top of page
IMG_7077.PNG

Mooka Basavanna

(ಗಾಯಕ:-ಮೂಕ ಬಸವಣ್ಣ ಮೂರ್ ಹೊತ್ತು ದುಡಿದರು ರೈತರ ಮನೆಯಾಗ ಮುಪ್ಪಿನ ಕಾಲಕ ಹಿಡಿ ಮೇವು ಹಾಕದೆ ಮಾರತ್ತಾರ ಕಟಕಗ)


ಗಾಯಕ:-ಮೂಕ ಬಸವಣ್ಣ ಮೂರು ಹೊತ್ತು ದುಡಿದರು||

ಮುಪ್ಪಿನ ಕಾಲಕ್ಕ ಹಿಡಿಮೆವು ಹಾಕದೆ ಮಾರತ್ತಾರ ಕಟಕಗ. ಯಾಕ ಮಾರತ್ತಾರ ಕಟಕಗ.


ಸಂಗಡಿಗರು:-ಮೂಕ ಬಸವಣ್ಣ ಮೂರು ಹೊತ್ತು ದುಡಿದರು||

ಮುಪ್ಪಿನ ಕಾಲಕ್ಕ ಹಿಡಿಮೆವು ಹಾಕದೆ ಮಾರತ್ತಾರ ಕಟಕಗ. ಯಾಕ ಮಾರತ್ತಾರ ಕಟಕಗ //ಪಲ್ಲವಿ//



ಗಾಯಕ:-ಮಳೆ ಬಿಸಿಲೆನ್ನದೇ ಹಗಲಿರುಳು ದುಡಿದಾನ ನಗಕ ಕೊಟ್ಟ ಹೆಗಲಾ.

ಬಂಡಿಯ ತುಂಬ ಭಾರ ಜಗ್ಗತಾನ ಊರ್ಯಾದ್ರು ಮಂಡಿಗಾಲ.||

ದಣಿವು ಇಲ್ಲದ ದುಡಿದ ದುಡಿದಾಣ ಈ ಭೂಮಿಯ ಮ್ಯಾಲ. 

ಮುಗುದಾನ ಜಗ್ಗಿ ರಕ್ತಸುರುದರು ತಾಳ್ಯಾನ ನೋವೆಲ್ಲಾ.||

ಬಾರ್ಕೋಲ ಯತ್ತಿ ಬಡಿದೀರಿ ಬಾಸುಂಡಿ ಮೂಡ್ಯಾವ ಮೈಮ್ಯಾಲ ಕನಿಕರ ಎಂಬುದು ನಿಮಗಿಲ್ಲ. 


ಸಂಗಡಿಗರು:-ಮೂಕ ಬಸವಣ್ಣ ಮೂರು ಹೊತ್ತು ದುಡಿದರು||

ಮುಪ್ಪಿನ ಕಾಲಕ್ಕ ಹಿಡಿಮೆವು ಹಾಕದೆ ಮಾರತ್ತಾರ ಕಟಕಗ. ಯಾಕ ಮಾರತ್ತಾರ ಕಟಕಗ //ಚರಣ ೧//



ಗಾಯಕ:-ಬಾರ್ಕೋಲ ಎಟ ತಾಳದ ಬಸವ ಕಣ್ಣೀರ ಸುರೀಶ್ಯಾನ.

ಬಸವನ ಮೈಮ್ಯಾಲ ಬಾಸುಂಡಿ ನೋಡಿ ಶಿವ ಮರಗತಾನ.||

ಮೊದಲು ಬೀಳುವ ಮೂರ್ ಪೆಟ್ಟು ಮಾತ್ರ ನಿನಗಿರಲಿ ಅಂದಾನ.

ಆಮೇಲೆ ಬೀಳುವ ಪ್ರತಿಯೊಂದು ಏಟು ನನಗಿರಲಿ ಅಂದಾನ.||

ಭಕ್ತ ಬಸವಣ್ಣ ನೋವಿನ ಪಾಲ ಮಹಾದೇವ ಪಡೆದಾನ ತಿಳಿದು ಕಾಡಬ್ಯಾಡ್ರಿ ಬಸವಣ್ಣ.


