top of page
IMG_7077.PNG

Sitta Aagabyad Ni

ಹೆಣ್ಣು:-ಸಿಟ್ಟ... ಆಗಬ್ಯಾಡ ನೀ....

ಬಿಟ್ಟ ...ಹೋಗಬ್ಯಾಡ ನೀ. ನನ್ನ ನಿನ್ನ ಪ್ರೀತಿ ಸುದ್ದಿ ಆಗೈತಿಲ್ಲಿ. ಹೇಳೋ ಹಳ್ಳಿಗೆಂದು ಹೊಳ್ಳಿ ಬರದಿ||


ಗಂಡು:-ತಾಳಿ......... ತೆಗಿಬ್ಯಾಡ ನೀ. ರೀತಿ ಬಿಡಬ್ಯಾಡ ನೀ. ತಾಳಿ ಇದ್ರು ಇಂಥಾ ಚಾಳಿ ಬಿಡಬೇಕ ನಿ.. ನೀ ಪ್ರೀತಿ ಮಾಡಿ ಸುಮ್ಮ ಅಳತಿ||//ಪಲ್ಲವಿ//



ಗಂಡು:-ಆಗೋದ ಆಗೈತಿ ಗೆಳತಿ... ಇನ್ಯಾಕ ಆ ಪ್ರೀತಿ ಸುದ್ದಿ... ಆವತ್ತು ಮನಸ್ಯಾಕ ಕದ್ದಿ... ಗಂಡನ ತೋಳಾಗ ಬಿದ್ದಿ....


ಹೆಣ್ಣು:-ಹೆಂಗ ಮಾಡಲಿ ಹೆಂಗ ಬಾಳಲಿ||

ಬರಬೇಕ ನೀ ಬಾಳಿನ್ಯಾಗ.. ಈ ಹೂವು ಬಾಡುದರಾಗ. ಈ ತಾಳಿಗೆ ಒಡೆಯನೀನಾಗ...


ಗಂಡು:-ತಾಳಿ......... ತೆಗಿಬ್ಯಾಡ ನೀ. ರೀತಿ ಬಿಡಬ್ಯಾಡ ನೀ. ತಾಳಿ ಇದ್ರು ಇಂಥಾ ಚಾಳಿ ಬಿಡಬೇಕ ನಿ.. ನೀ ಪ್ರೀತಿ ಮಾಡಿ ಸುಮ್ಮ ಅಳತಿ|| //ಚರಣ ೧//


ಗಂಡು:-ಮದವಿಯ ಆಗುವ ಮೊದಲ ಯಾಕ ನೀ ಸುದ್ದಿ ಹೇಳಲಿಲ್ಲ...


ಹೆಣ್ಣು:-ಪ್ರೀತಿಯ ಸುದ್ದಿ ಹೆಳ್ಯಾರ... ಹುಡುಗಿಲೇ ಮದವಿ ಮಾಡ್ಯಾರ...


ಗಂಡು:-ಅಳಬ್ಯಾಡ ನೀ 


ಹೆಣ್ಣು:-ತಡಿಬ್ಯಾಡ ನೀ


ಗಂಡು:-ಅಳಬ್ಯಾಡ ನೀ 


ಹೆಣ್ಣು:-ತಡಿಬ್ಯಾಡ ನೀ. ಈ ಜೀವ ಉಳಿದುಲ್ಲ ನೋಡ... ನನ್ನನ್ನು ನೀ ಬಂದ ಕೂಡ..


ಗಂಡು:-ಹುಚ್ಚರಂಗ ಮಾಡಬ್ಯಾಡ ನೋಡ.


ಹೆಣ್ಣು:-ಸಿಟ್ಟ ಆಗಬ್ಯಾಡ ನೀ....

ಬಿಟ್ಟ ಹೋಗಬ್ಯಾಡ ನೀ. ನನ್ನ ನಿನ್ನ ಪ್ರೀತಿ ಸುದ್ದಿ ಆಗೈತಿಲ್ಲಿ. ಹೇಳೋ ಹಳ್ಳಿಗೆಂದು ಹೊಳ್ಳಿ ಬರದಿ||//ಚರಣ ೨//


ಗಂಡು:-ನನ್ನೇನ ಮಾಡತಿ ಬಿಡ ನೀ.. ಗಂಡಗ ಸುಖವನ್ನು ಕೊಡ ನೀ...


ಹೆಣ್ಣು:-ಹಿರಿಯರು ಒಪ್ಪಿದ ಗಂಡ.. ದಿವಸ ಕುಡಿತದ ಹೆಂಡ...


ಗಂಡು:-ಎಲ್ಲಾ ಮರತರ ಸುಖ ಸಾಗರ||


ಹೆಣ್ಣು:-ಒತ್ತಾಯದಿಂದ ಮುರಿದಾರ... ಇಬ್ಬರ ಮನಸ್ಸನ್ನು ಇವರ...


ಗಂಡು:-ಹಿರಿಯರು ಮಾಡ್ಯಾರ ದೂರ..//ಚರಣ ೩//



ಹೆಣ್ಣು:-ಸಿಟ್ಟ ಆಗಬ್ಯಾಡ ನೀ....

ಬಿಟ್ಟ ಹೋಗಬ್ಯಾಡ ನೀ. ನನ್ನ ನಿನ್ನ ಪ್ರೀತಿ ಸುದ್ದಿ ಆಗೈತಿಲ್ಲಿ. ಹೇಳೋ ಹಳ್ಳಿಗೆಂದು ಹೊಳ್ಳಿ ಬರದಿ||



ಗಂಡು:-ತಾಳಿ......... ತೆಗಿಬ್ಯಾಡ ನೀ. ರೀತಿ ಬಿಡಬ್ಯಾಡ ನೀ. ತಾಳಿ ಇದ್ರು ಇಂಥಾ ಚಾಳಿ ಬಿಡಬೇಕ ನಿ.. ನೀ ಪ್ರೀತಿ ಮಾಡಿ ಸುಮ್ಮ ಅಳತಿ||


ಹೆಣ್ಣು:-ಹೇಳೋ ಹಳ್ಳಿಗೆಂದು ಹೊಳ್ಳಿ ಬರದಿ.


ಗಂಡು:-ಪ್ರೀತಿ ಮಾಡಿ ಸುಮ್ಮ ಅಳತಿ





bottom of page