
Nanna Kannada Manna Vagada

ಗಂಡು:-ನನ್ನ ಕಣ್ಣಾಗ ಮಣ್ಣ ಒಗದ ಹಚ್ಚಿಕೊಂಡಂಗ ಅರಿಶಿನ.....
ನನ್ನ ಕಣ್ಣಾಗ ಮಣ್ಣ ಒಗದ ಹಚ್ಚಿಕೊಂಡಂಗ ಅರಿಶಿನ.
ಎಲೆ ಗೆಳತಿ, ಎಲೆ ಗೆಳತಿ, ಎಲೆ ಗೆಳತಿ ಹಸಿಮನಿ ಏರತಿ ಹ್ಯಾಂಗ ನಾ ನೋಡತೇನ.
ಹೆಣ್ಣು:-ಹಾಲಗಂಬ ಉಗಿಯೋ ಬದಲ ನನ್ನ ಉಗದಂಗ ಆತ.
ಕುಡಿದ ಪ್ರೀತಿ, ಕೂಡಿದ ಪ್ರೀತಿ, ಕೂಡಿದ ಪ್ರೀತಿ ಮಣಿಯ ಮುಂದ ಮಣ್ಣ ಮಾಡಿದಂಗ ಆತ.
ಗಂಡು:-ನನ್ನ ಕಣ್ಣಾಗ ಮಣ್ಣ ಒಗದ ಹಚ್ಚಿಕೊಂಡಂಗ ಅರಿಶಿನ.
ನನ್ನ ಕಣ್ಣಾಗ ,ನನ್ನ ಕಣ್ಣಾಗ.//ಪಲ್ಲವಿ//
ಹೆಣ್ಣು:-ಹೆಂಗಹೋಗಲೋ ಹಂದರದಾಗ ಗಂಡ ಆಗೋಣ ಮಗ್ಗಲದಾಗ.
ಗಂಡು:-ಅರಿಶಿಣ ಸೀರಿಯ ನೀ ಉಡುವಾಗ ಬರಲಿಲ್ಲ ನೆನಪಾಗ.
ಹೆಣ್ಣು:-ಓ....ಓ.... ಹಂಗಂಗ ಮಾತ ಹೇಳಿ ಹಂಗಿಸಿ ಬೈಬ್ಯಾಡ ನೀ ನನ್ನ ಕೊಲಬ್ಯಾಡ. ನೀ ನನ್ನ ಕೊಲಬ್ಯಾಡ.
ಗಂಡು:-ಹಣೆಬರಹ.. ಹಣೆಬರಹ.. ಹಣೆಬರಹ ಹಳ್ಳ ಹಿಡಿಸಿ ಹಾಳಗೆಡವಿದೀ ನನ್ನ..
ನನ್ನ ಕಣ್ಣಾಗ ಮಣ್ಣ ಒಗದ ಹಚ್ಚಿಕೊಂಡಂಗ ಅರಿಶಿನ.
ನನ್ನ ಕಣ್ಣಾಗ ,ನನ್ನ ಕಣ್ಣಾಗ.|| //ಚರಣ ೧//
ಹೆಣ್ಣು:-ಹೆಜ್ಜೆಕಿತ್ತಿಡಲೇಂಗ ಸುರಗಿ ಸುತ್ತುವಾಗ.
ಏನ ಹೇಳಲೋ ಗುಗುಳ ಎತ್ತುವಾಗ.
ಗಂಡು:-ಗಂಡ ಆಗವ್ಮೂರು ಗಂಟೆ ಹಾಕಿದಾಗ.
ಆತು ನನ ಬಾಳೆ ಇದ್ದು ಇಲ್ಲದಾಂಗ.
ಹೆಣ್ಣು:-ಓ... ಓ... ನೀಡಿದ್ದು ಉಳಿದಂಗ. ನಾನೀದ್ದು ಸತ್ತಂಗ. ಮಂದಿಯ ನೆದರಾಗ.||
ಗಂಡು:-ಮಣಿ ಮಂದಿ, ಮಣಿ ಮಂದಿ, ಮಣಿ ಮಂದಿ ಮಾತಿಗೆ ಮಾನ ಗೆಳತಿ ನೀ ಕೊಟ್ಟಿ ಏನ.
ನನ್ನ ಕಣ್ಣಾಗ ಮಣ್ಣ ಒಗದ ಹಚ್ಚಿಕೊಂಡಂಗ ಅರಿಶಿನ.
ನನ್ನ ಕಣ್ಣಾಗ ,ನನ್ನ ಕಣ್ಣಾಗ.|| //ಚರಣ ೨//
ಹೆಣ್ಣು:-ಅಕ್ಕಿಕಾಳ ಬಿದ್ದರ ಮೈಮ್ಯಾಗ ಆತು ಬೆಂಕಿಮಳಿ ಬಂದು ಸುರದಾಂಗ.
ಗಂಡು:-ಹಂದರದಾಗ ಹಗ್ಗ ಕಳಸಿ ಕೊಡವೊಂದ. ಉರ್ಲ ಹಾಕೊಂಡ ಜೀವ ಬಿಡತ್ತನ ನಿನ್ನ ಮುಂದ.
ಹೆಣ್ಣು:-ಓ...ಓ... ಬಾವೆಂದು ಕಡೆ ಐತಿ ಹೊಳಿ ಒಂದು ಕಡೆ ಐತಿ
ಎಲ್ಯಾರ ಒಗಿಕೊಂದ.ಎಲ್ಯಾರ ಒಗಿಕೊಂದ.
ಗಂಡು:-ನಿನ್ನ ಕೊಂದ, ನಿನ್ನ ಕೊಂದ, ನಿನ್ನ ಕೊಂದ ಹೇಳ ಗೆಳತಿ ಸಾಧಿಸಲೇನ
ಹೆಣ್ಣು:-ಹಾಲಗಂಬ ಉಗಿಯೋ ಬದಲ ನನ್ನ ಉಗದಂಗ ಆತ.
ಗಂಡು:-ಎಲೆ ಗೆಳತಿ, ಎಲೆ ಗೆಳತಿ
ಹೆಣ್ಣು:- ಕೇಳೋ ಗೆಳೆಯ, ಕೇಳೋ ಗೆಳೆಯ,ಕೇಳೋ ಗೆಳೆಯ.//ಚರಣ ೩//