top of page
IMG_7077.PNG

Naa Onti Iruvaga

 ಗಂಡು:-ನಾ ಒಂಟಿ ಇರುವಾಗಾ ಗೆಳತಿ ನಿನ್ನ ನೆನಪು ಕಾಡೈತಿ||

ನನ್ನ ನಿನ್ನ ಪ್ರೀತಿಯ ಆಟ. ಕಣ್ಣ ಮುಂದ ಬರತೈತಿ. 

ನಾ ಒಂಟಿ ಇರುವಾಗಾ ಗೆಳತಿ ನಿನ್ನ ನೆನಪು ಕಾಡೈತಿ||


ಹೆಣ್ಣು:-ಏನಂತ ನಾ ಹೇಳಲಿ ಗೆಳೆಯ ನನ್ನ ಮನಸು ಮರಿಗೈತಿ.||

ಕೂಡಿ ಆಡಿದಂತ ಆಟ ನೆನಪಿಗೆ ಬರತೈತಿ.

ಏನಂತ ನಾ ಹೇಳಲಿ ಗೆಳೆಯ ನನ್ನ ಮನಸು ಮರಿಗೈತಿ.||//ಪಲ್ಲವಿ//




ಗಂಡು:- ನೋಡಿ ಬಾಳ ದಿವಸತ. ಗೆಳತಿ ನಿನ್ನ ಮರಿಲ್ಯಾಂಗ. 

ಮನಸು ಮರಗಿ ಅಳತೈತಿ. ನಿನ್ನ ಬಿಟ್ಟು ಇರಲ್ಯಾಂಗ. 

ಗೆಳತಿ ಸಣ್ಣವಳಿದ್ದಾಗ. ಇಟ್ಟಿ ಮನಸು ನನ್ನ ಮ್ಯಾಗ.

ಪ್ರೇಮದ ಆಟ ಕಲಿಸಿ ಬಿಟ್ಟು ಹೋದೀ ನಡು ನೀರಾಗ. 

ಅಳತೈತಿ ಮನಸ. ಹೇಳ ಸಹಿಸಲೇಂಗ. 

ಕುಣಿದಾಡುವ ನವಿಲು ಆಗೇತಿ ಅಗಲಿದಾಂಗ. 

ಓಮ್ಯಾರ ಬಂದು ಮಾರಿ ತೋರಿಸಿ ನೀ ಹೋಗ. 

ನಾ ಒಂಟಿ ಇರುವಾಗಾ ಗೆಳತಿ ನಿನ್ನ ನೆನಪು ಕಾಡೈತಿ||//ಚರಣ ೧//




ಹೆಣ್ಣು:-ಮರೀಲ್ ಹ್ಯಾಂಗ ಗೆಳೆಯ ನಿನ್ನ. ಮೂಡಿದಿ ನನ್ನ ಎದೆಯಾಗ. 

ಬಿಟ್ಟ ಇರಲಿಲ್ಲ ನೀ ನನ್ನ ಕೂಡಿ ಆಡವಯದಾಗ.

ಹಗಲೆಲ್ಲ ಕೂಡಿದ ಗಳಿಗಿ ಕಟಿತೈತಿ ಮನದಾಗ. 

ಮನಸಿನಿಂದ ಕೂಡಿದ ಪ್ರೀತಿ ಕೆಡಿಸೈತೋ ಮನೀ ಬಳಗ.

ಅಗಲಿಸಿ ಇಟ್ಟಾಗ ಗೆಳೆಯ ನಾವಿಬ್ಬರೂ ಕೂಡದಾಂಗ. 

ತಪ್ಪು ತಿಳಿ ಬ್ಯಾಡ ಮೀಸಲೈತಿ ಈ ಜೀವ ನಿನಗ.

ಎಂದು ಭರತೈತಿ ಗೆಳೆಯ ಇಬ್ಬರೂ ಕೂಡುವ ಯೋಗ.

ಏನಂತ ನಾ ಹೇಳಲಿ ಗೆಳೆಯ ನನ್ನ ಮನಸ್ಸು ಮರಗೈತಿ.||//ಚರಣ ೨//




ಗಂಡು:-ನನ್ನ ಮ್ಯಾಲಿನ ಪ್ರೀತಿ ಮರೆತಿಲ್ಲೆನ ಎಲೆ ಗೆಳತಿ. 

ನನ್ನ ನೆನಪು ತಗದ ನೀ ಕಣ್ಣೀರು ಯಾಕ ಹಾಕತಿ.

ಜೋಡಿ ಇರತಿನಂದರ ಗೆಳತಿ ಯಾಕ ಅಂಜತಿ. 

ನಮ್ಮ ಪ್ರೀತಿಗೆ ಸಾವಿಲ್ಲ ಉರಿಯುವ ಮಂದಿ ಉರಿಯಲಿ. 

ಸತ್ತರು ಏನಾತ ಗೆಳತಿ ಪ್ರೀತಿಯ ಹೆಸರು ಉಳಿಯಲಿ. 

ಹೊಸ್ತಿಲ ದಾಟಿ ಬಾರ ಪ್ರೀತಿ ಅಮರವಾಗಿರಲಿ. 

ನಾವು ಜಯಿಸಿ ಬಾಳೋಣ ಗೆಳತಿ ಈ ಹುಚ್ಚು ಜಗದಲ್ಲಿ. 



ಹೆಣ್ಣು:-ಹಣೆಯಕ್ಕಿ ಕೂಡಿದ ಮ್ಯಾಲ ಹಡೆದವರು ಯಾಕಂತ.||

ಒಬ್ಬರನ್ನೊಬ್ಬರು ಅರಿತ ಮ್ಯಾಲ. ಆ ಸ್ವರ್ಗ ನಮದಂತ.//ಚರಣ ೩//


ಗಂಡು:-ನಾ ಒಂಟಿ ಇರುವಾಗಾ ಗೆಳತಿ ನಿನ್ನ ನೆನಪು ಕಾಡೈತಿ||






bottom of page