top of page
IMG_7077.PNG

Sigabarada Sikkara Vammyara Hudugi

ಗಂಡು:-ಸಿಗಬಾರದ ಸಿಕ್ಕರ ಓಮ್ಯಾರ ಹುಡುಗಿ ಹಳ್ಳದ ದಂಡ್ಯಾಗ.||

ಮಬ್ಬ ಇಳಿಸಿ ನಿನಗಾಗ.||

ಮುಳಗಿಸಿ ಬಿಡತನ ನೀರಾಗ. 


ಹೆಣ್ಣು:-ಗೌಡ ಗೌಡ ಯಾವೂರ ಗೌಡ ಬಿಚ್ಚಬ್ಯಾಡ ಬಾಲ.||

ನೋಡಿ ನಕ್ಕರ ಕಿಲಕಿಲ ಮುರದ ಬಿಡತನ ದವಡಿಯ ಹಲ್ಲ. 


ಗಂಡು:-ಸಿಗಬಾರದ ಸಿಕ್ಕರ ಓಮ್ಯಾರ ಹುಡುಗಿ ಹಳ್ಳದ ದಂಡ್ಯಾಗ.

ಹೆಣ್ಣು:-ಗೌಡ ಗೌಡ ಕೆತ್ಯಾನ ಗೌಡ ಕುಟ್ಟಬ್ಯಾಡ ತೌಡ.//ಪಲ್ಲವಿ//


ಗಂಡು:-ಕಣ್ಣಿನ ಹುಬ್ಬ ಕುಣಿಸತಿಯಷ್ಟ ಏನೈತಿ ಮಜಕೂರ.

ಸಂಗಡಿಗರು:-ಏನೈತಿ ಮಜಕೂರ.

ಯಮಕೀಲೆ ಹಿಂಗ ಹೊಂಟರ ಹುಡುಗಿ ನಿನ್ಯಾರ ಬಿಡತ್ತಾರ. 

ಸಂಗಡಿಗರು:-ನಿನ್ಯಾರ ಬಿಡತ್ತಾರ. 

ಹೆಣ್ಣು:-ಕಡಗೋಲದಂಗ ಕಾಣತಿ ನೀನು ಮಾಡತೀನಿ ಬಡಿವಾರ 

ಸಂಗಡಿಗರು:-ಮಾಡತೀನಿ ಬಡಿವಾರ. 

ಹರಕ ಮುರುಕ ಮೀಸೆಯ ತಿರುವಿ ಸುಮ್ಮ ಹೋಗೋ ಜೋಕುಮಾರ. 


ಗಂಡು:-ಹಗರಂತ ತಿಳಿಯಬ್ಯಾಡ ಹುಡುಗಿ ನೀನು ನನ್ನ. 

ಬಾರಿ ಬಾರಿ ಪಿಗರಗಳನ್ನ ಪಳಗಿಸಿ ಬಿಟ್ಟಿನಿ ನಾನ. 


ಹೆಣ್ಣು,:-ಗರಡಿ ಮನೆಗೆ ಹೋಗುವ ಮೊದಲು ವ್ಯಾಯಮ ಮಾಡ ನೀನು.

ನಿನ್ನ ಶಕ್ತಿ ತೋರಿಸಿದಾಗ ಹೌದಂತೀನಿ ನಾನ. 


ಗಂಡು:-ಸಿಗಬಾರದ ಸಿಕ್ಕರ ಓಮ್ಯಾರ ಹುಡುಗಿ ಹಳ್ಳದ ದಂಡ್ಯಾಗ.

ಹೆಣ್ಣು:-ಗೌಡ ಗೌಡ ಕೆತ್ಯಾನ ಗೌಡ ಕುಟ್ಟಬ್ಯಾಡ ತೌಡ.

ಗಂಡು:-ಮಬ್ಬ ಇಳಿಸಿ ನಿನಗಾಗ.

ಮುಳಗಿಸಿ ಬಿಡತನ ನೀರಾಗ. 


ಹೆಣ್ಣು ಸಂಗಡಿಗರು:-ಗೌಡ ಗೌಡ ಕೆತ್ಯಾನ ಗೌಡ ಕುಟ್ಟಬ್ಯಾಡ ತೌಡ.||//ಚರಣ ೧//


ಹೆಣ್ಣು:-ಹುಡುಗ್ಯಾರ ಮ್ಯಾಲ ಮಾಡತಿ ನೀನು. ಹಗರಿಲ್ಲ ಮನಸ. 

