top of page
IMG_7077.PNG

Tangi Nadi Tangi

(ಗಾಯಕ:-ಸಿದ್ದಲಿಂಗರ ಕಮರಿ ಮಠವು. ಯಲ್ಲಾಲಿಂಗರ ಮುಕ್ತಿ ಮಠವು. ಸಿದ್ದರಾಮರ ಅನುಭವ ಮಠವು. ಮುರುಗರಾಜರ ಕೈಲಾಸ ಮಠವು. ಬ್ರಹ್ಮನ ಬೀಡಿದು ಭಕ್ತಿಯಿಂದ ಬಾ. ಹರಿಯವೈಕುಂಠ ವಿದು ವಂದಿಸಿ ಬಾ. ಶಿವನ ಕೈಲಾಸ ವಿದು ಕೈಮುಗಿದು ಬಾ ,ಕೈ ಮುಗಿದು ಬಾ.)



ಗಾಯಕ:-ತಂಗಿ ನಡಿ ತಂಗಿ ಗುರು ಮುರುಗೇಂದ್ರನ ಮಠಕ.

ತಂಗಿ ನಡಿ ತಂಗಿ ಆ ಗುರುವಿನ ದರುಶಣಕ .

ತಂಗಿ ನಡಿ ತಂಗಿ ಗುರು ಮುರುಗೇಂದ್ರನ ಮಠಕ.

ತಂಗಿ ನಡಿ ತಂಗಿ ಸಿದ್ದರಾಮನ ದರುಶಣಕ. 

ಎಳ್ಳು ಸಿದ್ದಲಿಂಗ ಬೆಲ್ಲ ಗುರು ಯಲ್ಲಾಲಿಂಗ.

ಸಿಹಿ ಸಿದ್ದರಾಮ ಮುಗಳಕೋಡ ಮುಕ್ತಿ ಧಾಮ. 

ಎಳ್ಳು ಬೆಲ್ಲ ತಿನ್ನಬಾರ ಕೊಡತಾಣ ಮುರುಗೇಂದ್ರ.

ಗುರು ನೀನೇ ಅಂದರ ಬಾಳೆಲ್ಲ ಬಂಗಾರ. 


ಸಂಗಡಿಗರು:-ತಂಗಿ ನಡಿ ತಂಗಿ ಗುರು ಮುರುಗೇಂದ್ರನ ಮಠಕ.

ತಂಗಿ ನಡಿ ತಂಗಿ ಸಿದ್ದರಾಮನ ದರುಶಣಕ. //ಪಲ್ಲವಿ//



 ಗಾಯಕ:-ಬರಬಾರದ ಬಂದ್ಯವ್ವ ಕಡಿಜನ್ಮ ಕಳೆಯುವುದಕ. ಬಾಯಿ ಬಡದು ಗಳಿಸಿದ ಗಂಟಲ್ಲ ಬಿಟ್ಟು ಹೋಗಾಕ. ||

ಹೋಗುದರಾಗೊಮ್ಮೆ ಶರಣಾಗಿ ನೋಡವ್ವ ಗುರುವಿನ ಪಾದಕ. 

ಪುಣ್ಯದ ಬುತ್ತಿಯ ಕಟ್ಟ ಗುರುವಿಗೆ ನೀಡುವುದಕ. 

ಮುರುಗೇಂದ್ರ ಕುಂತಾನ ತಂಗಿ ಭಕ್ತರನ್ನು ಕಾಯುವುದಕ.

ತಂಗಿ ನಡಿ ತಂಗಿ ಗುರು ಮುರುಗೇಂದ್ರನ ಮಠಕ.

ತಂಗಿ ನಡಿ ತಂಗಿ ಸಿದ್ದರಾಮನ ದರುಶಣಕ. 



ಸಂಗಡಿಗರು:-ತಂಗಿ ನಡಿ ತಂಗಿ ಗುರು ಮುರುಗೇಂದ್ರನ ಮಠಕ.

