್ತೇನ ಗೆಳೆಯ ಮುಟ್ಟಿ ನಾನೇತ್ತಿ. 

ಮಸಗೊಂಡ ಕುಂತಾರಲೋ ಕತ್ತಿ.

ಗಂಡು:-ಹೋದರ ಹೋಗಲಿ ಈ ಪ್ರಾಣ. ಮನಸಿರಲಿ ಗೆಳತಿ ಗಟ್ಟಿ.

 ಅಗಲೋದು ಬ್ಯಾಡ ಹೇಳತೇನ ಗೆಳತಿ ನಾಯೆದೆಯ ಮುಟ್ಟಿ. 

ಕುಂತಿನ ಕನಸ ಗೆಳತಿ ನಾ ಕಟ್ಟಿ.

ಉರಿಸಬ್ಯಾಡ ಏನರ ಹೇಳಿ ನನ್ನ ಹೊಟ್ಟಿ.||//ಪಲ್ಲವಿ//

ಹೆಣ್ಣು:-ಕುಂತೀನೋ ಎದೆ ಒಡೆದ. 

ಆಸೆಯ ನಾ ತಡದ. 

ಬಿಡಿಸಿರೋ ಬಾಯಿ ಕಟ್ಟಾಕಿ ನನ್ನ ಬಡದ. 

ಬಾಗಿಲ ನಾ ತೆರೆದ. ಬಂದೀನಿ ನಾ ಸರದ. 

ಹೇಳಾಕ ನಿನ್ನ ನೋಡಿ ಕಣ್ಣೀರ ನಾ ತಡದ.

ಗಂಡು:-ನಿನ ಮಾರಿ ನೋಡಿ ನೋಡಿ. 

ಬಂದಯ್ನಿ ಓಡೋಡಿ.

 ಅಳಬ್ಯಾಡ ಗೆಳತಿ ಮಾರಿಯ ಮರಿ ಮಾಡಿ. 

ಹೆಣ್ಣು:-ಹೆದರಿಸಿ ಬೆದರಿಸಿ ಕೇಳ್ಯಾರ ನಿನ್ನ.

ಉಳಿಗಾಲ ಇಲ್ಲಂತ ಪ್ರೀತಿಗೆ ಇನ್ನ. 

ಮಾರಿಕಂಡ ಜೀವ ತಡಿಲಿಲ್ಲ. 

ಆಸೆ ನನ್ನಲ್ಲಿ ಉಳಿದಿಲ್ಲ.||

ಗಂಡು:-ಹೋದರ ಹೋಗಲಿ ಈ ಪ್ರಾಣ. ಮನಸಿರಲಿ ಗೆಳತಿ ಗಟ್ಟಿ.

 ಅಗಲೋದು ಬ್ಯಾಡ ಹೇಳತೇನ ಗೆಳತಿ ನಾಯೆದೆಯ ಮುಟ್ಟಿ. 

ಕುಂತಿನ ಕನಸ ಗೆಳತಿ ನಾ ಕಟ್ಟಿ.

ಉರಿಸಬ್ಯಾಡ ಏನರ ಹೇಳಿ ನನ್ನ ಹೊಟ್ಟಿ.||//ಚರಣ ೧//

ಗಂಡು:-ಬರಕೋ ನಿನ್ನ ಎದೆಯಾಗ.

ಕಟುಗೋ ಮಾತ ಪದರಾಗ. 

ಮನಸ ಕೊಟ್ಟಿ ಗೆಳತಿ ಅಂದ ನಾ ನಿನ್ನ ಕರೆದಾಗ. 

ಕಸರಿಲ್ಲ ನನ್ನ ಪ್ರೀತಿಯಾಗ. ಪ್ರೀತಿಯ ರೀತ್ಯಾಗ.

ಆಣಿ ಮಾಡಿ ಹೇಳುತ್ತೇನ ಮನೆಯ ದೇವರ ಮ್ಯಾಲ.

ಹೆಣ್ಣು:-ಹೋಗೋ ಗೆಳೆಯ ಕರ್ಕೊಂಡ. 

ಭರತೇನಿ ಕೈ ಹಿಡಕೊಂಡ. 

