
Ninta Nela Nela

ಗಂಡು:-ನಿಂತ ನೆಲಾ ನೆಲ ನುಂಗಿದಂಗ ಆತ.||
ನನ್ನ ನೆತ್ತರಲೇ ಲಗ್ನ ಪತ್ರ ಬರಸಿದಂಗ ಆತ.
ಈ ಒಡಲ ಒಡದ ಕಡಲ ಸೇರಿ ದಂಗ ಆಗಿ ಹೋತ.||
ಹೆಣ್ಣು:-ಕೈಬಳ್ಳ ಬಳ್ಳ ಕೈ ಬಳ್ಳ ಮುರುಗಾರೋ.
ಕಾರಿಯ ಮುಳ್ಳ ತಂದು ಕಣ್ಣಾಗ ಚುಚ್ಚಾರೋ.
ಹನಿಗೆ ಹಳ್ಳ ಹಚ್ಚಿ ಲಗ್ನಪತ್ರ ಬರಿಶಾರೋ.||//ಪಲ್ಲವಿ//
ಗಂಡು:-ಅಂಗಯ್ಯ ನೆಲಕ ಇಟ್ಟ ಹೆಂಗಾರ ಮಳಿಯ ಜಡದಿ.
ಮುಗೈಗೆ ಮುತ್ತ ಕೊಟ್ಟ ನನ್ನ ತಲೆಯ ಪಟ್ಟಿ ಒಡದಿ.
ಆಸೆಕ ಪಾಸೆ ಹಾಕಿ ಮನಸೀಗೆ ಮುಳ್ಳ ಬಡದಿ.
ಸುಡಗಾಡಕ ನನ್ನಅಟ್ಟಿ ನೀ ಬ್ಯಾರೆ ದಾರಿ ಇಡದಿ.
ಗಂಟಲಕ್ಕ ಗಾಳ ಹಾಕಿ ಪ್ರೀತಿ ಕಾಲಾಗ ಹೊಸದಿ.
ಬೆಂಕ್ಯಾಗಶದಿಯ ಸುರದ ನಂಬಿಕೆ ಗೆಳತಿ ಮುರದಿ.||
ನಿಂತ ನೆಲಾ ನೆಲ ನುಂಗಿದಂಗ ಆತ.//ಚರಣ ೧//
ಹೆಣ್ಣು:-ಬಟಿಗ್ಯಾಗ ಒಡೆದ ಹೇಳಿದರು ಮೈತುಂಬ ಹಾಕ್ಯಾರ ಚಿಟಗಿ.
ನನ್ನ ತುಟಿಗೆ ಹಾಕಿ ಹೊಳಗಿ ಅಟ್ಯಾರ ಅಕ್ಕನ ಊರಿಗಿ.
ಶಟಗಿಗೆ ಸಾವಿರ ಸಲಾ ಶಪಿಸಿನಿ ಮರ ಮರಿಗಿ.
ಹೊತ್ತಿಗೆ ಹೊತ್ತ ನೋಡಿ. ಕರಿಶ್ಯಾರ ರಾತ್ರಿ ಬಸ್ಸಿಗಿ.
ಕತ್ತಿಗೆ ಕೈಯ ಕೊಟ್ಟ ಹೋಗ್ಯಾರ ಮದವಿ ಸಂತಿಗಿ.
ಮದುವೆಗಿ ನಾಕ ದಿವಸ ಇತಿ ವಿಷ ಕುಡಿಲೇನ ಸಂಜೆಗಿ.||
ಕೈಬಳ್ಳ ಬಳ್ಳ ಕೈ ಬಳ್ಳ ಮುರುಗಾರೋ.//ಚರಣ ೨//
ಗಂಡು:-ಮುಗುಲ ಹರದ ಬಿದ್ದರುನು ನಿನ್ನ ನಾ ಮರೆತನೆನ.
ಹೆಗಲ ಸಮದಹೋಗೈತಿ ಹೊತ್ತು ಪ್ರೀತಿ ಬುತ್ತಿನ.||
ಬರಸಿಡಿಲು ಬಡದ ಎದೆಗೆ ಹೇಳ್ತುನ ನಿನ್ನ ಹೆಸರನ್ನ.
ತಗಲ ಹೇಳಿ ಬದಲ ಮಾಡಿದೀ ನಿ ಮನಸನ್ನ.
ತೊಗಲಿನ ತೋರಣ ಕಟ್ಟಿ ತಾಕತ್ತಿನ ಬಾಗಿಲಿಗೆ.
ಬಿಸಲಾಗ ನೆತ್ತಿ ಉರುದರು ಅಳತೇನಿ ನಿಂತ ಗಸಿಗಿ.||
ನಿಂತ ನೆಲಾ ನೆಲ ನುಂಗಿದಂಗ ಆತ.//ಚರಣ ೩//
ಹೆಣ್ಣು:-ಗಂಟಾತ ನಿನ್ನ ಮಾತ ಗೆಳೆಯ ನನ್ನ ಎದೆಯಾಗ.
ಎಂಟು ವರ್ಷದ ನಮ್ಮ ಪ್ರೀತಿ ಮುಚ್ಚತಾರೋ ಮಣ್ಣಾಗ.
ನೆಂಟರು ಬಂದ ಕುಂತಾಗ ನನ್ನ ದಿಕ್ಕ ತಪ್ಪಿ ಹೋತ.
ಮನಸವೊಟ್ಟ ತಡಿವಲ್ತ.
ನಿನ್ನ ಮರೆಯಾಕಾಗವಲ್ತ.
ಸಟ್ಟ ಸರ್ವತ್ತಿನ್ಯಾಗ ನಾ ದಾಟಲೇನೋ ಹೊಸ್ತಿಲ.
ಹೊಟ್ಯಾಣ ಕಳ್ಳ ಕೀಳುವಂಗ ನಿನ್ ತಂಗ ಆತು ಉಸಿರಾ.||//ಚರಣ ೪//
ಗಂಡು:-ನಿಂತ ನೆಲಾ ನೆಲ ನುಂಗಿದಂಗ ಆತ.
ಹೆಣ್ಣು:-ಕೈಬಳ್ಳ ಬಳ್ಳ ಕೈ ಬಳ್ಳ ಮುರುಗಾರೋ.
ಗಂಡು:-ನನ್ನ ನೆತ್ತರಲೇ ಲಗ್ನ ಪತ್ರ ಬರಸಿದಂಗ ಆತ.
ಈ ಒಡಲ ಒಡದ ಕಡಲ ಸೇರಿ ದಂಗ ಆಗಿ ಹೋತ.
ಹೆಣ್ಣು:-ಹನಿಗೆ ಹಳ್ಳ ಹಚ್ಚಿ ಲಗ್ನಪತ್ರ ಬರಿಶಾರೋ.