top of page
IMG_7077.PNG

Nagarapanchami Habbakka

ಗಂಡು:-ನಾಗರಪಂಚಮಿ ಹಬ್ಬಕ್ಕ.||

ಬಂದ್ಯಾಕ ಹೊಟ್ಟಿ ಉರುಸಕ.

ನೋಡುದ್ಯಾಕ. ಕಾಡುದ್ಯಾಕ.

ಹೆಣ್ಣು:-ಬೆಂಕಿ ಬಿತ್ತು ನನ್ನ ಬಾಳೆಕ||

ಬಂದೀನೋ ಗೆಳೆಯ ಹೇಳಾಕ. 

ನನ್ನ ದುಃಖ ತೋಡಿಕೊಳ್ಳಾಕ. 

ಗಂಡು:-ನಾಗರಪಂಚಮಿ ಹಬ್ಬಕ್ಕ.//ಪಲ್ಲವಿ//



ಗಂಡು:-ಬರಬಾರದೆಲ್ಲ ಬಂದಯ್ತಿ ನನಗ. 

ನಿನಗೆನಂತಾದ ಆಗೈತಿ.

ವಿಷ ಕುಡಿದವನಾ ಬದುಕಿರುವಾಗ.

ಅಮೃತ ಕುಡಿದಾಕಿಯಾಕ ಅಳತಿ.

ತಿಳದೈತಿ ಹುಳಕ ಕಂಡೈತಿ ಬೆಳಕ. 

ಈ ನಾಟಕ ಇನ್ನೂ  ಸಾಕ.

ನೋಡುದ್ಯಾಕ. ಕಾಡುದ್ಯಾಕ.

ನಾಗರಪಂಚಮಿ ಹಬ್ಬಕ್ಕ.//ಚರಣ ೧//




ಹೆಣ್ಣು:-ಮನಸಿನ ಮರ್ಮ. 

ಅರಿಯದೇ ನೀನ. 

ಹಂಗಿಸಬ್ಯಾಡ ಸುಮಸುಮಕ. 

ನನ್ನಯ ಸಂಕಟ ನನಗ ಗೊತ್ತ ಬರಬೇಕಾ ಯಾಕ ನಿನ ತನಕ.

ತೋರಿಸಬೇಕ ನೀ ದಾರಿ ಇದಕ. 

ಗೆಳೆಯ ಬಂದೇನ ಆದಕ. 

ನನ್ನ ದುಃಖ ತೋಡಿಕೊಳ್ಳಾಕ. 

ಬೆಂಕಿ ಬಿತ್ತು ನನ್ನ ಬಾಳೆಕ.//ಚರಣ ೨//




ಗಂಡು:-ನೀ ಕೊಟ್ಟ ಅಳ್ಳ.

ನೆನೆಸೈತಿ ಕಳ್ಳ. 

ಏನರ ಹೇಳಬ್ಯಾಡ ಸುಳ್ಳ ಸುಳ್ಳ. 

ಅಳಬ್ಯಾಡ ಗಳಗಳ. 

ತಡಿಲ್ಯಾಂಗ ತಳಮಳ. 

ಕಣ್ಣೀರ ತಂದು ಮಾಡಬ್ಯಾಡ ಮಳ್ಳ. 

ನಿನ್ನಿಂದ ಹಾಳ ಆಗಿ ಹೋತು ಬಾಳ. 

ಸಂಘ ಇನ್ನೂ ಸಾಕ. 

ನೋಡುದ್ಯಾಕ. ಕಾಡುದ್ಯಾಕ.

ನಾಗರಪಂಚಮಿ ಹಬ್ಬಕ್ಕ.//ಚರಣ ೩//





ಹೆಣ್ಣು:-ಗಂಡನ ಮನೆಯಾಗ ಗರದಿ ಗಮ್ಮತ್ತ ಐತಂತ ಚೀಲದರ ಅದು ನಿಂದ ತಪ್ಪಾ.

ನನ್ನ ನಿನ್ನ ಪ್ರೀತಿ ಅತ್ತಿಗೆ ತಿಳಿದ ವಗದಾಳ ಬಾಳಿನ ಹಾಲಿಗೆ ಉಪ್ಪ. 

ನಡೆದೈತಿ ರಂಪ ಹಿಡಕೋರು ನೆನಪ. 

ನಿ ಹಾದಿ ಹುಡುಕಬೇಕ.

ಬಂದೈನಿ ಅದಕ. ನಿನ್ನ ಕೆಳಕ. 

ಗಂಡು:-ತಗದೈತಿ ನನ್ನ ಮಣಿ ಚಿಲಕ.||

ಅಂಜತೀ ಗೆಳತಿ ನೀ ಯಾಕ. 

ತಗದವಗಿ ಅಳುಕ. 

ಆಗುವೆ ನಾ ಬೆಳಕ.

ತಗದೈತಿ ನನ್ನ ಮಣಿ ಚಿಲಕ.

ಬಾಬಾರ.||//ಚರಣ ೪//

bottom of page