ತಂಗಿ ನಡಿ ತಂಗಿ ಯಲ್ಲಾಲಿಂಗರ ದರುಶಣಕ. //ಚರಣ ೧//



ಗಾಯಕ:-ಮಣಿ ಮ್ಯಾಲ ಮಣಿಯ ಕಟ್ಟಿ ಕುಂತಿ ಎತ್ತರಕ. 

ಹುಚ್ಚಾಗಿ ಮೆರೆದರ ತಂಗಿ ತರತಾನ ಎಚ್ಚರಕ.||

ಹೊಳ್ವಳ್ಳಿ ಬರುದಿಲ್ಲ ಈ ಜನ್ಮ ತಂಗ್ಯವ್ವ ಬೀಳ್ಬ್ಯಾಡ ಮೋಹಕ. 

ಜಗದ ಮಂದಿ ನಡೆದಾರವ್ವ ಮುಗಳಕೋಡ ಕ್ಷೇತ್ರಕ್ಕ. 

ನರಜನ್ಮ ಪಾವನಗೈದು ಮುಕ್ತಿಯ ಪಡಿಯಾಕ. 

ತಂಗಿ ನಡಿ ತಂಗಿ ಗುರು ಮುರುಗೇಂದ್ರನ ಮಠಕ.

ತಂಗಿ ನಡಿ ತಂಗಿ ಸಿದ್ದರಾಮನ ದರುಶಣಕ. 



ಸಂಗಡಿಗರು:-ತಂಗಿ ನಡಿ ತಂಗಿ ಗುರು ಮುರುಗೇಂದ್ರನ ಮಠಕ.

ತಂಗಿ ನಡಿ ತಂಗಿ ಯಲ್ಲಾಲಿಂಗರ ದರುಶಣಕ. //ಚರಣ ೨//



ಗಾಯಕ:-ಜಾತೀಯ ಜಂಜಾಟ ಕಳೆದು ಭಾರವ್ವ. 

ಮತಿಹೀನ ಮಂದಿಯ ಮಾತಿಗೆ ಮಳ್ಳಾಗ ಬ್ಯಾಡವ್ವ.||

ಮೈ ಮರೆತು ಕುಂತಿದಿ ಹುಚ್ಚರ ಸಂತ್ಯಾಗ ಎಚ್ಚರ ಇರಲ್ಲವ. 

ಇರುಳು ಕಂಡ ಬಾವಿಯೊಳಗೆ ಹಗಲೇ ಬೀಳಬ್ಯಾಡವ್ವ. ಕೂಡಿ ಜೋಡ ನಡಿಯವ್ವ ಗುರುಕಾಯ ತಾನವ್ವ. 

ತಂಗಿ ನಡಿ ತಂಗಿ ಗುರು ಮುರುಗೇಂದ್ರನ ಮಠಕ.

ತಂಗಿ ನಡಿ ತಂಗಿ ಸಿದ್ದರಾಮನ ದರುಶಣಕ. 

ತಂಗಿ ನಡಿ ತಂಗಿ ಯಲ್ಲಾಲಿಂಗರ ದರುಶಣಕ.

ತಂಗಿ ನಡಿ ತಂಗಿ ಗುರು ಮುರುಗೇಂದ್ರನ ಮಠಕ.

ಎಳ್ಳು ಸಿದ್ದಲಿಂಗ ಬೆಲ್ಲ ಗುರು ಯಲ್ಲಾಲಿಂಗ.

ಸಿಹಿ ಸಿದ್ದರಾಮ ಮುಗಳಕೋಡ ಮುಕ್ತಿ ಧಾಮ. 

ಎಳ್ಳು ಬೆಲ್ಲ ತಿನ್ನಬಾರ ಕೊಡತಾಣ ಮುರುಗೇಂದ್ರ.

ಗುರು ನೀನೇ ಅಂದರ ಬಾಳೆಲ್ಲ ಬಂಗಾರ. 



ಸಂಗಡಿಗರು:-ತಂಗಿ ನಡಿ ತಂಗಿ ಗುರು ಮುರುಗೇಂದ್ರನ ಮಠಕ.

ತಂಗಿ ನಡಿ ತಂಗಿ ಸಿದ್ದರಾಮರ ದರುಶಣಕ.|| //ಚರಣ ೩//




bottom of page