
Karimani Malika Nanallanti

ಕರಿಮಣಿ ಮಾಲಿಕ ನಾನಲ್ಲಂತಿ.||ಅಂತೂ ಇಂತೂ ಮುಗುಸಾಕ ನಿಂತಿ ನನ್ನ ಸಂತಿ.||
ಕರಿಮಣಿ ಮಾಲೀಕನ ಬದಲಿಸಬೇಕಂತಿ.||ಎಷ್ಟ ದಿನದಿಂದ ಹಿಂತಾ ಹೊಂಚಾಕಿ ಕುಂತಿ.||//ಪಲ್ಲವಿ//
ಕಟ್ಟಿದ ಕರಿಮಣಿ ಯಾಕ ತೆಗೆದು ನಂತಿ.
ಊಟ್ಟ ಅರಸಿನ ಸೀರಿ ಸುಟ್ಟ ಬಿಡತನ ಅಂತಿ.
ಇಟ್ಟ ಕಾಲುಂಗುರ ತಗದ ಒಗೀತು ನಂತಿ.
ನಿನ್ನ ನಂಬಿದವನ ಕೈಯ ಬಿಡತನoತಿ.
ಬಡವ ಅಂತ ತಿಳಿದರು ಕಟ್ಟಿಸಿ ಕೊಂಡ್ಯಾಕ ತಾಳಿ. ಬಿಡಿಸಿ ಹೇಳ ಮಣಿಹಾಳಿ.
ಕರಿಮಣಿ ಮಾಲಿಕ ನಾನಲ್ಲಂತಿ.||ಅಂತೂ ಇಂತೂ ಮುಗುಸಾಕ ನಿಂತಿ ನನ್ನ ಸಂತಿ.||//ಚರಣ ೧//
ಏನಿಲ್ಲ ಏನಿಲ್ಲ ನನ್ನ ನಿನ್ನ ನಡುವೆನಿಲ್ಲ.
ಏನ ಚಂದ ಹೇಳತಿ ಏನು ನಡೆದೆ ಇಲ್ಲ.
ಮಾಡಿದ ಆನೆಯ ನೆನಪ ನೀ ಮಾಡಿಕೋ.
ಅಂಗಾರ ನೀ ಬಡದ ಮನಸ ಮುಟ್ಟಿ ನೋಡಿಕೋ.
ಅದುಲ ಬದಲ ಮಾಡಿಕೊಳ್ಳಲಾಕ ತಾಳಿ ತೆಗಿತ ನಂತಿ.
ನೀ ಹೇಳಯಂಥ ಗರತಿ.
ಕರಿಮಣಿ ಮಾಲೀಕನ ಬದಲಿಸಬೇಕಂತಿ.||ಎಷ್ಟ ದಿನದಿಂದ ಹಿಂತಾ ಹೊಂಚಾಕಿ ಕುಂತಿ.||//ಚರಣ ೨//
ದೇವರ ಸಾಕ್ಷಿಯಾಗಿ ಕರಿಮಣಿ ಕಟ್ಟಿದ್ನಿ.
ನಿನ್ನ ಹನಿ ಮ್ಯಾಲ ಕುಂಕುಮ ಇಟ್ಟಿದ್ನಿ.
ಯಾರಿಗೂ ತಿಳಿದಾಂಗ ಮದವಿಯಾಗಿದ್ವಿ.
ಗೆಳತಿ ಮೈಮರಥ ಮಂಚ ಏರಿದ್ವಿ.
ಮಾಡಿದ ರಾಡಿ ಮರತಿ ಹೆಂಗ ಹೇಳಾಕ ಹುಚ್ಚಿ. ಹೋಂಟಿ ಕರಿಮಣಿ ಬಿಚ್ಚಿ.//ಚರಣ ೩//
ಕರಿಮಣಿ ಮಾಲಿಕ ನಾನಲ್ಲಂತಿ.||ಅಂತೂ ಇಂತೂ ಮುಗುಸಾಕ ನಿಂತಿ ನನ್ನ ಸಂತಿ.||
ಕರಿಮಣಿ ಮಾಲೀಕನ ಬದಲಿಸಬೇಕಂತಿ.ಎಷ್ಟ ದಿನದಿಂದ ಹಿಂತಾ ಹೊಂಚಾಕಿ ಕುಂತಿ.||