
Jigitano Bavi Jigitano

ಹೆಣ್ಣು:-ಜಿಗಿತನೋ ಬಾವಿ ಜಿಗಿತನೋ. ||
ನೀನಿಲ್ಲದ ಈ ಬಾಳ. ನನಗ್ಯಾಕ ಈ ಗೋಳ. ತಪ್ಪೈತಿ ತಳಮೇಳ. ಜೀವಂತ ನನ್ನ ಹೂಳ. ನನ್ನ ಮನಸ ಒಡೆದ ಮಾಡಿದಿ ನೂರು ಹೋಳ.
ಗಂಡು:-ಸಾಯತಿ ಸತ್ತೆನ ಸಾಧಸ್ಥಿ.
ವಾದಸ್ಥಿ ಸುಳ್ಳ ವಾದಸ್ತಿ.
ಹಿಂಗ್ಯಾಕ ನೀ ಅಳತಿ. ಏನ ಆತಂತ ಹೇಳ ಗೆಳತಿ.
ಕುಂತ ಗೆಣಿಸಿದರ ಏನೈತಿ. ಒಳ ಚಿಂತಿ ಕೊಲತೈತಿ.
ಸತ್ತ ಮೂರು ದಿನಕ್ಕ ಮರೆಯೋದು ಜಗ ರೀತಿ.
ಹೆಣ್ಣು:-ಜಿಗಿತನೋ ಬಾವಿ ಜಿಗಿತನೋ.
ಗಂಡು:-ಸಾಯತಿ ಸತ್ತೆನ ಸಾಧಸ್ಥಿ.//ಪಲ್ಲವಿ//
ಹೆಣ್ಣು:-ಬಳ್ಳಿಗೆ ಗಿಡ ಆಸರ. ನಂಗ ನೀ ಆಸರ.
ಗಂಡು:-ಮಾಡಿಕೋಬ್ಯಾಡ ಬ್ಯಾಸ್ರ. ನೀನೆಂದು ನನ್ನುಸಿರ.
ಹೆಣ್ಣು:-ಬೀಳುತಾವ ಕೆಟ್ಟ ಕನಸ. ಸರಿ ಇಲ್ಲ ನನ್ನ ಮನಸ.
ಗಂಡು:-ಅರಗಿಣಿಯಗಾಡಿ. ಅಳಬ್ಯಾಡ ಕೋಡಿ.
ಹೆಣ್ಣು:-ಕಾಸಿದ ಕಬ್ಬಣಕ. ನೀರೆರಚಿದಂಗ ಆತ.
ಗಂಡು:-ಬಂದಿದ್ದಕ್ಕ ಗಟ್ಟಿಯಾಗಿ. ನಿಲ್ಲೋಣ ಎದೆ ತಟ್ಟಿ.
ಹೆಣ್ಣು:- ಮನಸಿನ ಮೈಲಿಗಿ. ತೊಳಿಯಾಕ ಹೇಳತಿ.
ಗಂಡು:-ಪ್ರೀತಿಯ ಹೊಳೆ ದಾಟುನು ಧೈರ್ಯದಿ ಏನಂತಿ.
ಹೆಣ್ಣು:-ಜಿಗಿತನೋ ಬಾವಿ ಜಿಗಿತನೋ.
ಗಂಡು:-ಸಾಯತಿ ಸತ್ತೆನ ಸಾಧಸ್ಥಿ.//ಚರಣ ೧//
ಹೆಣ್ಣು:-ನಾ ಕರೆ ಹೇಳುತ್ತೇನ. ಬದಲಾತ ನಿನ್ನ ಮನಸ.
ಗಂಡು:-ನೀ ತಿಳದಂಗ ಎರಡಿಲ್ಲ. ನಾದ್ರೋಹ ಬಗೆದುಲ್ಲ.
ಹೆಣ್ಣು:-ನಿಮ್ಮ ಮನೆಯಾಗ ಬ್ಯಾಡ ಅಂದ್ರ ಹೆಂಗೋ ಹೇಳೋ ಗತಿ ನಂದ.
ಗಂಡು:-ಹೇಳ್ತೀನಆಣೆಮಾಡಿ. ಇರುತ್ತನಂತ ಜೋಡಿ.
ಹೆಣ್ಣು:-ನಿಮ್ಮ ಕಳ್ಳ ಬಳ್ಳಿ ಮಂದಿ. ಹಾಕ್ಯಾರೋ ನಂಗ ಅಂಜಿಕಿ.
ಗಂಡು:-ಅವರಿಗೆ ನೀ ಹೆದರಿ. ಜೀವ ಕೊಡತಿದಿ ಏನ ಹಾರಿ.
ಹೆಣ್ಣು:-ತೋಚದೆ ದಿಕ್ಕ ಕುಂತೇನ. ನಿರ್ಧಾರ ಮಾಡೆ ಣ.
ಗಂಡು:-ಇದ್ದರೂ ಕೂಡಿ ಸತ್ತರೂ ಕೂಡಿ. ಸಾಯೋಣ.//ಚರಣ ೨//
ಹೆಣ್ಣು:-ಜಿಗಿತನೋ ಬಾವಿ ಜಿಗಿತನೋ. ||
ನೀನಿಲ್ಲದ ಈ ಬಾಳ. ನನಗ್ಯಾಕ ಈ ಗೋಳ. ತಪ್ಪೈತಿ ತಳಮೇಳ. ಜೀವಂತ ನನ್ನ ಹೂಳ. ನನ್ನ ಮನಸ ಒಡೆದ ಮಾಡಿದಿ ನೂರು ಹೋಳ.
ಗಂಡು:-ಸಾಯತಿ ಸತ್ತೆನ ಸಾಧಸ್ಥಿ.
ವಾದಸ್ಥಿ ಸುಳ್ಳ ವಾದಸ್ತಿ.
ಹೆಣ್ಣು:-ಜಿಗಿತನೋ ಬಾವಿ ಜಿಗಿತನೋ.
ಗಂಡು:-ಸಾಯತಿ ಸತ್ತೆನ ಸಾಧಸ್ಥಿ.