ಸಂಗಡಿಗರು:-ಮೂಕ ಬಸವಣ್ಣ ಮೂರು ಹೊತ್ತು ದುಡಿದರು||

ಮುಪ್ಪಿನ ಕಾಲಕ್ಕ ಹಿಡಿಮೆವು ಹಾಕದೆ ಮಾರತ್ತಾರ ಕಟಕಗ. ಯಾಕ ಮಾರತ್ತಾರ ಕಟಕಗ //ಚರಣ ೨//



ಗಾಯಕ:-ಹೊಲ ಬಿತ್ತುವಾಗ ಬೇಡ್ತಾನ ಬಸವಣ್ಣ ಭೂಮಿತಾಯಿಯಣ್ಣ.

ಹುಲುಸಾಗಿ ಬೆಳೆದ ಬೆಳೆಯ ಕೊಟ್ಟ ಕಾಯಂತ ರೈತ ಮಗನ.||

ಮರತ ಕುಂತೀರಿ ಹೆಗಲಿಗೆ ಹೆಗಲ ಕೊಟ್ಟ ದುಡಿಯುವವನ.

ಹಿಂಡುವದನಕ ಹಾಕತ್ತೀರಿ ಹಸಿಮೆವು ಮುಸುರಿಯನ.||

ಒಣಗಿದ ಹುಲ್ಲು ಕಣಕಿಯ ಹಾಕಿ ಕಟ್ಟೆರಿ ಬಸವನಾ ನಿಮ್ಮ ಮನಸ್ಸಿಲೋ ಹಸನಾ.


ಸಂಗಡಿಗರು:-ಮೂಕ ಬಸವಣ್ಣ ಮೂರು ಹೊತ್ತು ದುಡಿದರು||

ಮುಪ್ಪಿನ ಕಾಲಕ್ಕ ಹಿಡಿಮೆವು ಹಾಕದೆ ಮಾರತ್ತಾರ ಕಟಕಗ. ಯಾಕ ಮಾರತ್ತಾರ ಕಟಕಗ //ಚರಣ ೩//


ಗಾಯಕ:-ಬಸವಣ್ಣ ಇದ್ದ ಮನಿಯಾಗ ಅನ್ನಕ್ಕ ಕೊರತೆ ಇಲ್ಲರನ್ನ. 

ಭಕ್ತ ಬಸವಣ್ಣ ಇದ್ದಲ್ಲಿ ಬಂದು ಶಿವ ನೆಲಸತಾನ.||

ಹಿಂದಿನ ಜನ್ಮದ ಪುಣ್ಯದ ಫಲದಿಂದ ಕಟ್ಟೇರಿ ಬಸವನಾ.

ಬಸವಣ್ಣ ಬಡೆದು ಕರ್ಮ ಕಟ್ಟಿಕೊಳ್ಳಬ್ಯಾಡ್ರಿ ನಿಮ್ಮ ಬೆನ್ನ||

ದುಡಿವ ಬಸವಣ್ಣ ನಂಬಿ ನಡೆದರ ಒಲಿತಾನ ಬಸವಣ್ಣ. ನಮ್ಮ ಖಿಳೇಗಾವಿ  ಬಸವಣ್ಣ. 


ಸಂಗಡಿಗರು:-ಮೂಕ ಬಸವಣ್ಣ ಮೂರು ಹೊತ್ತು ದುಡಿದರು||

ಮುಪ್ಪಿನ ಕಾಲಕ್ಕ ಹಿಡಿಮೆವು ಹಾಕದೆ ಮಾರತ್ತಾರ ಕಟಕಗ. ಯಾಕ ಮಾರತ್ತಾರ ಕಟಕಗ //ಚರಣ ೪//


ಗಾಯಕ:-ಮೂಕ ಬಸವಣ್ಣ ಮೂರು ಹೊತ್ತು ದುಡಿದರು||

ಮುಪ್ಪಿನ ಕಾಲಕ್ಕ ಹಿಡಿಮೆವು ಹಾಕದೆ ಮಾರತ್ತಾರ ಕಟಕಗ. ಯವ್ವ ಮಾರತ್ತಾರ ಕಟಕಗ.

ಯಾಕ ಮಾರತಾರ ಕಟಕ.

ಯವ್ವ ಮಾರತಾರ ಕಟಕ.











bottom of page