
Panchamige Baratalanta

ಗಂಡು:-ಪಂಚಮಿಗೆ ಬರ್ತಾಳಂತ.
ನನಮಾರಿ ನೋಡಾಕಂತ.
ಹೆಣ್ಣು:-ಭೇಟಿಯಾಗಿ ಒರಸಾಗಿಹೋತ.
ಮನಸಿಗೆ ತ್ರಾಸಾಗಿ ಹೋತ.
ಗಂಡು:-ಪಂಚಮಿಗೆ ಬರ್ತಾಳಂತ.
ನನಮಾರಿ ನೋಡಾಕಂತ.||
ನನ ಗೆಳೆಯ ಹೆಂಗದಿಯಂತ.
ಅಂತ್ಹೇಳಿ ಹುತ್ತಿಗೆ ಹಾಲ ಏರಿತಾಳಂತ.||
ಹೆಣ್ಣು:-ಭೇಟಿಯಾಗಿ ಒರಸಾಗಿಹೋತ.
ಮನಸಿಗೆ ತ್ರಾಸಾಗಿ ಹೋತ.
ಇರಲ್ಹೆಂಗೋ ನಾ ನಿನ್ನ ಮರೆತ.
ನಿನ್ನ ಮಾರಿಗೆಳೆಯ ನಾ ನೋಡದ ಹೊರತ.||//ಪಲ್ಲವಿ//
ಹೆಣ್ಣು:-ಅಗಲಿದ ಹಕ್ಕಿ.
ಮುರಿದು ಹೋದ ಚುಕ್ಕಿ.
ಹಳತದ ಗೆಳೆಯ.||
ಗಂಡು:-ದುಃಖ ತುಂಬಿ ಉಕ್ಕಿ.
ಗೂಡಇಲ್ದ ಹಕ್ಕಿ.
ಹೇಳ ಹ್ಯಾಂಗ ಇರತೈತಿ ಜ್ವಾಾಕಿ.||
ಹೆಣ್ಣು:-ಏನು ಉಳಿಯಲಿಲ್ಲ ಗೆಳೆಯ ಬಾಕಿ ರೆಕ್ಕೆ ಇಲ್ಲದ ಹಕ್ಕಿ.
ಇಲ್ಲತ್ತ ತಗಿತಾರ ಕೆದಕಿ.
ವಿಷ ಕಕ್ಕಿ ಉಳಸುದುಲ್ಲ ಅನತಾರ ನಕ್ಕಿ.||//ಚರಣ ೧//
ಹೆಣ್ಣು:-ಜೋಕಾಲಿ ಕಟ್ಟು ಅಗಸೀಯ ಮುಂದ.
ಮೈಮರಥ ಆಡ್ತಾನ ಬಂದ.||
ಗಂಡು:-ಕಟ್ಟುತನ ಜೋಕಾಲಿ.
ನೀ ಆಡತನಂದ್ರ ಬೇಕಾದ ಬರ್ಲಿ ಬಂದ್ರ.
ಬೇಕಾದ ಬರ್ಲಿ ಬಂದ್ರ.
ಹೆಣ್ಣು:-ನೀನಿಂತ ತೂಗಬೇಕು ಮಂದಿ ನಿಂತ ನೋಡುವಂಗ.
ಏರುವಂಗ ಪ್ರೀತಿಯ ಗುಂಗ.
ಸಾಯೋತನ ಇರುವಂಗ ನಿನ್ನ ಸಂಗ.||//ಚರಣ ೨//
ಗಂಡು:-ನೀವೊಂದು ಊರ. ನಾನೊಂದು ಊರ.
ಎಳೆಯುವುದು ಹೇಗೆ ಪ್ರೀತಿಯ ತೇರಾ.||
ಹೆಣ್ಣು:-ಬೆಂಕಿ ಸುರುಸತಾರ. ಒಡಲ ಉರುಸತಾರ.
ಹೇಳಿಕೇಳಿ ಕೊಲ್ಲುಸತಾರ.||
ಗಂಡು:-ಕಟ್ಟಿ ನಿಂತೈನಿ ಉಡದಾರ.
ನನಗಿಲ್ಲ ದರಕಾರ.
ದುಡ್ಡಿನೊಳಗ ಬಡವನಾದರೂ.
ಗೆಳತಿ ಪ್ರೀತಿ ಒಳಗ ನಾ ಸಹುಕಾರ.||//ಚರಣ ೩//
ಗಂಡು:-ಪಂಚಮಿಗೆ ಬರ್ತಾಳಂತ.
ನನಮಾರಿ ನೋಡಾಕಂತ.||
ನನ ಗೆಳೆಯ ಹೆಂಗದಿಯಂತ.
ಅಂತ್ಹೇಳಿ ಹುತ್ತಿಗೆ ಹಾಲ ಏರಿತಾಳಂತ.||
ಹೆಣ್ಣು:-ಭೇಟಿಯಾಗಿ ಒರಸಾಗಿಹೋತ.
ಮನಸಿಗೆ ತ್ರಾಸಾಗಿ ಹೋತ.
ಇರಲ್ಹೆಂಗೋ ನಾ ನಿನ್ನ ಮರೆತ.
ನಿನ್ನ ಮಾರಿಗೆಳೆಯ ನಾ ನೋಡದ ಹೊರತ.||