top of page
IMG_7077.PNG

Hogoda Hogati Benki Hachchi Hoga

ಗಂಡು:-ಹೋಗೋದ ಹೋಗತಿ ಬೆಂಕಿ ಹಚ್ಚಿ ಹೋಗ.

ಹಳ್ಳಿ ನೋಡುದ್ಯಾಕ ಹೊಂಟ ನಿಂತ ಮ್ಯಾಲ.||

ಸಾವು ಸಹಿತ ಮಾಡದಾತು ನನ್ನ ಗೆಳೆತನ.

ನನ್ನ ಮ್ಯಾಲ ಅದಕೂ ಇರಬೇಕು ಎಷ್ಟರ ಹಗೆ ತಾಣ.


ಹೆಣ್ಣು:-ಇರಲಿಲ್ಲ ಗೆಳೆಯ ನಿನ್ನ ಕೂಡುವ ಯೋಗ. 

ಮರೆತಿಲ್ಲ ಕೂಡಿ ಆಡಿದಂತ ಜಾಗ. 

ಕೆಟ್ಟ ದೃಷ್ಟಿ ಹತ್ತಿ ಮಾಡಿ ಹೋಗಿತಿ ಗೆಳೆತನ. 

ಕೂಡಿ ಇರಬೇಕಂದ್ರ ವಿಧಿ ಬಿಡಲಿಲ್ಲ ಕಡಿತಾನ.//ಪಲ್ಲವಿ//



ಗಂಡು:-ಸ್ವರ್ಗ ಸುಖ ಎದ್ದಕಂತ. 

ಮಹಡಿ ಮಣಿ ಬ್ಯಾಡಂತ. 

ಮನಸು ಮನಸು ಕೂಡಿದರ.

ಗುಡಿಸಲೊಂದು ಸಾಕಂತ.

ಹೆಣ್ಣು:-ಮದುವೆ ಅಂದ್ರೆ ನಿಜ ಅಂತ. 

ಪ್ರೀತಿ ಅಂದ್ರ ಸುಳ್ಳಂತ.

ಅದರೊಳಗ ಏನೈತಂತ. 

ಕೇಳತಾರೆ ಬೈಕೊಂತ. 

ಗಂಡು:-ತಗಿಯ ಗೆಳತಿ ಇವರದು ಯಾತರ ಬಿಗತಾನ. 

ಇವರು ಮಾಡಿದಂತ ಮದುವಿ ಮುರಿದಿಲ್ಲಲೇನ.

ಪ್ರೀತಿ ಇಲ್ದ ಮದವಿಗಿ ಎಂದ ಅರ್ಥ ಆಯ್ತತೆನ.

ಮನಸಾ ಇಲ್ಲದ ಮದುವ ಎಂದು ಉಳಿದಿಲ್ಲ ಕೊನೆತನ.//ಚರಣ ೧//





ಹೆಣ್ಣು:-ಸೊಸಿಯಮಾಡಿಕೊಳ್ಳಾಕಂತ. 

ಬಟಗಿ ಹಾಕತಾರಂತ.

ಇಂದು ಯಾರ ಬರ್ತಾರಂತ.

ಬೀಗರ ಆಗಬೇಕಂತ. 

ಗಂಡು:-ನಿನ್ನ ಬಟಗಿ ಆಗಾಕಂತೂ. 

ಬಿಡುದಿಲ್ಲ ನಾನಂತೂ. 

ನೀನಂತೂ ನನ್ನ ಸ್ವತ್ತು. 

ಐತಿ ಗೆಳತಿ ಊರಿಗೆ ಗೊತ್ತು.

ಹೆಣ್ಣು:-ಅದು ಬಾರಿ ಶ್ರೀಮಂತರ ಮನೆತನ. 

ಅವರೆದರು ನಿನಗೆಲ್ಲಿ ಐತಿ ಮಾನ.

ಸ್ಥಾನ ಮಾನ ಜಿದ್ದಿಗೆ ಬಿದ್ದರ ಹೋಗುವುದು ಪ್ರಾಣ. 

ಯಾಕರಬೇಡಿ ಬಂದೆ ಗೆಳೆಯ ಬಾಳಿಗೆ ಬಡತನ.//ಚರಣ ೨//


ಗಂಡು:-ಹೋಗೋದ ಹೋಗತಿ ಬೆಂಕಿ ಹಚ್ಚಿ ಹೋಗ.

ಹಳ್ಳಿ ನೋಡುದ್ಯಾಕ ಹೊಂಟ ನಿಂತ ಮ್ಯಾಲ.||

ಸಾವು ಸಹಿತ ಮಾಡದಾತು ನನ್ನ ಗೆಳೆತನ.

ನನ್ನ ಮ್ಯಾಲ ಅದಕೂ ಇರಬೇಕು ಎಷ್ಟರ ಹಗೆ ತಾಣ.


ಹೆಣ್ಣು:-ಇರಲಿಲ್ಲ ಗೆಳೆಯ ನಿನ್ನ ಕೂಡುವ ಯೋಗ. 

ಮರೆತಿಲ್ಲ ಕೂಡಿ ಆಡಿದಂತ ಜಾಗ. 

ಕೆಟ್ಟ ದೃಷ್ಟಿ ಹತ್ತಿ ಮಾಡಿ ಹೋಗಿತಿ ಗೆಳೆತನ. 

ಕೂಡಿ ಇರಬೇಕಂದ್ರ ವಿಧಿ ಬಿಡಲಿಲ್ಲ ಕಡಿತಾನ.


ಗಂಡು:-ಸಾವು ಸಹಿತ ಮಾಡದಾತು ನನ್ನ ಗೆಳೆತನ.

ಹೆಣ್ಣು:-ಕೂಡಿ ಇರಬೇಕಂದ್ರ ವಿಧಿ ಬಿಡಲಿಲ್ಲ ಕಡಿತಾನ.


bottom of page