Matada E Huchcha

ಹೆಣ್ಣು:-ಮಾತಾಡ ಏ ಹುಚ್ಚ. ಹೆಂಗಿರತಿ ನನ್ನ ಬಿಟ್ಟ. ನೀ ಇಲ್ಲದ ಬಾಳಿಗಿ. ಏನೈತಿ ನಾಳಿಗಿ. ನಿದ್ದಿಲ್ಲ.. ವಾರಾತ ಕಣ್ಣಿಗಿ ಈ ನನ್ನ ಕಣ್ಣಿಗಿ.
ಗಂಡು:-ಯಾಕಳತಿ ಈ ಹುಚ್ಚಿ. ಪ್ರೀತಿಗೆ ಬೆಂಕಿ ಹಚ್ಚಿ. ಸುತ್ತಿದೀ ನಿ ಸುರುಗಿ. ನಾನಾದೆ ಕಸಬರಗಿ.
ಬದುಕಿದ್ದು ಸತಿ ನೀ ನನ್ನ ಪಾಲಿಗಿ.ನನ್ನ ಪಾಲಿಗಿ.//ಪಲ್ಲವಿ//
ಗಂಡು:-ಕಣ್ಣಾಗ ಕಡ್ಡಿಯ ಆಡಿಸಿ. ಕೈಯಾಗ ಕಣ್ಣ ತೋರಿಸಿ ಜರತಾರಿ ಸೀರಿ ಉಡಲಾಸಲ್ಲ ಏನುವಾಂಗ. ಮಾಡಿದಿ ನಡಬರ್ಕ್ ಇಂದು ಹಿಡಿಯಾಸಲ್ಲ ಅನುವಂಗ.
ಮುಟ್ಟಿ ಮುದ್ದಾಡಿದ ಕೈಲಿ ಕೊಯ್ದೆಲ್ಲ ಗೋಣ ನನಗಿಲ್ಲ ಗೆಳತಿ ತಡಕೊಳ್ಳೋ ಪ್ರಾಣ.
ಹೆಣ್ಣು:-ಮಾತಾಡ ಏ ಹುಚ್ಚ. ಹೆಂಗಿರತಿ ನನ್ನ ಬಿಟ್ಟ. ನೀ ಇಲ್ಲದ ಬಾಳಿಗಿ. ಏನೈತಿ ನಾಳಿಗಿ. ನಿದ್ದಿಲ್ಲ.. ವಾರಾತ ಕಣ್ಣಿಗಿ ಈ ನನ್ನ ಕಣ್ಣಿಗಿ. //ಚರಣ ೧//
ಹೆಣ್ಣು:-ಕೆಂಪ ಆಗಿ ಕಾಸಾಯನಿ. ಕೈಯಿಟ್ಟ ಮಾಡ್ತಿನಾ ಆಣಿ ನಿನಗಾಗಿ ಗೆಳೆಯ ತಾಯ್ತಾ ಮಾಡಿಸಿ ಕೊಟ್ಟೆನೀ. ದೇವರಿಗೆ ಕಿಚ್ಚ ಹಾಯುವ ಹರಿಕಿ ಹೊತ್ತೈನಿ. ಯಾವುದು ಕೈ ಗೂಡಲಿಲ್ಲ. ಮರಮಾಸ ಆತ. ಮಣಿಲಿಲ್ಲ ನನಗ ಮುಂದಿನ ಮಾತು.
ಗಂಡು:-ಯಾಕಳತಿ ಈ ಹುಚ್ಚಿ. ಪ್ರೀತಿಗೆ ಬೆಂಕಿ ಹಚ್ಚಿ. ಸುತ್ತಿದೀ ನಿ ಸುರುಗಿ. ನಾನಾದೆ ಕಸಬರಗಿ.
ಬದುಕಿದ್ದು ಸತಿ ನೀ ನನ್ನ ಪಾಲಿಗಿ.ನನ್ನ ಪಾಲಿಗಿ.//ಚರಣ ೨//
ಗಂಡು:-ಹಿಂಗ್ಯಾಕಾತ ನಮ್ಮಿಬ್ಬರ ಪಾಡಾ.
ಹೆಣ್ಣು:-ಮೋಸಕ ಯಾವುದು ಈಡ.
ಗಂಡು:-ಬ್ಯಾಸರ ಅಂತ ಗುಡಿಯ ನೆಳ್ಳಿಗೆ ಕುಂತರ
ಹೆಣ್ಣು:-ಕೀಸರ ಆಗಿ ಕುಂಬಿಯ ಕಲ್ಲ ಸರದರ.
ಗಂಡು:-ಈಗಯಾರುಮ್ಯಾಲ ಸಿಟ್ಟಾಗಬೇಕ.
ಹೆಣ್ಣು:-ನಮ್ಮ ತಪ್ಪಿಗೆ ನಾವ ಹೋಡಕೋಬೇಕ.//ಚರಣ ೩//
ಗಂಡು:-ಯಾಕಳತಿ ಈ ಹುಚ್ಚಿ. ಪ್ರೀತಿಗೆ ಬೆಂಕಿ ಹಚ್ಚಿ. ಸುತ್ತಿದೀ ನಿ ಸುರುಗಿ. ನಾನಾದೆ ಕಸಬರಗಿ.
ಬದುಕಿದ್ದು ಸತಿ ನೀ ನನ್ನ ಪಾಲಿಗಿ.ನನ್ನ ಪಾಲಿಗಿ.
ಹೆಣ್ಣು:-ಮಾತಾಡ ಏ ಹುಚ್ಚ. ಹೆಂಗಿರತಿ ನನ್ನ ಬಿಟ್ಟ. ನೀ ಇಲ್ಲದ ಬಾಳಿಗಿ. ಏನೈತಿ ನಾಳಿಗಿ. ನಿದ್ದಿಲ್ಲ.. ವಾರಾತ ಕಣ್ಣಿಗಿ ಈ ನನ್ನ ಕಣ್ಣಿಗಿ.