
Kalla Kubasa Madisikonda

ಗಂಡು:-ಕಳ್ಳ ಕುಬುಸಾ ಮಾಡಿಸಿಕೊಂಡ. ಚಂಡು ಹೂವಿನ ದಂಡಿ ಕಟಗೊಂಡ.||
ಚಂಡು ಹೂವಿನ ದಂಡಿ ಕಟಗೊಂಡ.
ಕಣ್ಣಕುಕು ವಂಗ ನಿ ಉಡಿಹಿಡಕೊಂಡ. ಬಂದಯ್ದೆನ ಊರ ದೇವರಾ ಬೇಡಿಕೊಂಡ.||
ಹೆಣ್ಣು:-ಕಿತ್ತು ಒಗದಂಗ ಹೂವಿನ ಪಕಳಿ.
ತೆಗೀ ಬ್ಯಾಡೋ ನೋವಿನ ಹಕಳಿ.||
ಮರಿಯಲ್ಹ್ಯಾಂಗೋ ಆಡಿದಂತ ಆ ಓಕಳಿ.
ಹರದ ಉಗಿಯಲ್ಹೆಂಗೋ ಗೆಳೆಯ ಪ್ರೀತಿ ಸಕಳಿ.
ಮರಿಯಲ್ಹ್ಯಾಂಗೋ ಆಡಿದಂತ ಆ ಓಕಳಿ.
ಹರದ ಉಗಿಯಲ್ಹೆಂಗೋ ಗೆಳೆಯ ಪ್ರೀತಿ ಸಕಳಿ.//ಪಲ್ಲವಿ//
ಗಂಡು:-ಹಾದಿ ಗಡ್ಡ ಬರಬ್ಯಾಡ.
ಕಣ್ಣೀರ ತರಬ್ಯಾಡ.
ಕಮ್ಮಂತ ಬಾಳೆಕ ಹರಲಿ ಹೊರಬ್ಯಾಡ.||
ಹೆಣ್ಣು:-ಅಣವು ತಣವು ಕೇಳಾಕ ಬಂದರ ಅಳಸತಿ ಯಾಕೋ ನೀ ನನ್ನ.||
ಗಂಡು:-ಚಾಡಿ ಹೇಳು ಮಂದಿಗೆ ಇಷ್ಟೇ ಸಾಕು ಕಾರಣ.
ಹೆಣ್ಣು:-ತಪ್ಪಾ ತಿಳಿತಾರಂತ ಬಿಡಲ್ಹೆಂಗೋ ಗೆಳೆತನ.
ಗಂಡು:-ಸಿಕ್ಕು ಸಾಯಬೇಡ ಸಂಶಯದ ಸುಳಿ.
ಬಿದ್ದರ್ಹ್ಯಾಂಗ ಹೇಳ ಬಾಳಿಗೆ ಹುಳಿ.
ಹೆಣ್ಣು:-ಮರಿಯಲ್ಹ್ಯಾಂಗೋ ಆಡಿದಂತ ಆ ಓಕಳಿ.
ಹರದ ಉಗಿಯಲ್ಹೆಂಗೋ ಗೆಳೆಯ ಪ್ರೀತಿ ಸಕಳಿ.|| //ಚರಣ ೧//
ಗಂಡು:-ಗಂಡ ಮುಟ್ಟುವ ಯಡಿ ನಾಯಿ ಮುಟ್ಟಿದಾಂಗ.
ಆಗಬಾರದು ನಾಕ ಮಂದಿ ಆಡಿಕೊಳ್ಳುವಂಗ.||
ಹೆಣ್ಣು:-ಕಲ್ಮಶವಿಲ್ಲದ ನಮ್ಮ ಗೆಳೆತನಕ ಅಂಜಿಕೆ ಅಳಕೆಂಬುದು ಯಾಕ.||
ಗಂಡು:-ಹುಚ್ಚಿ ನಿನ್ನ ಹುಚ್ಚತನಕ. ಏನಂತ ಅನಬೇಕ.
ಹೆಣ್ಣು:-ಹುಚ್ಚಿ ಅಂದ್ರು ಅನವಲ್ಲಿ ನಿನ್ನ ಗೆಳೆತನ ಬೇಕ.
ಗಂಡು:-ಹೊಟ್ಟಿಲೇ ಇದ್ದಾಕಿ ಹೊಳಿ ದಾಟಬ್ಯಾಡಂದ್ರು ದಾಟತನನತ್ತಿದ್ದಿ ಬಿದ್ದು ಹಟಕ.
ಹೆಣ್ಣು:-ಮದವಿಗೆ ಮೊದಲು ಇದ್ದ ಪ್ರೀತಿ ಮರೆತೇನ. ಆ ಪ್ರೀತಿಗೆ ಗೆಳೆತನ ಅನ್ನು ಹೆಸರಿಟ್ಟೇನ.|| //ಚರಣ ೨//
ಗಂಡು:-ಕಳ್ಳ ಕುಬುಸಾ ಮಾಡಿಸಿಕೊಂಡ. ಚಂಡು ಹೂವಿನ ದಂಡಿ ಕಟಗೊಂಡ.||
ಚಂಡು ಹೂವಿನ ದಂಡಿ ಕಟಗೊಂಡ.
ಕಣ್ಣಕುಕು ವಂಗ ನಿ ಉಡಿಹಿಡಕೊಂಡ. ಬಂದಯ್ದೆನ ಊರ ದೇವರಾ ಬೇಡಿಕೊಂಡ.||