top of page
IMG_7077.PNG

Manasara Henga Banta Gelati

ಗಂಡು:-ಮನಸರ ಹ್ಯಾಂಗ ಬಂತ ಗೆಳತಿ... ಬಿಟ್ಟು ಹೋಗಲಾಕ ನಿಂತಿ...||2||

ನಿನಗ ಇಲ್ಲ ನನ್ನ ಚಿಂತಿ. ನನಗ ಐತಿ ನಿನ್ನ ಭ್ರಾಂತಿ. ಮೊದಲ ಮಾಡಿದ್ಯಾಕ ಕೆಂತಿ. ಈಗ ಮರೆತು ನನ್ನ ಕುಂತಿ. ತಪ್ಪೈತಿ ತಾಳತಂತಿ. ಗೆಳೆತನ ಯಾಕ ಮರೆತ  ಹೊಂಟಿ.


ಹೆಣ್ಣು:-ಗೆಳೆಯ ಹಿಡಿಸಿದೆಲ್ಲೋ ರಾಡಿ.. ಪ್ರೀತಿಗೆ ತಂದಿ ಎಲ್ಲೋ ದಾಡಿ.. ಈಗ ಯಾಕ ಅಳತಿ ಕೋಡಿ. ಹೊಂಟೈತಿ ನನ್ನ ಗಾಡಿ. ನಗತಿದ್ದಿ ನನ್ನ ನೋಡಿ. ಹಗಲು ರಾತ್ರಿ ನನ್ನ ಕಾಡಿ. ಮೈಯ ಮರಸುತ್ತಿದ್ದಿ ಹಾಡಿ. ಅಗಲೈತಿ ನಮ್ಮ ಜೋಡಿ...


ಗಂಡು:-ಮನಸರ ಹ್ಯಾಂಗ ಬಂತ ಗೆಳತಿ... ಬಿಟ್ಟು ಹೋಗಲಾಕ ನಿಂತಿ...//ಪಲ್ಲವಿ//


ಗಂಡು:-ಬಣ್ಣದ ಮಾತು ನಂಬಿ ನಾ ಕೆಟ್ಟೆ ಹಿಂಗ್ಯಾಕ ಮಾಡಿದಿ. ಕಣ್ಣಾಗ ಕುಂತಿ ಮನದಾಗ ನಿಂತಿ ಈಗ್ಯಾಕ ಧೂಡಿದಿ....||2||


ಹೆಣ್ಣು:-ಹಿರಿಯ ಹೇಳದಾಂಗ ಕೇಳದಿದ್ಯಾಂಗ ಏನ ಮಾಡಬೇಕು. ನನ್ನ ಮನದಾಗ ಏನ ಐತಂತ ಹ್ಯಾಂಗ ಹೇಳಬೇಕು. 


ಗಂಡು:-ಗಟ್ಟಿಯಾಗಿ ನಿಲ್ಲಲಿಲ್ಲ. ನನ್ನ ಒಂದು ಕೇಳಲಿಲ್ಲ. ನಿನ್ನ ಲಗ್ನಪತ್ರ ಬಂದು ನನ್ನ ಎದೆಯ ಸುಟ್ಟಿತಲ್ಲ. ಮಾತು ಮರೆತು ಹೋಯಿತಲ್ಲ ಮುಂದೆ ಏನು ಉಳಿಯಲಿಲ್ಲ.


ಹೆಣ್ಣು:-ಗೆಳೆಯ ಹಿಡಿಸಿದೆಲ್ಲೋ ರಾಡಿ.. ಪ್ರೀತಿಗೆ ತಂದಿ ಎಲ್ಲೋ ದಾಡಿ//ಚರಣ ೧//


ಹೆಣ್ಣು,:-ಕುಡುಕ ತಂದೆಗೆ ಮಗಳಾಗಿ ಹುಟ್ಟಿ ನಾ ತಪ್ಪು ಮಾಡಿದೆ. ದುಡ್ಡಿಗೆ ನನ್ನ ಮಾರಿಬಿಟ್ಟಾನ ಮುಪ್ಪಾಣ ಮುದುಕಗೆ..||2||


ಗಂಡು:-ನಿನ್ನ ಮನೆ ಬಿಟ್ಟು ಹೊರಗೆ ಬಂದಿದ್ರ ಗುಡಿಸಲಿತ್ತು ನಂದ. ನನ್ನ ಪ್ರೀತಿಯ ಮರೆತು ಹೊಂಟಿ ಹೆಂತಾ ಮನಸ್ಸು ನಿಂದ.


ಹೆಣ್ಣು:-ಅಪ್ಪನ ಮಾತು ನಂಬಿ ಕೆಟ್ಟೆ. ಮುದುಕನ ಮಡದಿಯಾಗಿಬಿಟ್ಟೆ. ನಿನ್ನ ಮಾತು ಮರೆತುಬಿಟ್ಟೆ. ಬದುಕಿಗೆ ನಾನೇ ಬೆಂಕಿ ಇಟ್ಟೆ. ನಿನ್ನ ಬದುಕ ನಿನಗೆ ಬಿಟ್ಟೆ. ನಿನ್ನ ಮರೆತು ನಾನು ಹೊಂಟೆ. //ಚರಣ ೨//


ಗಂಡು:-ಮನಸರ ಹ್ಯಾಂಗ ಬಂತ ಗೆಳತಿ... ಬಿಟ್ಟು ಹೋಗಲಾಕ ನಿಂತಿ...||2||

ನಿನಗ ಇಲ್ಲ ನನ್ನ ಚಿಂತಿ. ನನಗ ಐತಿ ನಿನ್ನ ಭ್ರಾಂತಿ. ಮೊದಲ ಮಾಡಿದ್ಯಾಕ ಕೆಂತಿ. ಈಗ ಮರೆತು ನನ್ನ ಕುಂತಿ. ತಪ್ಪೈತಿ ತಾಳತಂತಿ ಗೆಳೆತನ ಯಾಕ ಮರೆತ  ಹೊಂಟಿ.


ಹೆಣ್ಣು:-ಗೆಳೆಯ ಹಿಡಿಸಿದೆಲ್ಲೋ ರಾಡಿ.. ಪ್ರೀತಿಗೆ ತಂದಿ ಎಲ್ಲೋ ದಾಡಿ.. ಈಗ ಯಾಕ ಅಳತಿ ಕೋಡಿ. ಹೊಂಟೈತಿ ನನ್ನ ಗಾಡಿ. ನಗತಿದ್ದಿ ನನ್ನ ನೋಡಿ. ಹಗಲು ರಾತ್ರಿ ನನ್ನ ಕಾಡಿ. ಮೈಯ ಮರಸುತ್ತಿದ್ದಿ ಹಾಡಿ. ಅಗಲೈತಿ ನಮ್ಮ ಜೋಡಿ...


bottom of page