top of page
IMG_7077.PNG

Kalungrilla Kalaga

ಗಂಡು:-ಕಾಲುಂಗ್ರಿಲ್ಲ ಕಾಲಾಗ ಕುಂಕುಮ ಇಲ್ಲ ಹನಿ ಮ್ಯಾಲ ತಾಳಿ ಇಲ್ಲ ಕೊಳ್ಳಾಗ ಗೆಳತಿ ಅಳತಿ ಯಾಕಿಂಗ ಓ...

ಗೆಳತಿ ಅಳತಿ ಯಾಕಿಂಗ.

ಹೆಣ್ಣು:-ಕುಂಕುಮ ಕರಗಿ ಹೋಗೈತಿ. ತಾಳಿ ಎಂಬುದು ಹರದೈತಿ. ಬಾಳೆ ಎಂಬುವುದು ಸ್ವರಗೈತಿ ವಿಧಿಯಾಟ ವಿಧವೆಯ ಮಾಡೆತಿ. ಓ...ವಿಧಿಯಾಟ ವಿಧವೆಯ ಮಾಡೆತಿ.//ಪಲ್ಲವಿ//



ಹೆಣ್ಣು:-ಬಾಸಿಂಗ ಕಟ್ಟಿದಂತ ಅರಿವು ನನಗ ಇಲ್ಲ. ಅಕ್ಕಿ ಕಾಳ ಬಿದ್ದ ಆ ಗಳಿಗೆ ಗೊತ್ತೇ ಇಲ್ಲ. ಸಪ್ತಪದಿ ನಾ ತುಳಿದಂತ ನೆನಪು ಒಂದು ನನಗಿಲ್ಲ. ಗಂಡನ ಕೂಡ ಭಾಗ್ಯ ಬೇಡಿ ಬರಲಿಲ್ಲ. 


ಗಂಡು:-ಕಳೆದ್ವಾದ ಗಳಗಿಯ ನೆನೆಸಿ ಅತ್ತರೇನೂ ಫಲವಿಲ್ಲ. ಕಣ್ಣೀರ ಹೊಳೆಯ ಹರಸಿ ಸತ್ತರೇನು ಸಿಗುವುದಿಲ್ಲ. 


ಹೆಣ್ಣು:-ದಂಡಿಕಟ್ಯಾರ ತೊಟ್ಟಿಲಕ. ಚಂಡಿ ಚೂಟ್ಯಾರ ನಡಬರಕ ಬೆಂಕಿ ಇಟ್ಟಾರ ಬಾಳೆಕ ಹೊಣೆ ಯಾರ ಈ ನನ್ನ ಹಣೆಬರಕ. ಹೊ...

ಹೊಣೆ ಯಾರ ಈ ನನ್ನ ಹಣೆಬರಕ.


ಗಂಡು:-ಕಾಲುಂಗ್ರಿಲ್ಲ ಕಾಲಾಗ. ಕುಂಕುಮ ಇಲ್ಲ ಹನಿ ಮ್ಯಾಲ. ತಾಳಿ ಇಲ್ಲ ಕೊಳ್ಳಾಗ ಗೆಳತಿ ಅಳತಿ ಯಾಕಿಂಗ ಓ...

ಗೆಳತಿ ಅಳತಿ ಯಾಕಿಂಗ.//ಚರಣ ೧//


ಹೆಣ್ಣು:-ಹಸಿಗೂಸು ನಾನಿದ್ದಾಗ ಹನಿಯಕ್ಕಿ ಕೂಡೈತಂತ. 

ಉಡಿಯಕ್ಕಿ ಹಾಕುವ ಮೊದಲ ವಿಧವೆಯಾದಿನಂತ.

ಯಾರಿಗಂದ್ರ ಏನಾಗುವುದು ನನ್ನ ದೈವ ಕೆಟ್ಟಂತ ಬ್ರಹ್ಮ ಬರೆದ ಹಣೆ ಬರದಂಗ ಬಂದು ಹೋಗಬೇಕಂತ. 


ಗಂಡು:-ತಾಳಿ ಅವರೇ ಕಟ್ಯಾರಂತ . ಹೊಳ್ಳಿ ಅವರೇ ಹರದಾರಂತ. ಹಿರಿಯರು ಮಾಡಿದ ತಪ್ಪಿಗೆ ನೀನ್ಯಾಕ ಹೊಣೆಯಂತ. 


ಹೆಣ್ಣು:-ಕಳೆದುಹೋದ ಮುತ್ತೈದೆತನ. ಹೊನ್ನು ಕೊಟ್ಟರು ಬರದಿನ್ನ. ಅಬಲೇಯಾದ ಈ ಹೆಣ್ಣ ತವರಿಗೆ ಹುಣ್ಣಂತ ಕಡೆತನ. ಆ....

