
Masanada Maniyolaga

ಗಂಡು:-ಮಸನದ ಮನಿಯೊಳಗ ಮಲಗಿಸಿ ನನ್ನ.||
ಮಜಾ ಮಾಡೋ ಹೋಗ ಗೆಳತಿ ಹೋಳಗಿ ಉಂಡ ನೀನ.||
ಮೂರು ದಿನ ಮುಗಿದ ಮ್ಯಾಲ ಹಾಕ ಹಕ್ಕಿಗೆ ಅನ್ನ.
ಹೆಣ್ಣು:-ಗೋರಿ ಮುಂದ ಗೋಳಿಡುವಂಗ ಮಾಡಿ ಹ್ಯಾದಿ ನೀನ.||
ಕಣ್ಣ ಕಿತ್ತ ಬರುವಂಗ ಅಳುದ ಆತ ಕಡಿತನ.||
ಕಣ್ಣಾಗ ನೀರ ಬತ್ತಿ ರಕ್ತ ಹರಿಯುವತನ.
ಗಂಡು:-ಮಸನದ ಮನಿಯೊಳಗ ಮಲಗಿಸಿ ನನ್ನ.
ಮಜಾ ಮಾಡೋ ಹೋಗ ಗೆಳತಿ ಹೋಳಗಿ ಉಂಡ ನೀನ.//ಪಲ್ಲವಿ//
ಗಂಡು:- ಹೊಳ್ಳಿ ಹೊಳ್ಳಿ ಬರಬ್ಯಾಡ ನೀ ನನ್ನ ಗೋರಿಯ ತನಕ.
ಇಲ್ಯಾರ ಬಿಡ ನನ್ನ ನೆಮ್ಮದಿಯಿಂದ ಇರಲಾಕ.
ಇಲ್ಯಾರ ಹಂಗಿಲ್ಲ ಹಂಗಿನ ಅರಮನೆ ಇಲ್ಲ.||
ತಂಟೆ ತಕರಾರಂತೂ ಮೊದಲೆ ಇಲ್ಲ.
ಹಗಲೆಲ್ಲ ಇಲ್ಲಿಗೆ ಬಂದ ಮಾಡಬ್ಯಾಡ ನಾಟಕ.||
ಹುಡುಗಿ ನೀನಲ್ಲ ಪ್ರೀತಿಗೆ ಲಾಯಕ.
ಹೆಣ್ಣು:-ಗೋರಿ ಮುಂದ ಗೋಳಿಡುವಂಗ ಮಾಡಿ ಹ್ಯಾದಿ ನೀನ.||//ಚರಣ ೧//
ಹೆಣ್ಣು:-ಕೇಳಿ ಕೇಳಿ ಸಾಕಾತು ಸತ್ತಅಂತ ನೀ ನನ್ನ ಕಾಲಾಗ.
ವಿಷ ಹಾಕಿ ಕುಡಿಲೇನೋ ಗಪ್ಪಂತ ನಾನು ಹಾಲಾಗ.
ನನ್ನ ಬಗ್ಗೆ ನೀ ತಪ್ಪಾ ತಿಳಿದ.
ಹೋದೆಲ್ಲ ಮಾನ ಕಳೆದ.||
ಮಂದಿಯ ಮನದಾಗ ನೀ ಉಳದ.
ಹುಗದರ ಹೋಗದತ್ತ.
ಹರಲೀಯ ಇಷ್ಟೆಲ್ಲೋ.||
ಇದು ಇಲ್ಲದಾಂಗ ನನ್ನ ನೀ ಮಾಡಿ ಇಟ್ಟೆಲೋ.
ಗಂಡು:-ಮಸನದ ಮನಿಯೊಳಗ ಮಲಗಿಸಿ ನನ್ನ.
ಮಜಾ ಮಾಡೋ ಹೋಗ ಗೆಳತಿ ಹೋಳಗಿ ಉಂಡ ನೀನ.//ಚರಣ ೨//
ಗಂಡು:-ಹಾಳೂರ ಸಂತ್ಯಾಗ ನಿಂತ ಹಾಡಿದಂಗತಲ್ಲ ನಾನಾ.
ಅದಕ್ಕಾಗಿ ನಾವಾದ್ನಿ ಎಲೆ ಗೆಳತಿ ಸಾಯುವಿಗೆ ಶರಣ.
ಹೆಣ್ಣು:-ಇನ್ನೊಬ್ರ ಜೋಡ ನಾನ ಮಾತಾಡೋದು ನೋಡಿದೆ ನೀನಾ.||
ಸಂಶಯ ಪಟ್ಟು ದುಡುಕಿ ಕೊಟ್ಟೆ ಕಮ್ಮಾನ ಪ್ರಾಣ.
ನೋಡಿದ್ರ ತಿಳಿದ ಹೋತ ಆಗತ್ತಿರಲಿಲೋ ಗಾತ.||
ನಂಬಿಕೆ ನಿನಗಿಲ್ಲಂದ್ರ ಭರತೀನೋ ನಾ ಸತ್ತ.//ಚರಣ ೩//
ಗಂಡು:-ಮಸನದ ಮನಿಯೊಳಗ ಮಲಗಿಸಿ ನನ್ನ.||
ಮಜಾ ಮಾಡೋ ಹೋಗ ಗೆಳತಿ ಹೋಳಗಿ ಉಂಡ ನೀನ.||
ಮೂರು ದಿನ ಮುಗಿದ ಮ್ಯಾಲ ಹಾಕ ಹಕ್ಕಿಗೆ ಅನ್ನ.
ಹೆಣ್ಣು:-ಗೋರಿ ಮುಂದ ಗೋಳಿಡುವಂಗ ಮಾಡಿ ಹ್ಯಾದಿ ನೀನ.||