
Preeti Madiddu Iga Mariyodaytu

ಗಾಯಕಿ:-ಪ್ರೀತಿ ಮಾಡಿದ್ದು ಈಗ ಮರೆಯೋದಾಯ್ತು.
ಜಗದ ರೀತಿಗೆ ಅದು ಶರಣಾಯಿತು.
ಮರಣ ಮಗ್ಗಲಿಗೆ ಬಂದು ಈಗ ನಿಂತಿತು.
ಕೊರಳ ಮಾಂಗಲ್ಯ ಎಲ್ಲಿ ಮಾಯವಾಯಿತು.
ಗಾಯಕ:-ರೀತಿ ನೀತಿಯ ನೋಡಬ್ಯಾಡ ರಾಣಿ.
ಈ ಜಗದಾಗ ಆಗಬೇಕು ಜಾಣಿ.
ಈ ದೇಹದ ಜೀವ ಜ್ಯೋತಿ ಆಗನಿ.
ಏಳು ಜನುಮದ ಜೋಡಿ ಇರಬೇಕೆನಿ. //ಪಲ್ಲವಿ//
ಗಾಯಕ:-ಬಡತನದ ಹುಡುಗ ಸಿರಿತನದ ಹುಡುಗಿ.
ಮನೆತನದ ಮಾತು ಯಾಕಿಲ್ಲಿ.||
ನಮ್ಮ ಪ್ರೀತಿಗೆ ಸಿಡಿಲು ಬಡಿಯದಿರಲಿ.
ಬೂದಿಯಾಗಿದ್ದು ನಮಗೆ ಬೀಳದಿರಲಿ.
ಈ ದೇಹದ ಜೀವ ಜ್ಯೋತಿ ಆಗಣಿ.
ಏಳು ಜನುಮದಿ ಜೋಡಿ ಇರಬೇಕ ನೀ.
ಗಾಯಕಿ:-ಪ್ರೀತಿ ಮಾಡಿದ್ದು ಈಗ ಮರೆಯೋದಾಯ್ತು.
ಜಗದ ರೀತಿಗೆ ಅದು ಶರಣಾಯಿತು.
ಮರಣ ಮಗ್ಗಲಿಗೆ ಬಂದು ಈಗ ನಿಂತಿತು.
ಕೊರಳ ಮಾಂಗಲ್ಯ ಎಲ್ಲಿ ಮಾಯವಾಯಿತು.//ಚರಣ ೧//
ಹೆಣ್ಣು:-ಹೊಟ್ಟೆಕಿಚ್ಚಿನ ಮಂದಿ ಕಿಚ್ಚನ್ನು ಹಚ್ಚತಾರ.
ಕಿಂಚಿತ್ತು ಯೋಚಿಸ ಬ್ಯಾಡ ನೀ.||
ಬೆಂಕಿಯಲ್ಲಿ ಬಿದ್ದು ಬೆಂದು ಹೋಗೋಣ.
ನಮ್ಮ ಪ್ರೀತಿಯ ಹೆಸರು ಉಳಿಸೋಣ.
ಮರಣ ಮಗ್ಗಲಿಗೆ ಬಂದು ಈಗ ನಿಂತಿತು.
ಕೊರಳ ಮಾಂಗಲ್ಯ ಎಲ್ಲಿ ಮಾಯವಾಯಿತು.
ಗಾಯಕ:-ಬಡತನದ ಹುಡುಗ ಸಿರಿತನದ ಹುಡುಗಿ.
ಮನೆತನದ ಮಾತು ಯಾಕಿಲ್ಲಿ.||
ನಮ್ಮ ಪ್ರೀತಿಗೆ ಸಿಡಿಲು ಬಡಿಯದಿರಲಿ.
ಬೂದಿಯಾಗಿದ್ದು ನಮಗೆ ಬೀಳದಿರಲಿ.
ಈ ದೇಹದ ಜೀವ ಜ್ಯೋತಿ ಆಗಣಿ.
ಏಳು ಜನುಮದಿ ಜೋಡಿ ಇರಬೇಕ ನೀ.//ಚರಣ ೨//
ಗಂಡು:-ಲೈಲಾಗು ಮಜನೂ ನಿನಗಾಗಿ ನಾನು ಸಹಿಸಿಕೊಳ್ಳುವೆ ಜಗದ ದ್ರೋಹವನ್ನು.||
ಕಲ್ಲು ಹೂವಿನ ಮಳೆ ಸೂರಿಸತೈತಿ.
ಪ್ರೀತಿ ಗಿಡವನ್ನು ಬೆಳೆಸಿ ನಿಲ್ಲಿಸೈತಿ.
ಈ ದೇಹದ ಜೀವ ಜ್ಯೋತಿ ಆಗಣಿ.
ಏಳು ಜನುಮದಿ ಜೋಡಿ ಇರಬೇಕ ನೀ.
ಗಾಯಕಿ:-ಪ್ರೀತಿ ಮಾಡಿದ್ದು ಈಗ ಮರೆಯೋದಾಯ್ತು.
ಜಗದ ರೀತಿಗೆ ಅದು ಶರಣಾಯಿತು.
ಮರಣ ಮಗ್ಗಲಿಗೆ ಬಂದು ಈಗ ನಿಂತಿತು.
ಕೊರಳ ಮಾಂಗಲ್ಯ ಎಲ್ಲಿ ಮಾಯವಾಯಿತು.//ಚರಣ ೩//
ಗಾಯಕಿ: ಎಳೆತನದ ಪ್ರೀತಿ ಗೆಳೆತನದ ಪ್ರೀತಿ ಅಮರ ಎಂದಿಗೂ ಅದು ಆಗಲಿ.||
ಬಂದು ಬಳಗ ಈ ಲೋಕದ ಮಂದಿಗೆ.
ಬುದ್ಧಿ ಕಲಿಸಿ ಹೋಗೋಣ ಚಿರ ನಿದ್ದೆಗೆ.
ಮರಣ ಮಗ್ಗಲಿಗೆ ಬಂದು ಈಗ ನಿಂತಿತು.
ಕೊರಳ ಮಾಂಗಲ್ಯ ಎಲ್ಲಿ ಮಾಯವಾಯಿತು.
ಗಾಯಕ:-ರೀತಿ ನೀತಿಯ ನೋಡಬ್ಯಾಡ ರಾಣಿ.
ಈ ಜಗದಾಗ ಆಗಬೇಕು ಜಾಣಿ.
ಈ ದೇಹದ ಜೀವ ಜ್ಯೋತಿ ಆಗನಿ.
ಏಳು ಜನುಮದ ಜೋಡಿ ಇರಬೇಕೆನಿ. //ಚರಣ ೪//