top of page
IMG_7077.PNG

Terigi Harisi Karika

ಹೆಣ್ಣು:-ತೇರಿಗಿ ಹಾರಸಿ ಕಾರಿಕಾ.||

ಬರದಿಟ್ಟೀನಿ ಬರದಿಟ್ಟೀನಿ ಬರದಿಟ್ಟೀನಿ ಕೂಡಿದ ತಾರಿಕಾ. 

ಗಂಡು:-ಹಳಿ ನೆನಪ ಕೆದಕಿ ತಗಿಯತಿದಿ ಯದಕಾ.||

ಬರದಿಲ್ಲೆನ ಬರದಿಲ್ಲೆನ ಬರದಿಲ್ಲೆನ ಅಗಲಿದ ತಾರಿಕಾ.

ಹೆಣ್ಣು:-ತೇರಿಗಿ ಹಾರಸಿ ಕಾರಿಕಾ.

ಗಂಡು:-ಹಳಿ ನೆನಪ ಕೆದಕಿ ತಗಿಯತಿದಿ ಯದಕಾ.//ಪಲ್ಲವಿ//

ಹೆಣ್ಣು:-ಹಾತ್ವರದ ನಾ ಬಂದ ಮಾರಿಯ ನೋಡಿದರ.||

ಅಡರಾಸಿ ಅಕ್ಕರೆಇಂದ ಅನುವ ತನುವ ಕೇಳಿದರ.||

ಬಂದೈದಿ ಅಂತಿ ಚಿಂತಿ ಹಚ್ಚಾಕ.||

ಬರದಿಟ್ಟೀನಿ ಬರದಿಟ್ಟೀನಿ ಬರದಿಟ್ಟೀನಿ ಕೂಡಿದ ತಾರಿಕಾ.

ಹೆಣ್ಣು:-ತೇರಿಗಿ ಹಾರಸಿ ಕಾರಿಕಾ.

ಗಂಡು:-ಹಳಿ ನೆನಪ ಕೆದಕಿ ತಗಿಯತಿದಿ ಯದಕಾ.//ಚರಣ ೧// 

ಗಂಡು:-ಬದುಕ್ಯಾನಂತೋ ಸತ್ತಾನಂತೋ ನೋಡಾಕ ಬಂದೇನ.||

ಕೈಯಾರೆ ಕಡ್ಡಿ ಕೊರದ ಆರ್ಸಕ ನಿಂತೇನ.||

ಸಿಬಿಗಿ ಹಾರಿಸಿ ಹೋಗ ಕಾರಿಕಾ.||

ಬರದಿಲ್ಲೆನ ಬರದಿಲ್ಲೆನ ಬರದಿಲ್ಲೆನ ಅಗಲಿದ ತಾರಿಕಾ.

ಹೆಣ್ಣು:-ತೇರಿಗಿ ಹಾರಸಿ ಕಾರಿಕಾ.||//ಚರಣ ೨//

ಹೆಣ್ಣು:-ವರ್ಷ ತುಂಬುದರಾಗ ಗೆಳೆಯ ತೊಟ್ಟಿಲ ಕಟ್ಟಿ ತೂಗಣಿ.||

ಹಟಕ ಬಿದ್ದ ಹುಟ್ಟಿದ ಕೂಸಿಗೆ ನಿನ್ನ ಹೆಸರ ಇಟ್ಟೀನಿ.||

ನಿನ್ನ ನೆನಪ ಹೊಡೆಯಲೆಂಗ ಕಡಿತನಕ.||

ಬರದಿಟ್ಟೀನಿ ಬರದಿಟ್ಟೀನಿ ಬರದಿಟ್ಟೀನಿ ಕೂಡಿದ ತಾರಿಕಾ. 

 ಗಂಡು:-ಹಳಿ ನೆನಪ ಕೆದಕಿ ತಗಿಯತಿದಿ ಯದಕಾ.||//ಚರಣ ೩//

ಗಂಡು:-ಹೋದ ವರುಷ ಜಾತ್ರೆಯಾಗ ಗೆಳತಿ ನನ್ನ ನೆದರಾಗ.||

ಈ ವರ್ಷ ಬಂದಿ ಬಗಲಾಗೊಂದು ಕೂಸಿನ ಎತ್ತುಕೊಂಡ ಎದುರಾಗ.||

ಹುಚ್ಚನ ಮಾಡಿ ಹತ್ತಿದೇನ ಬಾಳೆಕ.||

ಬರದಿಲ್ಲೆನ ಬರದಿಲ್ಲೆನ ಬರದಿಲ್ಲೆನ ಅಗಲಿದ ತಾರಿಕಾ.//ಚರಣ ೪//

ಹೆಣ್ಣು:-ತೇರಿಗಿ ಹಾರಸಿ ಕಾರಿಕಾ.||

ಬರದಿಟ್ಟೀನಿ ಬರದಿಟ್ಟೀನಿ ಬರದಿಟ್ಟೀನಿ ಕೂಡಿದ ತಾರಿಕಾ. 

ಗಂಡು:-ಹಳಿ ನೆನಪ ಕೆದಕಿ ತಗಿಯತಿದಿ ಯದಕಾ.||

ಬರದಿಲ್ಲೆನ ಬರದಿಲ್ಲೆನ ಬರದಿಲ್ಲೆನ ಅಗಲಿದ ತಾರಿಕಾ.

bottom of page