ಅತ್ತೆನೀ ಬಡಕೊಂಡ.ನನ್ನಾಸೆ ಬಳಕೊಂಡ.

ಗಂಡು:-ಮರಿಲ್ಯಂಗ ನಿನ್ನ ಕಣ್ಣ. ಹತ್ಯಾವ ನನ್ನ ಬೆನ್ನ. ಆಗಬ್ಯಾಡ ನೀ ಸಣ್ಣ. ನಾ ಕೈಯ ಬಿಡುದಿಲ್ಲ.

ನಂಬಿಸಿ ಮೋಸ ಮಾಡುವುದಿಲ್ಲ.||

ನೀನಿಲ್ಲದ ನಾ ಬದುಕುವುದಿಲ್ಲ.

ಹೆಣ್ಣು:-ಹೊಡಿತೀನಿ ಬಡಿತೀನಿ ಅಂತಾರಾ. ಬರಬ್ಯಾಡ ಮನೆಯ ಸುದ್ದಿ. ಸಿಕ್ಕರ ಸಾಕ ಕಡಿತೀನಂತ ಕಾದಾರ ಬೆನ್ನ ಹತ್ತಿ. 

ಹೇಳುತ್ತೇನ ಗೆಳೆಯ ಮುಟ್ಟಿ ನಾನೇತ್ತಿ. 

ಮಸಗೊಂಡ ಕುಂತಾರಲೋ ಕತ್ತಿ.||//ಚರಣ೨//

ಹೆಣ್ಣು:-ಬೀಳತಾವ ಕೆಟ್ಟ ಕನಸ. 

ಹೆದರ ಐತಿ ನನ ಮನಸ. 

ಜೀವಕ್ಕೆ ಇಲ್ಲದಂಗ ಆಗೈತಿ ಸೊಗಸ.||

ಗಂಡು:-ಹೋಗಂಗಿಲ್ಲ ನಾ ಬಿಟ್ಟ. 

ಬಾಳೋನಂತ  ಮನಸಿಟ್ಟ.

ನನ್ನಂಗ ಮಾತ ಕೊಡ ಕೈಯಾಗ ಕೈಇಟ್ಟ.

ಹೆಣ್ಣು:-ಭರತೇನ ನಾ ಹೊಂಟ. ಹಾಕಿ ಬಿಡು ಮೂರು ಗಂಟ. ಸೊಗಸಿಲ್ಲ ನನಗೋಟ್ಟ.

ಬರುತ್ತೇನ ನಾ ಮಣಿ ಬಿಟ್ಟ.

ಪ್ರೀತಿಗೆ ಗೆಳೆಯ ಬೆಲೆಯ ನಾ ಕೊಟ್ಟ.|||//ಚರಣ ೩//

ಗಂಡು:-ಹೋದರ ಹೋಗಲಿ ಈ ಪ್ರಾಣ. ಮನಸಿರಲಿ ಗೆಳತಿ ಗಟ್ಟಿ.

 ಅಗಲೋದು ಬ್ಯಾಡ ಹೇಳತೇನ ಗೆಳತಿ ನಾಯೆದೆಯ ಮುಟ್ಟಿ. 

ಕುಂತಿನ ಕನಸ ಗೆಳತಿ ನಾ ಕಟ್ಟಿ.

ಉರಿಸಬ್ಯಾಡ ಏನರ ಹೇಳಿ ನನ್ನ ಹೊಟ್ಟಿ.||

ಹೆಣ್ಣು:-ಹೊಡಿತೀನಿ ಬಡಿತೀನಿ ಅಂತಾರಾ. ಬರಬ್ಯಾಡ ಮನೆಯ ಸುದ್ದಿ. ಸಿಕ್ಕರ ಸಾಕ ಕಡಿತೀನಂತ ಕಾದಾರ ಬೆನ್ನ ಹತ್ತಿ. 

ಹೇಳುತ್ತೇನ ಗೆಳೆಯ ಮುಟ್ಟಿ ನಾನೇತ್ತಿ. 

ಮಸಗೊಂಡ ಕುಂತಾರಲೋ ಕತ್ತಿ.||

bottom of page