top of page
IMG_7077.PNG

Hu Andra Maduvi Ninna Agava

ಗಂಡು:-ಹೂ ಅಂದ್ರ ಮಧವಿ ನಿನ್ನ ಆಗಾವಾ.||

ಇಲ್ಲಂದ್ರ ಬಾವಾನಂಗ ಉಳಿಯಾವ. 

ನಿನ್ನ ಮನೆಯ ಸಂದಿ ಗೊಂದಿ ಸುಳಿಯಾವ.

ನಿನಮಾರಿ ನೋಡಿ ಹೊತ್ತ ಕಳಿಯಾವ. 


ಹೆಣ್ಣು:-ನೀ ನಮ್ಮವ್ವನ ತಮ್ಮ ಅಲ್ಲ.

 ಸ್ವಾಧರ ಅತ್ತಿಯ ಮಗನು ಅಲ್ಲ. 

ಕಳಬಳ್ಯಗಂತೂ ಮೊದಲಲ್ಲ.

ನಿನ್ನ ಜೋಡಿ ಸುರುಗಿ ನಾ ಸುತ್ತುದುಲ್ಲೋ.||

ನಿನ ಕಿರ ಬಳ್ಳ ನಾನೇನು ಹಿಡಿದುಲ್ಲೋ.


ಗಂಡು:-ಹೂ ಅಂದ್ರ ಮಧವಿ ನಿನ್ನ ಆಗಾವಾ.

ಇಲ್ಲಂದ್ರ ಬಾವಾನಂಗ ಉಳಿಯಾವ. //ಪಲ್ಲವಿ//



ಗಂಡು:-ನಿನ್ನ ಸಲುವಾಗಿ ಮಾಡಿ ಸಿಟ್ಟೈನಿ ಎಕ್ಸರ ಬೋರ್ಮಳ.||

ತಾಳಿ ಮಾಡಿಸಿ ಇಟ್ಟೈನಿ ಹುಡುಗಿ ಆಗಾವ ಆರು ತಿಂಗಳ. 

ಹೆಣ್ಣು:-ನಿನ್ನ ನೋಡಿರ ಕುದಿಯತೈತೋ ಒಳಗ ಕಳಕಳ.

ಬಂಗಾರ ಬೆಳ್ಳಿ ಆಸ ಹಚ್ಚಬ್ಯಾಡ ಹೋಗೋ ಸುಳ್ಳ ಸುಳ್ಳ.

ಗಂಡು:-ಗರಡಿ ಮಜಲಾ ಮ್ಯಾಳ. 

ಹಚ್ಚಿ ಎಬ್ಬಿಸುನು ಬಾರ ಗುಗ್ಗುಳ. 

ಹೆಣ್ಣು:-ಹಾಕಬ್ಯಾಡ ಸಿಳ್ಳ.

ಮಾಡಬ್ಯಾಡೋ ಮಳ್ಳ. 

ಗಂಡು:-ಬಿಗಿಸಿದರ ನಿನಗ ಬಾಸಿಂಗ ಬಿಗಸಾವ.||

ಇಲ್ಲಂದ್ರ ಭಾವಾನಂಗ ಉಳಿಯಾವ.//ಚರಣ ೧//


ಹೆಣ್ಣು:-ನೀ ನಮ್ಮವ್ವನ ತಮ್ಮ ಅಲ್ಲ.

 ಸ್ವಾಧರ ಅತ್ತಿಯ ಮಗನು ಅಲ್ಲ. 

ಕಳಬಳ್ಯಗಂತೂ ಮೊದಲಲ್ಲ.


ಗಂಡು:-ಹೂ ಅಂದ್ರ ಮಧವಿ ನಿನ್ನ ಆಗಾವಾ.

ಇಲ್ಲಂದ್ರ ಬಾವಾನಂಗ ಉಳಿಯಾವ. 



ಗಂಡು:-ಆಚಾರ್ಯಾರೀನ ಅಗಾವ ಹೋಗಿ ಬುಕ್ಕ ಮಾಡ್ತೇನ.||

ನಿಬ್ಬಣಕಂತ ಗೌಡರ ಟ್ರಕಿಗೆ ಅಡ್ವಾನ್ಸ್ ಕೊಡತನ.

ಹೆಣ್ಣು:-ಆಚಾರ್ರಿಗೆ ಕೈಯ ಮುಗಿದ ಕಳಿಸಿಕೊಡುತ್ತೇನ.

 ನಿಬ್ಬಣ ಗಾಡಿ ನಡು ಹಾದ್ಯಾಗ ಪಂಚರ್ ಮಾಡತನ.

ಗಂಡು:-ಏ ಮಾಡಬ್ಯಾಡ ಹಗಣ.

ನಿನ್ನ ಆಗವ ನಾ ಲಗ್ನ.

ಹೆಣ್ಣು:-ಬೆಳತನ ಮಾಡಿ ಭಜನಾ. 

ಗೊತ್ತೈತಿ ನಿನ್ನ ಭಜನಾ. 

ಗಂಡು:-ಹೂ ಅಂದ್ರ ಹಂದ್ರ ನಾ ಹಾಕ್ಸವಾ.||

ಇಲ್ಲಂದ್ರ ಬಾವಾನಂಗ ಉಳಿಯಾವ.//ಚರಣ ೨//



ಹೆಣ್ಣು:-ನೀ ನಮ್ಮವ್ವನ ತಮ್ಮ ಅಲ್ಲ.

 ಸ್ವಾಧರ ಅತ್ತಿಯ ಮಗನು ಅಲ್ಲ. 

ಕಳಬಳ್ಯಗಂತೂ ಮೊದಲಲ್ಲ.

ನಿನ್ನ ಜೋಡಿ ಸುರುಗಿ ನಾ ಸುತ್ತುದುಲ್ಲೋ.||

ನಿನ ಕಿರ ಬಳ್ಳ ನಾನೇನು ಹಿಡಿದುಲ್ಲೋ.


ಗಂಡು:-ಹೂ ಅಂದ್ರ ಮಧವಿ ನಿನ್ನ ಆಗಾವಾ.

ಇಲ್ಲಂದ್ರ ಬಾವಾನಂಗ ಉಳಿಯಾವ. 


ಹೆಣ್ಣು:-ನಿನ್ನ ಜೋಡಿ ಸುರುಗಿ ನಾ ಸುತ್ತುದುಲ್ಲೋ.

ನಿನ ಕಿರ ಬಳ್ಳ ನಾನೇನು ಹಿಡಿದುಲ್ಲೋ.




bottom of page