Photo Koda Vanda Nodaaka

ಹೆಣ್ಣು:-ಹೊತ್ತೆರಗೂಡದ ಹೋಗುದಗಟ್ಟಿ ಮಾಡ್ಯಾರೋ ಗಂಡನ ಮನೆಗಿ.||
ಪತ್ರ ನೀ ಬರೆದರ ಭರತೇನ ಊರ ಊರ ಊರ ಜಾತ್ರಿ ತೆರಿಗಿ.
ಗಂಡು:-ಏನಂತ ಪತ್ರ ಬರೆಯಲೇ ಗೆಳತಿ ನಿನ್ನ ಗಂಡನ ಊರಿಗಿ ||
ಪತ್ರ ಯಾರ ಬರದಾರ ಅಂದ್ರೇನು ಹೇಳ್ತಿ ಹೇಳ್ತಿ ಹೇಳ್ತಿ ಗಂಡನ ಮಣಿಯವರಿಗಿ.
ಹೆಣ್ಣು:-ಹೊತ್ತೆರಗೂಡದ ಹೋಗುದಗಟ್ಟಿ ಮಾಡ್ಯಾರೋ ಗಂಡನ ಮನೆಗಿ.
ಗಂಡು:-ಏನಂತ ಪತ್ರ ಬರೆಯಲೇ ಗೆಳತಿ ನಿನ್ನ ಗಂಡನ ಊರಿಗಿ.//ಪಲ್ಲವಿ//
ಗಂಡು:-ಬಂದಾಗ ಒಮ್ಮೆಹಿಂಗ ಕೂಡಿಕೊಂಡ.
ಏನರ ಮಾಡಿಕೊಂಡಿ ಎಡವಟ್ಟ.
ಹೆಣ್ಣು: ಎಳೆತನದ ಐತೋ ಇದು ಗೆಳೆತನ.
ಬಿಟ್ಟರೂ ಬಿಡಲಾಕ ಆದಿತೇನ.
ಗಂಡು:-ಕಮ್ಮಾನ ಬಾಳೆಕ ಕಲ್ಲ ಹಾಕೊಂಡ.
ಕಡೆತನಕ ಕಣ್ಣೀರು ಹಾಕೋದು ಗೆಳತಿ ಬ್ಯಾಡ ಬ್ಯಾಡ ಬ್ಯಾಡ ತಿಳುಕೊಂಡ ನೀ ನೋಡ.
ಹೆಣ್ಣು:-ಹೊತ್ತೆರಗೂಡದ ಹೋಗುದಗಟ್ಟಿ ಮಾಡ್ಯಾರೋ ಗಂಡನ ಮನೆಗಿ.||//ಚರಣ ೧//
ಗಂಡು:-ಹೇಳವರ ಮಾತ ನೀ ಕೇಳಲಾರದ.
ಮಾಡಿಕೊಂಡ ಕುಂತಿ ಒಣಕಾರ್ಬಾರ.
ಹೆಣ್ಣು:-ಎದುರಾ ಬದುರ ಒಗತನ ಆದವರದ ಬಾಳೈತಿ ಕಥೆ ಮಾಡಿ ಹೇಳಿದರ.
ಗಂಡು:-ಅಂದಾರ ಬೆಕ್ಕ ಕೂಡಿ ಕೆಡುಕಿಂತ
ಗೆಳೆತನ ಎಂಬುದು ಎಲೆ ಗೆಳತಿ ಕೆಟ್ಟ ಕೆಟ್ಟ ಕೆಟ್ಟ ಕೂಡಂತ ತಿರುದಾವ್ರ.
ಹೆಣ್ಣು:-ಹೊತ್ತೆರಗೂಡದ ಹೋಗುದಗಟ್ಟಿ ಮಾಡ್ಯಾರೋ ಗಂಡನ ಮನೆಗಿ.
ಗಂಡು:-ಏನಂತ ಪತ್ರ ಬರೆಯಲೇ ಗೆಳತಿ ನಿನ್ನ ಗಂಡನ ಊರಿಗಿ.//ಚರಣ ೨//
ಹೆಣ್ಣು:-ಫೋಟೋ ಕೊಡ ಒಂದ ನೀ ನನಗ.
ನೆನಪಾದಗೊಂಮ್ಮೆ ನೋಡಾಕ.
ಗಂಡು:-ಕಣ ತುಂಬಾ ಇಲ್ಲೇ ನೀ ನೋಡಿ ಹೋಗ ಕೊಡುದಿಲ್ಲ ನನ್ನ ಫೋಟೋ ವಯ್ಯಾಕ.
ಹೆಣ್ಣು:-ಪತ್ರ ಬರೆಯಾಕುವಲ್ಲೇ ಅಂತಿ.
ಫೋಟೋ ಕೊಡಕೂ ಇಲ್ಲ ಅಂತಿ ಗೆಳೆಯ ಗೆಳೆಯ ಗೆಳೆಯ ಬ್ಯಾಸತ್ತೇನ ಗೆಳೆತನಕ. //ಚರಣ ೨//
ಗಂಡು:-ಏನಂತ ಪತ್ರ ಬರೆಯಲೇ ಗೆಳತಿ ನಿನ್ನ ಗಂಡನ ಊರಿಗಿ ||
ಪತ್ರ ಯಾರ ಬರದಾರ ಅಂದ್ರೇನು ಹೇಳ್ತಿ ಹೇಳ್ತಿ ಹೇಳ್ತಿ ಗಂಡನ ಮಣಿಯವರಿಗಿ.
ಹೆಣ್ಣು:-ಹೊತ್ತೆರಗೂಡದ ಹೋಗುದಗಟ್ಟಿ ಮಾಡ್ಯಾರೋ ಗಂಡನ ಮನೆಗಿ.||
ಪತ್ರ ನೀ ಬರೆದರ ಭರತೇನ ಊರ ಊರ ಊರ ಜಾತ್ರಿ ತೆರಿಗಿ.
ಗಂಡು:-ಏನಂತ ಪತ್ರ ಬರೆಯಲೇ ಗೆಳತಿ ನಿನ್ನ ಗಂಡನ ಊರಿಗಿ.
ಹೆಣ್ಣು:-ಹೊತ್ತೆರಗೂಡದ ಹೋಗುದಗಟ್ಟಿ ಮಾಡ್ಯಾರೋ ಗಂಡನ ಮನೆಗಿ.