top of page
IMG_7077.PNG

Hudugyara Sahavasa Byada

ಗಂಡು:-ಹುಡುಗ್ಯಾರ ಸಹವಾಸ ಇದ್ದಂಗ ವನವಾಸ.

ಸಾಯಬ್ಯಾಡೋ ನೀ ಉಪವಾಸ.||

ಕಟುಗೋತಿ ನೀ ಕನಸ. ಕೊಟಗೋತಿ ನಿನ್ನ ಮನಸ.

ಹೋಕಂಗ ಆಗುತ್ತಿಯೋ ತೊಣಸ||

ಹದಾ ಮುಗುದರ ಅರದ ಹೋಗತ್ತಾರೋ ತಲಿಯಾಗ ಮೆಣಸ. 

ಹುಡುಗ್ಯಾರ ಸಹವಾಸ ಇದ್ದಂಗ ವನವಾಸ.

ಸಾಯಬ್ಯಾಡೋ ನೀ ಉಪವಾಸ.||//ಪಲ್ಲವಿ//




ಗಂಡು:-ಹಿಡಿಬ್ಯಾಡೋ ಆ ರುಟಾ.

ಕೊಡತ್ತಾರೊ ಬರೀ ಕಾಟ. 

ಬ್ಯಾರೆ ಮದವಿ ಆದ ಮ್ಯಾಲ ಮಾಡತ್ತಾರೋ ಟಾಟಾ.

ಸುಟ್ಟಾದ ಸಿಗರೇಟಾ.

ಆದಂಗ ನಿ ತೇಟಾ.

ಸಾಯೋತನ ಇರುವುದಲ್ಲೋ ನೀ ಬಾಟಲಿಯ ಬಿಟ್ಟ. 

ಹಠಾ ಬಿದ್ದರ ಹಳ್ಳದಾಟುವಂಗ ಕಟ್ಟ ತಾರೋ ಚಟ್ಟ. 

ಹುಡುಗ್ಯಾರ ಸಹವಾಸ ಇದ್ದಂಗ ವನವಾಸ.

ಸಾಯಬ್ಯಾಡೋ ನೀ ಉಪವಾಸ.||//ಚರಣ ೧//




ಗಂಡು:-ಹೋಗತಾರೋ ಕರಿ ಹರದ.

ತಗಣಿಅಂಗ ನಿನ್ನ ವರದ.

ಹೊಳ್ಳಿ ಮ್ಯಾಲ ಹೇಳ್ದಂಗ ನಿನ್ನ ಮ್ಯಾಲ ಕಾವ್ ಮುರುದ.

ಕುಡುದಾಗ ನೀ ಕೊರದ. 

ಕಣ್ಣೀರ ನೀ ಸುರಿದ. 

ಕಂಡವರನ ಬಲ್ಲಂಗ ಬೈತಿ ದಗ ದಗ ನೀ ಉರಿದ. 

ಸಾಯತಿ ಹುಚ್ಚರ ಲಿಸ್ಟಿನ್ಯಾಗ ನಿನ್ನ ಹೆಸರ ಬರೆದ. //ಚರಣ ೨//

ಹುಡುಗ್ಯಾರ ಸಹವಾಸ ಇದ್ದಂಗ ವನವಾಸ.

ಸಾಯಬ್ಯಾಡೋ ನೀ ಉಪವಾಸ.||

ಕಟುಗೋತಿ ನೀ ಕನಸ. ಕೊಟಗೋತಿ ನಿನ್ನ ಮನಸ.

ಹೋಕಂಗ ಆಗುತ್ತಿಯೋ ತೊಣಸ||

ಹದಾ ಮುಗುದರ ಅರದ ಹೋಗತ್ತಾರೋ ತಲಿಯಾಗ ಮೆಣಸ. 

ಹುಡುಗ್ಯಾರ ಸಹವಾಸ ಇದ್ದಂಗ ವನವಾಸ.

ಸಾಯಬ್ಯಾಡೋ ನೀ ಉಪವಾಸ.||


bottom of page