top of page
IMG_7077.PNG

Koodi Aadida Manasa

ಹೆಣ್ಣು:-ಕೂಡಿ ಆಡಿದ ಮನಸ. ಮರ ಮರ ಮರುಗಿತಲ್ಲ. 

ಸ್ವಾಧಾರ ಮಾವನ ಪ್ರೀತಿ ಮೋಸ ಮಾಡಿತಲ್ಲ. 

ನಾನು ಕಂಡ ಕನಸ ಗೆಳತಿ ಪದರಾಗ ಉಳಿಲಿಲ್ಲ. 

ಹೊಳಿಯಾಗ ಹುಣಚಿ ಹಣ್ಣ ತೋಳದಂಗ ಆಗಿ ಹೋಯಿತಲ್ಲ.||2||//ಪಲ್ಲವಿ//


ಹೆಣ್ಣು:-ಹೋದ ಊರಿನ ದಾರಿ ನಾ ನೋಡಲಿಲ್ಲ. 

ಬರತೇನ ಅಂತ ಹೇಳಿ ಹೊಳ್ಳಿ ಬರಲೇ ಇಲ್ಲ.||

ಅವನ ನೆನಪ ನನಗ ಹಗಲೆಲ್ಲ. 

ಅವನಿಲ್ಲದ ಜೀವ ಉಳಿದುಲ್ಲ.//ಚರಣ ೧//


ಹೆಣ್ಣು:-ಕೂಡಿ ಆಡಿದ ಮನಸ. ಮರ ಮರ ಮರುಗಿತಲ್ಲ. 

ಸ್ವಾಧಾರ ಮಾವನ ಪ್ರೀತಿ ಮೋಸ ಮಾಡಿತಲ್ಲ. 

ನಾನು ಕಂಡ ಕನಸ ಗೆಳತಿ ಪದರಾಗ ಉಳಿಲಿಲ್ಲ. 

ಹೊಳಿಯಾಗ ಹುಣಚಿ ಹಣ್ಣ ತೋಳದಂಗ ಆಗಿ ಹೋಯಿತಲ್ಲ.||




ಹೆಣ್ಣು:-ಸಿಟ್ಟು ಆಗ್ಯಾನ ಗೆಳತಿ ನನ್ನ ಮ್ಯಾಲ. 

ಮಾಡಿಕೊಂಡಾನ ಮನಸ ಯಾಕೋ ಕಲ್ಲ.||

ನನ್ನ ಆಸೆ ಅವನಿಗೆ ಹೇಳಿಲ್ಲ. 

ಹಿಂಗ್ಯಾಕ ಮಾಡಿದ ತಿಳಿಲಿಲ್ಲ.//ಚರಣ ೨//


ಹೆಣ್ಣು:-ಕೂಡಿ ಆಡಿದ ಮನಸ. ಮರ ಮರ ಮರುಗಿತಲ್ಲ. 

ಸ್ವಾಧಾರ ಮಾವನ ಪ್ರೀತಿ ಮೋಸ ಮಾಡಿತಲ್ಲ. 

ನಾನು ಕಂಡ ಕನಸ ಗೆಳತಿ ಪದರಾಗ ಉಳಿಲಿಲ್ಲ. 

ಹೊಳಿಯಾಗ ಹುಣಚಿ ಹಣ್ಣ ತೋಳದಂಗ ಆಗಿ ಹೋಯಿತಲ್ಲ.||

 



ಹೆಣ್ಣು:-ಎಲ್ಲಿ ಹೋಗ್ಯಾನ ಯಾರ ಕೂಡ್ಯಾನ. 

ನನ್ನ ಈ ಕೂನ ಮರೆತಬಿಟ್ಟಾನೇನ.||

ಮರತೀನಂತೇಳಿ  ಬರಲಿಲ್ಲ ಗೆಳತಿ ನನಗ ಮೋಸ ಆತಲ್ಲ. //ಚರಣ ೩//

ಹೆಣ್ಣು:-ಕೂಡಿ ಆಡಿದ ಮನಸ. ಮರ ಮರ ಮರುಗಿತಲ್ಲ. 

ಸ್ವಾಧಾರ ಮಾವನ ಪ್ರೀತಿ ಮೋಸ ಮಾಡಿತಲ್ಲ. 

ನಾನು ಕಂಡ ಕನಸ ಗೆಳತಿ ಪದರಾಗ ಉಳಿಲಿಲ್ಲ. 

ಹೊಳಿಯಾಗ ಹುಣಚಿ ಹಣ್ಣ ತೋಳದಂಗ ಆಗಿ ಹೋಯಿತಲ್ಲ.||





bottom of page