top of page
IMG_7077.PNG

Nee Naguvudu Bidavalli

ಗಂಡು:-ನೀ ನಗುವುದು ಬಿಡವಲ್ಲಿ ನನ್ನ ಮರೆತರು ಮರಿವಲ್ಲಿ||2||

ಹಿಂಗ್ಯಾಕ ಎಲೆ ಬಾಲಿ... ನನ್ನ ಕೊಲ್ಲುವುದು ಬಿಡವಲ್ಲಿ .


ಹೆಣ್ಣು:-ಕೈ ಹಿಡಿದರು ಹಿಡಿವಲ್ಲಿ ಮದವಿಯಾಗಾಕು ಬಿಡವಲ್ಲಿ||2||

ನೀನ್ಯಾಕ ತಿಳುವಲ್ಲಿ ಬರತೈತಿ ನನಗ ಹರಲಿ.


ಗಂಡು:-ನೀ ನಗುವುದು ಬಿಡವಲ್ಲಿ ನನ್ನ ಮರೆತರು ಮರಿವಲ್ಲಿ| //ಪಲ್ಲವಿ//


ಗಂಡು:-ನಮ್ಮ ಪ್ರೀತಿಯ ಈ ತೇರಾ ಆ ಗುರಿಯ ಮುಟ್ಟಲಿಲ್ಲ ನಡು ದಾರಿಯೊಳಗ ಬಂದು ಬಿರುಗಾಳಿ ಬಿಟ್ಟಿತಲ್ಲಾ||2||


ಹೆಣ್ಣು:-ನನ್ನ ಗೆಳೆಯ ನಿನ್ನ ಪ್ರೀತಿ ಕನಸಾಗಿ ಹೋಯಿತಲ್ಲಾ ||2||

ನೀ ಇಲ್ಲದ ಈ ಬದುಕು ಬಲು ಬ್ಯಾಸರಾಯಿತಲ್ಲಾ 

ಕೈ ಹಿಡಿದರು ಹಿಡಿವಲ್ಲಿ ಮದವಿಯಾಗಾಕು ಬಿಡವಲ್ಲಿ//ಚರಣ ೧//


ಹೆಣ್ಣು:-ನನ್ನ ಮಾರಿ ಸಪ್ಪಗಿದ್ರ ನೀ ಕೊರಗೆ ಕೊರಗತ್ತಿದ್ದಿ ನಿನ್ನ ಪ್ರೀತಿ ಮಾತಿನ್ಯಾಗ ನನ್ನ ಕರಗಿಸಿ ಬಿಡತ್ತಿದ್ದಿ||2||


ಗಂಡು:-ತೊಡಿಮ್ಯಾಲ ತಲಿ ಇಟ್ಟ ನಾ ಎಲ್ಲಿ ಮಲಗಬೇಕು||2||

ನೀನಿಲ್ಲದ ದಿನಗೋಳ ನಾ ಹ್ಯಾಂಗ ಕಳಿಯಬೇಕ. 

ನೀ ನಗುವುದು ಬಿಡವಲ್ಲಿ ನನ್ನ ಮರೆತರು ಮರಿವಲ್ಲಿ//ಚರಣ ೨//


ಗಂಡು:-ನೀ ನನ್ನ ನೆನಪಿನ್ಯಾಗ ಉಪವಾಸ ಬೀಳಬ್ಯಾಡ ನನ್ನ ಪ್ರೀತಿಯ ನೀ ನೆನೆಸಿ ಕಣ್ಣೀರ ಇಡಬ್ಯಾಡ||2||


ಹೆಣ್ಣು:-ಈ ಬಾಳಿನ ಸಂತ್ಯಾಗ ಬರಿ ಪಾತ್ರದ ಗೊಂಬ್ಯಾಗಿ||2||

ಆ ದೇವರು ಇಟ್ಟಂಗ ಇರಬೇಕು ಶಿರಬಾಗಿ

ಕೈ ಹಿಡಿದರು ಹಿಡಿವಲ್ಲಿ ಮದವಿಯಾಗಾಕು ಬಿಡವಲ್ಲಿ//ಚರಣ ೩//


ಗಂಡು:-ಈ ಪ್ರೀತಿ ಅನ್ನುವ ಶಬ್ದ ಹುಟ್ಟಿಸ್ಯಾನ ಯಾವ ದೇವರ ಈ ಕೂಡಿದ ಮನಸೇರಡ ವಡಿತಾನ ಯಾಕ ದೇವರ||2||


ಹೆಣ್ಣು:-ಯಾರಿಗಂದ್ರ ಏನ ಬಂತ ಇದು ನಮ್ಮ ನಮ್ಮ ಹಣೆಬಾರಾ||2||

ವಿಧಿ ಬರೆದಾ ನಾಟಕದಾಗ ನಮದೈತಿ ಇಷ್ಟ ಪಾತ್ರ.//ಚರಣ ೪//


ಗಂಡು:-ನೀ ನಗುವುದು ಬಿಡವಲ್ಲಿ ನನ್ನ ಮರೆತರು ಮರಿವಲ್ಲಿ||2||

ಹಿಂಗ್ಯಾಕ ಎಲೆ ಬಾಲಿ... ನನ್ನ ಕೊಲ್ಲುವುದು ಬಿಡವಲ್ಲಿ .


ಹೆಣ್ಣು:-ಕೈ ಹಿಡಿದರು ಹಿಡಿವಲ್ಲಿ ಮದವಿಯಾಗಾಕು ಬಿಡವಲ್ಲಿ..//ಪಲ್ಲವಿ//

bottom of page