ಸಂಗಡಿಗರು::-ಹಗರಿಲ್ಲ ಮನಸ.

ನನ್ನ ಸನಿಕ ಬಂದರ ನಿನಗ ತಿನಿಸೇನೊ ನಾ ಮೆಣಸ. 

ಗಂಡು:-ಕಬ್ಬಿನ ಗಳದಂಗ ಇದ್ದರ ನಾನು ಅದಿನಿ ಬಾಳ ಬಿರುಸ.

ಸಂಗಡಿಗರು:-ಅದಿನಿ ಬಾಳ ಬಿರುಸ. 

ನನ್ನನು ನೆನೆಸಿ ಕಾನತಾರು ಹುಡಿಗ್ಯಾರು ಬಾಳ ಕನಸ.

ಸಂಘಡಿಗರು:-ಹುಡಿಗ್ಯಾರು ಬಾಳ ಕನಸ.

ಹೆಣ್ಣು:-ಹಣಕ್ಕಿ ಹಾಕಿ ನೋಡತಿ ಯಾಕ ನೀನು ನನ್ನ ಹುಚ್ಚ. 

ಆಗದ ಮಾತು ಹೇಳ್ತಿ ಯಾಕೋ ಮಣಿಯತ್ತ. 

ಗಂಡು:-ಕಡಿಮಣಿ ಕಲ್ಲಿನ ಕೆಳ ನೋಡ ಹುಡುಗಿ ನನ್ನ ಹಿಮ್ಮತ್ತ. 

ಮೂಲಿ ಮಣಿ ಮಲ್ಲಿನ ಕೇಳ ನೋಡ್ಯಾಳ ಗರದಿ ಗಮ್ಮತ್ತ. 

ಹೆಣ್ಣು:-ಗೌಡ ಗೌಡ ಯಾವೂರ ಗೌಡ ಬಿಚ್ಚಬ್ಯಾಡ ಬಾಲ.

ಗಂಡು:-ಸಿಗಬಾರದ ಸಿಕ್ಕರ ಓಮ್ಯಾರ ಹುಡುಗಿ ಹಳ್ಳದ ದಂಡ್ಯಾಗ.

ಹೆಣ್ಣು:-ನೋಡಿ ನಕ್ಕರ ಕಿಲಕಿಲ ಮುರದ ಬಿಡತನ ದವಡಿಯ ಹಲ್ಲ. 


ಹೆಣ್ಣು ಸಂಗಡಿಗರು:-ಗೌಡ ಗೌಡ ಕೆತ್ಯಾನ ಗೌಡ ಕುಟ್ಟಬ್ಯಾಡ ತೌಡ.||//ಚರಣ ೨//



ಗಂಡು:-ಮುಂದಿನ ವಾರದಾಗ ಹಬ್ಬ ಐತಿ.

 ಅವಾಗ ನೀನು ಸಿಕ್ಕ ಸಿಗತಿ. 

ಎಷ್ಟಂತ ತಡದ ತಡಿಯತಿ.

ಬೆನ್ನತ್ತಿ ಓಡೋಡಿ ನೀ ಬರತಿ. 

ಹೆಣ್ಣು:-ಹಲ್ಲ ಕ್ಕಿಸೀಯುತ ಯಾಕ ಕಾಡತಿ.

ಹಗಲಗಣಸ ನೀ ಕಾಣತಿ. 

ಮಾಡಬ್ಯಾಡ ನೀ ಒಣಕೆಂತಿ. 

ಹಚ್ಚಿ ಬಿಡತೇನ ನನ ಚಿಂತಿ. 


ಗಂಡು:-ಸಿಗಬಾರದ ಸಿಕ್ಕರ ಓಮ್ಯಾರ ಹುಡುಗಿ ಹಳ್ಳದ ದಂಡ್ಯಾಗ.||

ಮಬ್ಬ ಇಳಿಸಿ ನಿನಗಾಗ.||

ಮುಳಗಿಸಿ ಬಿಡತನ ನೀರಾಗ. 

ಹೆಣ್ಣು :-ಗೌಡ ಗೌಡ ಕೆತ್ಯಾನ ಗೌಡ ಕುಟ್ಟಬ್ಯಾಡ ತೌಡ.||






bottom of page