top of page
IMG_7077.PNG

Kotthoga Nanna Guruta

ಗಂಡು:-ಕೊಟ್ಹೊಗ ನನ್ನ ಗುರುತ. ಬಿಟ್ಟು ಹೋಗ ನನ್ನ ಮರೆತ ||

ನೋಡಲಿಲ್ಲ ಗೆಳತಿ ಪ್ರೀತಿ ಅರ್ಥ. 

ಓ... ಬಾಳ್ಹೋಗ ನಿನ್ನ ಗಂಡನ ಬೆರತ. 


ಹೆಣ್ಣು:-ಬೇಡಬ್ಯಾಡೋ ಕೊಟ್ಟ ಗುರುತ. ಬಾಳ ಹ್ಯಾಂಗೋ ನಾ ಅದರ ಹೊರತ ||

ಹಾಕಬ್ಯಾಡೋ ಗೆಳೆಯ ನೀ ವಣ ಶರತ.

ಒ... ವಮ್ಯಾರ ನೋಡೋ ನನ್ನ ಮನಸರತ.//ಪಲ್ಲವಿ//


ಗಂಡು:-ನನ್ನ ಬಾಳೆಕ ನೀರ ನೀ ಹಣಸಿದೆಲ್ಲ.

ಅಳಕಲಾರದಂತ ಕಲಿ ನೀ ಉಳಿಸಿದೆಲ್ಲ. 

ಹೆಣ್ಣಿನ ಬುದ್ಧಿ ಇಷ್ಟ ಅಂತ ತಿಳಿಸಿದಲ್ಲ. 

ಮದವೀಗಿ ಬಾ ಅಂತೇಳಿ ಹೇಳಿ ಕಳಿಸಿದೆಲ್ಲ.

ಗೆಳತಿ.... ಗೆಳತಿ ನಂಬಿದವನ ತಲೆ ಕೆಡಸಿದೆಲ್ಲ. 

ಓ.... ಉಂಡಮಣಿ ಜಂತಿ ಎನಿಸಿದಲ್ಲ.


ಹೆಣ್ಣು:-ಬೇಡಬ್ಯಾಡೋ ಕೊಟ್ಟ ಗುರುತ. ಬಾಳ ಹ್ಯಾಂಗೋ ನಾ ಅದರ ಹೊರತ ||

ಹಾಕಬ್ಯಾಡೋ ಗೆಳೆಯ ನೀ ವಣ ಶರತ.

ಒ... ವಮ್ಯಾರ ನೋಡೋ ನನ್ನ ಮನಸರತ.//ಚರಣ ೧//



ಹೆಣ್ಣು:-ಉಂಡ ಮನಿ ಜಂತಿ ಎಣಿಸೋ ಜಾತೀಯ ಮಗಳಲ್ಲ. 

ಉಣ್ಣುವ ಯಡಿಯೊಳಗೆ ಉಗುಳಾಕಿ ನಾ ಅಲ್ಲ.

ನಿನ್ನ ಬಾಳೆಕ ಕಲ್ಲ. ನಾ ಹಾಕಲಿಲ್ಲ. ನಿನ್ನಂಗ ಕಂಡವರ ಮ್ಯಾಲ ಸಂಸೆ ಪಡಲಿಲ್ಲ. 

ಗೆಳೆಯ..... ಗೆಳೆಯ  ಸ್ಥಿರವಾಗಿ ನಿನ್ನ ಮನಸು ಉಳಿಯಲಿಲ್ಲ.

ಓ... ಹರಲೀಯ ಹೊರಸೂದು ನೀ ಬಿಡಲಿಲ್ಲ.


ಗಂಡು:-ಕಟೋಗ ನನ್ನ ಗುರುತ. ಬಿಟ್ಟು ಹೋಗ ನನ್ನ ಮರೆತ ||

ನೋಡಲಿಲ್ಲ ಗೆಳತಿ ಪ್ರೀತಿ ಅರ್ಥ. 

ಓ... ಬಾಳ್ಹೋಗ ನಿನ್ನ ಗಂಡನ ಬೆರತ.//ಚರಣ ೨//



ಗಂಡು:-ಹಂಗಿನ ಅರಮನೆ ಅಂದ ಹಂಗ ಹರಿದ ಮ್ಯಾಲ. 

ನನ್ನ ಗುರುತ ನಿನ್ನ ಹಂತ್ಯಾಕ ವಟ್ಟ ನಾ ಬಿಡುವುದಿಲ್ಲ. 

ಹಣ ಹಣ ಅಂತ ನೀನ ದೂರ ಉಳದಿಯಲ್ಲ. 

ಹುರುಪ ತುಂಬಿ ಕಿಚ್ಚದಾಟೋವಂಗ ಮಾಡಿದೆಲ್ಲ.

ಗೆಳತಿ..... ಗೆಳತಿ. ಕರೆದ ಕ್ಯಾರ ಹಾಕೊಂಡಂಗ ಆತಲ್ಲ.

ಓ.... ಗುರುತ ಕೊಟ್ಟ ಗೋತ ಹೊಡೆದಂಗಾತಲ್ಲ. 


ಹೆಣ್ಣು:-ಬೇಡಬ್ಯಾಡೋ ಕೊಟ್ಟ ಗುರುತ. ಬಾಳ ಹ್ಯಾಂಗೋ ನಾ ಅದರ ಹೊರತ ||

ಹಾಕಬ್ಯಾಡೋ ಗೆಳೆಯ ನೀ ವಣ ಶರತ.

ಒ... ವಮ್ಯಾರ ನೋಡೋ ನನ್ನ ಮನಸರತ.//ಚರಣ ೩//



ಹೆಣ್ಣು:-ಬಂಗಾರ ಬೆಳ್ಳಿ ಬ್ಯಾಡ. 

ಈ ನಿನ್ನ ಅರಮಣಿ ಬ್ಯಾಡ. 

ನೀ ಕೊಟ್ಟ ಹಸರ ಬಳಿಯ ನೀನವಡಿ ಬ್ಯಾಡ. 

ಕನಿಕರ ತೋರಿಸಿ ಇಲ್ಲೇ ಬಿಟ್ಟರ ಪಾಡ. 

ಒಂಟಿತನ ಕಾಡಿದಾಗ ಆಗತಾವ ಜೋಡ. 

ಗೆಳೆಯ...... ಗೆಳೆಯ ಕನಸಮುರಿದಾಂಗ ಮನಸ ಮುರಿಬ್ಯಾಡ.

ಓ... ಹೂ ಅಂತ ಹೇಳಿ ಮುಳ್ಳ ಸುರಿ ಬ್ಯಾಡ. //ಚರಣ ೪//


ಗಂಡು:-ಕಟೋಗ ನನ್ನ ಗುರುತ. ಬಿಟ್ಟು ಹೋಗ ನನ್ನ ಮರೆತ ||

ನೋಡಲಿಲ್ಲ ಗೆಳತಿ ಪ್ರೀತಿ ಅರ್ಥ. 

ಓ... ಬಾಳ್ಹೋಗ ನಿನ್ನ ಗಂಡನ ಬೆರತ. 


ಹೆಣ್ಣು:-ಬೇಡಬ್ಯಾಡೋ ಕೊಟ್ಟ ಗುರುತ. ಬಾಳ ಹ್ಯಾಂಗೋ ನಾ ಅದರ ಹೊರತ ||

ಹಾಕಬ್ಯಾಡೋ ಗೆಳೆಯ ನೀ ವಣ ಶರತ.

ಒ... ವಮ್ಯಾರ ನೋಡೋ ನನ್ನ ಮನಸರತ.









bottom of page