
Preetiya Panati

ಗಂಡು:-ಪ್ರೀತಿಯ ಪಣತಿ ಆರಿಸಬ್ಯಾಡ ಏ ಗೆಳತಿ.||
ನನ್ನ ಲಗ್ನ ಆಗಾಕ ವಲ್ಲೆ ನೀ ಅಣತಿ.||
ಬ್ಯಾರೆದವನ ಆಗೇನ ಉಣತಿ.
ಹೆಣ್ಣು:-ಪಣಿತೈತಿ ಹಸಕಾ ಅದಕ್ಕಂತ ಬಿಟ್ಟೈತಿ ಬಿಸಕಾ.||
ನಂಬಿಕೆ ಅನ್ನುವಂತ ಏಣ್ಣಿಲ್ಲದ ಪಣತಿ.||
ಆಗತೈತಿ ಗಳಿಗ್ಯಾಗ ಮಸುಕಾ.
ಗಂಡು:-ಪ್ರೀತಿಯ ಪಣತಿ ಆರಿಸಬ್ಯಾಡ ಏ ಗೆಳತಿ.||//ಪಲ್ಲವಿ//
ಗಂಡು:-ನೀರಿಡದ ಮೋಜಾ ನೋಡಬ್ಯಾಡ ಈ ನನ್ನ ಜಿಂದಗಿ.
ಬಡವನ ದೋಣಿ ಮುಟ್ಟಿಸಬಾರ ಪ್ರೀತಿಲೇ ದಂಡಿಗಿ.||
ಕೈ ಕೊಡಬ್ಯಾಡ ಚಂಡಿಗಿ.
ಪ್ರೀತಿಯ ಪಣತಿ ಆರಿಸಬ್ಯಾಡ ಏ ಗೆಳತಿ.||//ಚರಣ ೧//
ಹೆಣ್ಣು:-ಸ್ವಾರ್ಥ ಎಂಬುದು ಇದರ ಬಿಡ್ತೀರಿ ಕಾಲಿಗಿ.
ಹದಾ ಮುಗಿದ ಮ್ಯಾಲ ಬದಲಿಸಿ ಬಿಡತ್ತಿರಿ ನಾಲಿಗಿ.||
ಹುಳಿ ಹಿಂಡಿ ಹಾಲಿಗಿ.
ಪಣಿತೈತಿ ಹಸಕಾ ಅದಕ್ಕಂತ ಬಿಟ್ಟೈತಿ ಬಿಸಕಾ.||//ಚರಣ ೨//
ಗಂಡು:-ಹೇಳಿದರು ಇಲ್ಲ ಅಂದಿ ಎಲ್ಲ ನಿನ್ನ ಪ್ರೀತಿಯ ಸಾಲ.
ವಲ್ಲಂದ ಹೇಳಿ ಬಡದಿಯಲ್ಲ ಬಡವನ ಮನಸಿಗೆ ಕೀಲ.||
ನಾ ಏರುವಂಗ ಶೂಲ.
ಪ್ರೀತಿಯ ಪಣತಿ ಆರಿಸಬ್ಯಾಡ ಏ ಗೆಳತಿ.||//ಚರಣ ೨//
ಹೆಣ್ಣು:-ತಾಯಿ ತಂದೆ ಒಪ್ಪಿದ ಹುಡುಗನ ಆಗುತ್ತೇನ ಲಗ್ನ.
ಅಕ್ಕಿಕಾಳ ಉಗದ ಹೋಗೋ ನೀ ಬಂದ ಮದವಿ ನಿಬ್ಬಣ.||
ನೀ ಮಾಡಬ್ಯಾಡ ಹಗಣ.//ಚರಣ ೩//
ಗಂಡು:-ಪ್ರೀತಿಯ ಪಣತಿ ಆರಿಸಬ್ಯಾಡ ಏ ಗೆಳತಿ.||
ನನ್ನ ಲಗ್ನ ಆಗಾಕ ವಲ್ಲೆ ನೀ ಅಣತಿ.||
ಬ್ಯಾರೆದವನ ಆಗೇನ ಉಣತಿ.
ಹೆಣ್ಣು:-ಪಣಿತೈತಿ ಹಸಕಾ ಅದಕ್ಕಂತ ಬಿಟ್ಟೈತಿ ಬಿಸಕಾ.||