top of page
IMG_7077.PNG

Sattaru Alabyada

ಗಂಡು:-ಸತ್ತರು ಅಳಬ್ಯಾಡ ಮಣ್ಣಿಗೂ ನೀ ಬರಬ್ಯಾಡ.||

ನಿನಗಿಲ್ಲ ನೋಡ ಅರಕಿ. 

ಮುರದಿಟ್ಟಿ ಬಡವನ ಭರಿಕಿ.

ಮನದಾಗ ಮುಳ್ಳಿನಂಗ ಅಳಿಕಿ.

ಹೊಡಿಸಿದಿ ಉಳಿಕಿ.

ಗಂಡು:-ಸತ್ತರು ಅಳಬ್ಯಾಡ ಮಣ್ಣಿಗೂ ನೀ ಬರಬ್ಯಾಡ.//ಪಲ್ಲವಿ//




ಮೊದಲು ಆಡಿ ಸರಸ. 

ಮಾಡಿದ್ಯಾಕ ವಿರಸ. 

ಮಾಡಿದರ ಮಾಡವಲ್ಲಿ ನೀ ನನಗ ಮೋಸ.||

ಸುಖ ನಿನಗಿರಲಿ ಇರಲಿ ದುಃಖ ನಂಗ ಬರಲಿ.

ನಿನ್ನ ಪಾಲಿನ ಕಷ್ಟ ದೇವರ ನಂಗ ಕೊಡಲಿ.

ಪ್ರೀತಿ ಪ್ಯಾಟಿಯಾಗ ಮಾರುವ ವಸ್ತು ಅನಕೊಂಡಿ. 

ಅರಬಿ ಹಿಂಡಿದಂಗ ಪ್ರೀತಿ ಕಳ್ಳ ನೀ ಹಿಂಡಿ.

ನಿನಗಿಲ್ಲ ನೋಡ ಅರಕಿ. 

ಮುರದಿಟ್ಟಿ ಬಡವನ ಭರಿಕಿ.

ಮನದಾಗ ಮುಳ್ಳಿನಂಗ ಅಳಿಕಿ.

ಹೊಡಿಸಿದಿ ಉಳಿಕಿ.

ಗಂಡು:-ಸತ್ತರು ಅಳಬ್ಯಾಡ ಮಣ್ಣಿಗೂ ನೀ ಬರಬ್ಯಾಡ.||//ಚರಣ ೧//





ಗಂಡು:-ಕಲಕಿ ಮಾತ ಕೇಳಿ. ದುಡುಕಿ ಹ್ಯಾದಿಯಲ್ಲ.

ಹ್ಯಾದರ ಹೋಗವಲ್ಲಿ ಸಿಟ್ಟು ನನಗಿಲ್ಲ.

ಯಾರದೋ ಮಾತ ಕೇಳಿ.ದುಡುಕಿ ಹ್ಯಾದಿಯಲ್ಲ.

ಹ್ಯಾದರ ಹೋಗವಲ್ಲಿ ಸಿಟ್ಟು ನನಗಿಲ್ಲ.

ನನಗ ಮಾಡಿದಂಗ ಯಾರಿಗೂ ಮಾಡಬ್ಯಾಡ. 

ಪ್ರೀತಿಯೊಳಗ ಚೆಲ್ಲಾಟ ನೀ ಆಡಬ್ಯಾಡ.

ಆಡಿಕೊಳ್ಳುವಂಗ ಮಂದಿ ನೋಡಿ ನಗುವಂಗ. 

ಮಾಡಿ ನಿನ ಸಂಗ. ಆಗೇನಿ ಹುಚ್ಚರಂಗ.//ಚರಣ ೨//



ಸತ್ತರು ಅಳಬ್ಯಾಡ ಮಣ್ಣಿಗೂ ನೀ ಬರಬ್ಯಾಡ.||

ನಿನಗಿಲ್ಲ ನೋಡ ಅರಕಿ. 

ಮುರದಿಟ್ಟಿ ಬಡವನ ಭರಿಕಿ.

ಮನದಾಗ ಮುಳ್ಳಿನಂಗ ಅಳಿಕಿ.

ಹೊಡಿಸಿದಿ ಉಳಿಕಿ.

ಗಂಡು:-ಸತ್ತರು ಅಳಬ್ಯಾಡ ಮಣ್ಣಿಗೂ ನೀ ಬರಬ್ಯಾಡ.||

bottom of page