top of page
IMG_7077.PNG

Salyaga Irata Inna

(ಗಂಡು:-ಹಕ್ಕಿಗೆ ಹಾರುದ. ಮೀನಿಗೆ ಈಜುದ.||


ಹೆಣ್ಣು:-ಚಂದಕಾನತಾನಂತ ಚಂದ್ರಮನ ತರಕಕ್ಕೈತೆನೋ ಗೆಳೆಯ.||

ಸೂರ್ಯನ ಹೊಟ್ಯಾಗ ಬೆಂಕಿ ಐತಂತ ಹತ್ರುಕ ಹೋಗಿ ಕಾಸುಕೊಳ್ಳಕ ಆಗ್ತೈತೇನೋ ಗೆಳೆಯ.

ಕಾಸುಕೊಳ್ಳಕ ಆಗ್ತೈತೇನೋ ಗೆಳೆಯ.)



ಗಂಡು:-ಚುಚ್ಚಿದಿ ಬಳಕಣ್ಣಾಗ. ಬಡದೆಲ್ಲ ಚೂರಿ ಬೆನ್ನಾಗ.||

ಕಣಿ ಕೇಳಿ ಪ್ರೀತಿ ಮಾಡುದುಲ್ಯಾರ ಗೆಳತಿ. ಇಟ್ಟು ಹೋಗಬ್ಯಾಡ ಮಣ್ಣಾಗ. 


ಹೆಣ್ಣು:-ಕನಿಕರ ಇಲ್ಲದ ಕಣ್ಣಾದಿ. ಹುಗುದರು ಹೋಗದ ಹುಣ್ಣಾದಿ.

ಬೇಡಿ ಬರಬೇಕು ಗೆಳೆಯ ಪ್ರೀತಿ ಮಾಡಲಾಕ ಸುಳ್ಳ ಸುಳ್ಳ ಸುಳ್ಳದ ಸನ್ನಾದಿ.


ಗಂಡು:-ಚುಚ್ಚಿದಿ ಬಳಕಣ್ಣಾಗ.


ಹೆಣ್ಣು:-ಓ...ಒ.. ಕನಿಕರ ಇಲ್ಲದ ಕಣ್ಣಾದಿ.//ಪಲ್ಲವಿ//


ಗಂಡು:-ನನ್ನ ನೋಡಿ ಗೆಳತಿ. ನಗತಿದ್ದಿ ಯಾಕ. ಹಬ್ಬ ಹರಿದಿನಕ ಉಣಸತಿದ್ದಿ ಯಾಕ.

ಹಳ್ಳದ ವಾರಿಯಾಗ ಕಳ್ಳಿಯ ಸಾಲಾಗ ಸಲಗಿಯಿಂದ ನನ್ನ ಕರೀತಿದ್ಯಾಕ. 


ಹೆಣ್ಣು:-ಸಣ್ಣಾಗ ಇರತಾನ ಸಲಗಿ ಕೆಡಿವೇತಿ ಗೋಳಗಿ. ಹುಚ್ಚ ಹಿಡಿಸೆಯಿತು ಹಬ್ಬದ ಹೋಳಿಗಿ.

ಮಸಿಚಲ್ಲ ಬ್ಯಾಡ ನೀ ಬಿಳಿ ಹಾಳಿಗೆ ಕೊಳ್ಳ ಕೊಡುವುದಿಲ್ಲ ನಿನ್ನ ತಾಳಿಗಿ.


ಗಂಡು:-ನನ್ನ ಮನಸ್ಸಿನ ಹಾಳಿ ಸೂಡ ಬಿಚ್ಚಿ ಬಿಸಾಡಿ ನಿಂತ ತೂರಿದೆಲ್ಲ ಗಾಳಿಗಿ.


ಹೆಣ್ಣು:-ಕನಿಕರ ಇಲ್ಲದ ಕಣ್ಣಾದಿ. ಹುಗುದರು ಹೋಗದ ಹುಣ್ಣಾದಿ.//ಚರಣ ೧//



ಗಂಡು:-ಪಂಚಮಿ ಹಬ್ಬಕ್ಕ. ಜೋಕಾಲಿ ಆಡಾಕ. ಓಣಿ ಬಿಟ್ಟು ಓಣಿಗ್ಯಾಕ ಬರತಿದ್ದಿ.