ತವರಿಗೆ ಹುಣ್ಣಂತ ಕಡೆತನ.


ಗಂಡು:-ಕಾಲುಂಗ್ರಿಲ್ಲ ಕಾಲಾಗ. ಕುಂಕುಮ ಇಲ್ಲ ಹನಿ ಮ್ಯಾಲ. ತಾಳಿ ಇಲ್ಲ ಕೊಳ್ಳಾಗ ಗೆಳತಿ ಅಳತಿ ಯಾಕಿಂಗ ಓ...

ಗೆಳತಿ ಅಳತಿ ಯಾಕಿಂಗ.//ಚರಣ ೨//



ಗಂಡು:-ಇಲ್ಲಅಂತ ನೀ ಅನ್ನಬೇಡ. ವಿಧಿ ಬರಹ ಬದಲಿಸಿದವರ. ಸಾವಿತ್ರಿ ಪಡೆದಿಲ್ಲಲೇನ ಮರಳಿ ತನ್ನ ಸಿಂಧೂರ.

ಹಾಕಬ್ಯಾಡ ನೀ ಉಸುರ. ಆಗುತ್ತೇನ ಆಸರಾ. ತಗದೊಗೆಯ ಗೆಳತಿ ನಿನ್ನ ಮನಸ್ಸಿನ ಬ್ಯಾಸರ. 


ಹೆಣ್ಣು:-ಒಪ್ಪಿಗೆ ಕೊಡತ್ತಾರ ಹ್ಯಾಂಗ ಇದಕ ನಮ್ಮ ಹಿರಿಯರ ನಮ್ಮ ಧರ್ಮದಾಗ ವಿಧವೆಗೆ ಮದುವೆ ಇಲ್ಲ ಅಂತಾರ. 


ಗಂಡು:-ದಯವಿಲ್ಲದ ಅದು ಯಾವುದರ್ಮ. ತಿಳಿಯಬೇಕಿದರೋಳ ಮರ್ಮ. ಅರಿಯದೊದರವರ ಕರ್ಮ ಉಳಿಬೇಕ ದಯವಿರುವಂಥ ಧರ್ಮ. ಒ....

ಉಳಿಬೇಕ ದಯವಿರುವಂಥ ಧರ್ಮ.


ಹೆಣ್ಣು:-ಕುಂಕುಮ ಕರಗಿ ಹೋಗೈತಿ. ತಾಳಿ ಎಂಬುದು ಹರದೈತಿ. ಬಾಳೆ ಎಂಬುವುದು ಸ್ವರಗೈತಿ ವಿಧಿಯಾಟ ವಿಧವೆಯ ಮಾಡೆತಿ. ಓ...ವಿಧಿಯಾಟ ವಿಧವೆಯ ಮಾಡೆತಿ.//ಚರಣ ೩//



ಹೆಣ್ಣು:-ಅಣ್ಣ ತಮ್ಮ ಅತ್ತಿಗೆ ನನಗ ಆಗ್ಯಾರೊ ಹಡೆದವರ. ಸರಿ ಏನ ಅವರ ಮಾತು ಮೀರಿ  ನಾನು ದುಡುಕಿದರ.

ಹುಟ್ಟಿದ ಮನೆತನ ಮಾನ ಒಳ್ಳೆಯದಲ್ಲ ಕಳೆದರ ಆಗುವದು ಆಗಲಿ ಗೆಳೆಯ ಎಲ್ಲಾ ನನ್ನ ಹಣೆಬರ.


ಗಂಡು:-ಅವರವರ ಸಂಸಾರ ಅವರಿಗೆ ಐತಿ ಬಾರ ಹಡೆದವರು ಹೋದ ಮ್ಯಾಲ ಯಾರಿಲ್ಲ ನಿನ್ನವರ. 


ಹೆಣ್ಣು:-ಮತ್ತೊಂದು ಜನ್ಮ ಪಡೆದಾರ. ಕಂಕಣ ಬಲವು ಕೂಡಿದರ. ತರಬೇಕೋ ನೀ ಸಿಂಧೂರ.ಓ...

ಗೆಳೆಯ ಮಾಡೋಣ ಸಂಸಾರ.



ಗಂಡು:-ಕಾಲುಂಗ್ರಿಲ್ಲ ಕಾಲಾಗ. ಕುಂಕುಮ ಇಲ್ಲ ಹನಿ ಮ್ಯಾಲ. ತಾಳಿ ಇಲ್ಲ ಕೊಳ್ಳಾಗ ಗೆಳತಿ ಅಳತಿ ಯಾಕಿಂಗ ಓ...

ಗೆಳತಿ ಅಳತಿ ಯಾಕಿಂಗ.//ಚರಣ ೪//

bottom of page