ಜೋಕಾಲಿ ಏರಿ ನಿಂತ ಗೆಳೆಯ ತೂಗು ಬಾ ಅಂತ. ಸನ್ನಿ ಮಾಡಿ ಯಾಕ ನಗತಿದ್ದಿ. 


ಹೆಣ್ಣು:-ಸತಾ ಮಾಡಿ ಕರದರ. ತೂಗಂತ ಹೇಳಿದರ. ತಪ್ಪಲ್ಲೂ ನಂದ ನೀ ತಿಳದರ. 

ಕರಿಕಟ್ಟಿ ಕಾಡಿದರ. ಅದನ ಇದನ ಬೇಡಿದರ. ಹೊಳ್ಳಿ ವೈಯೋ ಕೊಟ್ಟ ಚೂಡಿದಾರ.


ಗಂಡು:-ಬರಬ್ಯಾಡ ಸಿಟ್ಟಿಗಿ. ಬಲ ತುಂಬ ರಟ್ಟಿಗಿ. ಬಾಳೋಣ ಬಾರ ಒಟ್ಟಿಗಿ.


ಹೆಣ್ಣು:-ಕನಿಕರ ಇಲ್ಲದ ಕಣ್ಣಾದಿ. ಹುಗುದರು ಹೋಗದ ಹುಣ್ಣಾದಿ.//ಚರಣ ೨//


ಗಂಡು:-ಸಾಲ್ಯಾಗ  ಇರತ ಇನ್ನ ಪ್ರೀತಿ ಮಾಡೇನಿ ನಿನ್ನ. ತಿಳಕೊಂಡ ನೀನೇ ನನ್ನ ಕಣ್ಣ. ಹತ್ತಿ ಬಂದಾರ ಬೆನ್ನ. ತಿಳದ ನಾ ಮೆಚ್ಚಿದ ಹೆಣ್ಣ. ತಿನಸಬ್ಯಾಡ ಮೂರ್ ಹಾದಿಮಣ್ಣ.


ಹೆಣ್ಣು:-ಗೆಳೆತನಕ ಬ್ಯಾರೆ ಅರ್ಥ ಒಟ್ಟಕೊಡಬ್ಯಾಡೋ. ಗೆಳೆತನಕ ಕುಂದ ತರ ಬ್ಯಾಡೋ.

ನೆಲಕಲಾರದ ಚುಕ್ಕಿಗಿ ನೀ ಆಸೆ ಪಡಬ್ಯಾಡ. 

ಗೆಳೆತನ ಕಡಿತನ ಉಳದರ ಪಾಡ. 


ಗಂಡು:-ಹೊಣ್ಣಿದ್ದು ಬಡವನಾಗಿ. ಕಣ್ಣಿದ್ದು ಕುರುಡನಾಗಿ. ಸೇರಿದಂಗಾತು ಕಾಡಾ.//ಚರಣ ೩//


ಗಂಡು:-ಚುಚ್ಚಿದಿ ಬಳಕಣ್ಣಾಗ. ಬಡದೆಲ್ಲ ಚೂರಿ ಬೆನ್ನಾಗ.||

ಕಣಿ ಕೇಳಿ ಪ್ರೀತಿ ಮಾಡುದುಲ್ಯಾರ ಗೆಳತಿ. ಇಟ್ಟು ಹೋಗಬ್ಯಾಡ ಮಣ್ಣಾಗ. 


ಹೆಣ್ಣು:-ಕನಿಕರ ಇಲ್ಲದ ಕಣ್ಣಾದಿ. ಹುಗುದರು ಹೋಗದ ಹುಣ್ಣಾದಿ.

ಬೇಡಿ ಬರಬೇಕು ಗೆಳೆಯ ಪ್ರೀತಿ ಮಾಡಲಾಕ ಸುಳ್ಳ ಸುಳ್ಳ ಸುಳ್ಳದ ಸನ್ನಾದಿ.



ಗಂಡು:-ಚುಚ್ಚಿದಿ ಬಳಕಣ್ಣಾಗ.



ಹೆಣ್ಣು:-ಕನಿಕರ ಇಲ್ಲದ ಕಣ್ಣಾದಿ. ಹುಗುದರು ಹೋಗದ ಹುಣ್ಣಾದಿ.





bottom of page